ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ನಿರ್ಮಾಣದ ಉಪ ಸಮಿತಿ ರಚನೆ: ಅಧ್ಯಕ್ಷರು ರೂಪರಾಣಿ ರಾಯಚೂರು ಹೇಳಿಕೆ.

ಗಂಗಾವತಿ: ಆರ್ಯ ವೈಶ್ಯ ಸಮಾಜ ಉದ್ದೇಸಿತ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಉಪ ಸಮಿತಿಯನ್ನು ರಚಿಸಲಾಗಿದ್ದು. ದೇವಸ್ಥಾನ ಸಮಿತಿಯ ಅಧ್ಯಕ್ಷರಾಗಿ ಜಿ ಸುರೇಶ ಶ್ರೇಷ್ಠಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆರ್ ಮಾರುತಿ ಪ್ರಸಾದ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಾಜದ ಅಧ್ಯಕ್ಷ ರೂಪ ರಾಣಿ ಲಕ್ಷ್ಮಣ ರಾಯಚೂರು.ಪ್ರಧಾನ ಕಾರ್ಯದರ್ಶಿ ಈಶ್ವರ ಶ್ರೇಷ್ಠಿ ಹೇಳಿದರು.

ಅವರು ಸಮಾಜದ ಕಾರ್ಯಾಲಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಜಯನಗರ ರಸ್ತೆ ಎಂ ಎನ್ ಎಂ ಶಾಲೆಯ ಬಳಿಯಲ್ಲಿರುವ ನಿವೇಶನದಲ್ಲಿ ಈಗಾಗಲೇ ಶಂಕುಸ್ಥಾಪನೆಯನ್ನು ನೆರವೇರಿಸಲಾಗಿದ್ದು ದೇವಸ್ಥಾನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೆಲಸ ಕಾರ್ಯಗಳು ಆರಂಭಿಸಲಾಗಿದ್ದು ದೇವಸ್ಥಾನ ನಿರ್ಮಾಣ ಸಂಪೂರ್ಣ ಹೊಣೆಗಾರಿಕೆಯನ್ನು ಉಪ ಸಮಿತಿಯ ತಂಡಕ್ಕೆ ವಹಿಸಲಾಗಿದೆ ಎಂದು ಹೇಳಿದರು.ಸಮಾಜದ ಪ್ರಧಾನ ಕಾರ್ಯದರ್ಶಿ ಈಶ್ವರ ಶ್ರೇಷ್ಠಿ ಮಾತನಾಡಿ ಬಹು ಕೋಟಿ ವೆಚ್ಚದ ದೇವಸ್ಥಾನದ ನಿರ್ಮಾಣವಾಗಲಿದ್ದು ವಿನ್ಯಾಸ ವಾಸ್ತು ಹಾಗೂ ಅಮ್ಮನವರ ಮೂರ್ತಿ ನಿರ್ಮಾಣ ಸೇರಿದಂತೆ ಉಪ ಸಮಿತಿಗೆ ಜವಾಬ್ದಾರಿಯನ್ನು ವಹಿಸಲಾಗಿದ್ದು ಸಮಾಜದ ಎಲ್ಲಾ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಪ್ರವೃತ್ತರಾಗುವಂತೆ ಹೇಳಿದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಜಿ ಸುರೇಶ ಶ್ರೇಷ್ಠಿ ಮಾತನಾಡಿ ತಮಗೆ ನೀಡಿದ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಉಪ ಸಮಿತಿಯ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಕಾರ್ಯ ನಿರ್ವಹಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಉಪ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್ ಮಾರುತಿ ಪ್ರಸಾದ. ಲಕ್ಷ್ಮೀ ನಾರಾಯಣ. ಚಂದ್ರಶೇಖರ. ವಾಸುದೇವ ಭಂಡಾರಿ. ಪಾಣಘಂಟಿ ಪ್ರಸಾದ.ಅರಕೇರಿ ಗಂಗಾಧರ. ಶ್ರೀನಿವಾಸ ಸಿ ಎಚ್. ಗೌತಮ್ ಸಿರಿಗೇರಿ. ರಾಮಾಂಜನೇಯ ಮದ್ದಿಕೆರೆ. ಉಪ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

