ಜಗತ್ತಿನಲ್ಲಿ ಎಲ್ಲರಿಗೂ ಮಾನವ ಹಕ್ಕುಗಳ ಜಾಗೃತಿ ಮೂಡಿಸುವುದು ಎಲ್ಲರ ಕರ್ತವ್ಯ-ಪ್ರೊ. ಕರಿಗೂಳಿ..

ಜಗತ್ತಿನಲ್ಲಿ ಎಲ್ಲರಿಗೂ ಮಾನವ ಹಕ್ಕುಗಳ ಜಾಗೃತಿ ಮೂಡಿಸುವುದು ಎಲ್ಲರ ಕರ್ತವ್ಯ-ಪ್ರೊ. ಕರಿಗೂಳಿ..


ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ದಿನಾಂಕ :10 ನೇ ಡಿಸೆಂಬರ್ 2025 ರಂದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನ ವನ್ನು ಆಚರಿಸಲಾಯಿತು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯಲ್ಲಿ ಡಾ. ಶಶಿಕುಮಾರ ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಮಹತ್ವ ಮತ್ತು ಅದರ ಇತಿಹಾಸ ವನ್ನು ವಿವರಿಸಿದರು ಹಾಗೂ ಮಾನವ ಹಕ್ಕುಗಳ ಪ್ರತಿಜ್ಞಾ ವಿಧಿ ಯನ್ನು ವಿದ್ಯಾರ್ಥಿಗಳಿಗೆ ಭೋಧಿಸಿದರು. ನಂತರ ಸಹಪ್ರಾಧ್ಯಾಪಕರಾದ
ಡಾ.ಸರ್ಫರಾಜ್ ಅಹ್ಮದ್ ರವರು ಅನಗತ್ಯವಾಗಿ ಭಾಷೆ,ಲಿಂಗ, ಜಾತಿ,ಧರ್ಮವನ್ನಾಧರಿಸಿ ಮಾನವರ ಹಕ್ಕುಗಳಿಗೆ ತೊಂದರೆ ಕೊಡದೇ ಮನುಷ್ಯ ಮನುಷ್ಯನಾಗಿ ಬಾಳುವುದನ್ನ ಕಲಿಯಬೇಕು ಎಂದರು.


ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಕರಿಗೂಳಿಯವರು ಭೂಮಿಯ ಮೇಲೆ ಜನಿಸಿದ ಮನುಷ್ಯ ಉಳಿದವರನ್ನು ಮನುಷ್ಯರಂತೆ ಕಾಣುವ ಗುಣ ಬೆಳೆಸಿಕೊಳ್ಳುವುದರ ಜೊತೆಜೊತೆಗೆ ಇತರೆ ಜೀವಿಗಳಿಂದಲೂ ಮಾನವೀಯ ಗುಣಗಳನ್ನು ಕಳೆಯುವಷ್ಟು ಪ್ರಬುದ್ಧನಾಗಬೇಕು ಎಂದರು. ತಾನು ಒಳ್ಳೆಯದು ಮಾಡದಿದ್ದರೂ ಸಹ ಪರವಾಗಿಲ್ಲ ಇತರರ ಹಕ್ಕುಗಳನ್ನು ಹತ್ತಿಕ್ಕದಂತೆ ಬದುಕಬೇಕು,
ಜಗತ್ತಿನಲ್ಲಿ ತಾರತಮ್ಯರಹಿತವಾದ ಸಹಬಾಳ್ವೆಗೆ ಎಲ್ಲರೂ ಶ್ರಮಿಸಬೇಕು ಎಂದು
ಸಲಹೆ ನೀಡಿದರು. ವಿದ್ಯಾರ್ಥಿಗಳು ಉಪನ್ಯಾಸಕರು ಉಪಸ್ಥಿತರಿದ್ದರು
.

Leave a Reply

Your email address will not be published. Required fields are marked *