ಮಹಾದೇವತಾತ ಪುಣ್ಯಸ್ಮರಣೆ ಅಂಗವಾಗಿ ಉಚ್ಛಾಯ ಮೆರವಣಿಗೆ.

ಮಹಾದೇವತಾತ ಪುಣ್ಯಸ್ಮರಣೆ ಅಂಗವಾಗಿ ಉಚ್ಛಾಯ ಮೆರವಣಿಗೆ.

ಬಳ್ಳಾರಿ / ಕಂಪ್ಲಿ: ತಾಲ್ಲೂಕಿನ ಮೆಟ್ರಿ ಗ್ರಾಮದ ಶ್ರೀ ವಿಶ್ವಾರಾಧ್ಯ ಗುರುಕುಲ ಮಠದ ಪ್ರಣವಜ್ಯೋತಿ ಮಹಾಕ್ಷೇತ್ರ ಸಂಸ್ಥಾಪಕರಾದ ಲಿಂಗೈಕ್ಯ ಹಂದ್ಯಾಳು ಮಠದ ಮಹಾದೇವತಾತನವರ 42ನೇ ಪುಣ್ಮಸ್ಮರಣೆ ಭಾನುವಾರ ಸಂಭ್ರಮದಿಂದ ಜರುಗಿತು. ಪುಣ್ಯಸ್ಮರಣೆ ಅಂಗವಾಗಿ ಶ್ರೀಮಠದಲ್ಲಿ ಮಾತೃಶ್ರೀ ಗೌರಮ್ಮನವರ ಹಾಗೂ ಶ್ರೀತಾತನವರ ಕರ್ತೃ ಗದ್ದುಗೆ ಪ್ರಣವಜ್ಯೋತಿ ಪಂಚಪೀಠಾಧೀಶ್ವರರ ವಿಗ್ರಹ ಸೇರಿದಂತೆ ವಿವಿಧ ದೇವರ ಮೂರ್ತಿಗಳಿಗೆ ವಿಶೇಷ ರುದ್ರಾಭಿಷೇಕ, ಬಿಲ್ವಾರ್ಚನೆ, ನಂತರ ಗಣಾರಾಧನೆ ನಡೆಯಿತು. ಗ್ರಾಮದಲ್ಲಿ ಶ್ರೀತಾತನವರ ಉಚ್ಛಾಯ ಶ್ರೀಮಠದಿಂದ ಬಸವಣ್ಣನಪೇಟೆ ಎದುರು ಬಸವಣ್ಣ ಕಟ್ಟೆಯವರೆಗೆ ಭಕ್ತರ ಜಯಘೋಷದೊಂದಿಗೆ ತೆರಳಿ ಮತ್ತೆ ಸ್ವಸ್ಥಾನಕ್ಕೆ ಮರಳಿತು. ಮಂಗಳವಾದ್ಯ, ಸಮ್ಮಾಳ ಮೇಳ ತಂಡದವರು ಭಾಗವಹಿಸಿದ್ದರು. ನಂತರ ಭಕ್ತರಿಂದ ಕಾರ್ತಿಕ ದೀಪೋತ್ಸವ ಜರುಗಿತು ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯರ ಪುರಾಣ ಪ್ರವಚನ ಮಹಾಮಂಲಗೊಂಡಿತು. ಎಚ್.ಎಂ. ವಿಶ್ವೇಶ್ವರಯ್ಯ ಸ್ವಾಮೀಜಿ ಪುರಾಣ ಪ್ರವಚನ, ಎ.ಎಂ.ಸೋಮಶೇಖರಯ್ಯಸ್ವಾಮಿ, ಹಾರ‍್ಮೋನಿಯಂಗೆ ಸಿ.ಡಿ. ಮೌನೇಶ್ ತಬಲಾಸಾಥ್ ನೀಡಿದರು. ಮೆಟ್ರಿ ಗ್ರಾಮಸ್ಥರು ಸೇರಿದಂತೆ ಸುತ್ತಲಿನ ಹಳ್ಳಿಗಳ ಭಕ್ತರು ಭಾಗವಹಿಸಿದ್ದರು.ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *