ಕ.ಕಾರ್ಯನಿರತ ಪ್ರರ್ತಕರ್ತರ ತಾಲೂಕು ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ.

ಕ.ಕಾರ್ಯನಿರತ ಪ್ರರ್ತಕರ್ತರ ತಾಲೂಕು ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ.

ಬಳ್ಳಾರಿ / ಕಂಪ್ಲಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಂಪ್ಲಿ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಚುನಾವಣೆ ಅತಿಥಿಗೃಹ ಆವರಣದಲ್ಲಿ ಸೋಮವಾರ ನಡೆಯಿತು. ಸಂಘದ ಜಿಲ್ಲಾಧ್ಯಕ್ಷ ಎನ್.ವೀರಭದ್ರಗೌಡ ಮಾತನಾಡಿ ಪತ್ರಕರ್ತರು ಸಮಾಜದ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿನ ಬಹುತೇಕ ಪತ್ರಕರ್ತರು ಯಾವುದೇ ಜೀವನ ಭದ್ರತೆಯಿಲ್ಲದೇ ಸಂಕಷ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ಸಮಾಜದಲ್ಲಿನ ಅಂಕು ಡೊಂಕು ಸರ್ಕಾರ ಹಾಗೂ ಜನ ಪ್ರತಿನಿಧಿಗಳನ್ನು ಎಚ್ಚರಿಸುವ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ವ್ಯತ್ಯಾಸವಾದಲ್ಲಿ ಬರಹ ಮೂಲಕ ಜಾಗೃತಿ ಮೂಡಿಸುವ ಪ್ರಾಮಾಣಿಕ ಪ್ರಯತ್ನ ನಡೆದಿದೆ ಎಂದು ತಿಳಿಸಿದರು. ತಾಲೂಕು ಘಟಕಕ್ಕೆ ಬಂಗಿ ದೊಡ್ಡ ಮಂಜುನಾಥ (ಅಧ್ಯಕ್ಷ), ಕರಿ ವಿರುಪಾಕ್ಷಿ(ಉಪಾಧ್ಯಕ್ಷ), ಪಿ.ವೀರೇಶ್(ಪ್ರಧಾನ ಕಾರ್ಯದರ್ಶಿ), ಎಸ್.ಯಮನಪ್ಪ(ಕಾರ್ಯದರ್ಶಿ), ಜೀರು ಗಾದಿಲಿಂಗ(ಖಜಾಂಚಿ), ಕಾ.ಕಾ.ಸಮಿತಿ ಸದಸ್ಯರಾಗಿ ಎಂ.ಎಸ್.ವಿರೂಪಾಕ್ಷಯ್ಯ, ಸಿ.ವೆಂಕಟೇಶ, ಎಚ್.ಎಂ.ಪಂಡಿತಾರಾಧ್ಯ, ಬಿ.ರಸೂಲ್ ಇವರು ಅವಿರೋಧ ಆಯ್ಕೆಗೊಂಡರು ಎಂದು ಪ್ರಕಟಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಕುಲಕರ್ಣಿ, ಈನಾಡು ತೆಲಗು ಪತ್ರಕರ್ತರಾದ ಎಂ.ಚಂದ್ರದ್ರಶೇಖರ ಸೇರಿದಂತೆ ಇತರರಿದ್ದರು. ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *