ಸಂಭ್ರಮದಿಂದ ಪೇಟೆ ಬಸವೇಶ್ವರ ಹಾಗೂ ನೀಲಮ್ಮ ಅವರ ವಿವಾಹ ಮಹೋತ್ಸವ.

ಸಂಭ್ರಮದಿಂದ ಪೇಟೆ ಬಸವೇಶ್ವರ ಹಾಗೂ ನೀಲಮ್ಮ ಅವರ ವಿವಾಹ ಮಹೋತ್ಸವ.

ಬಳ್ಳಾರಿ / ಕಂಪ್ಲಿ: ಸ್ಥಳೀಯ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಪೇಟೆ ಬಸವೇಶ್ವರ ಹಾಗೂ ನೀಲಮ್ಮ ಅವರ ವಿವಾಹ ಮಹೋತ್ಸವ ಸಂಭ್ರಮದಿಂದದ ನಡೆಯಿತು. ಇಲ್ಲಿನ ವಿವಾಹದಲ್ಲಿ ಬಸವಣ್ಣನ(ವರನ)ಪರವಾಗಿ ಹೆಚ್.ಎಂ.ವಿಶ್ವನಾಥ ಜಮಖಂಡಿ ಇವರು ಸುಮಾರು 20501 ಲೀಲಾವು ಹಾಗೂ ನೀಲಮ್ಮ(ವಧುವಿನ) ಪರವಾಗಿ ಮಂಜುನಾಥಗೌಡ ಇವರಿಂದ ಸುಮಾರು 21111 ರೂ.ಗಳ ಲೀಲಾವು ಆಗಿತು. ಪುರೋಹಿತ ವಿಶ್ವನಾಥ ಶಾಸ್ತಿ ಚೌಕಿ ಕಲ್ಯಾಣ ಮಠದ ಬಸವರಾಜ ಸ್ವಾಮಿ, ಪಾಠಶಾಲೆಯ ಘನಮಠಯ್ಯಸ್ವಾಮಿ ಅವರ ನೇತೃತ್ವದಲ್ಲಿ ವಿವಾಹ ಮಹೋತ್ಸವ ಸೇರಿದಂತೆ ನಾನಾ ಧಾರ್ಮಿಕ ಕೈಂಕಾರ್ಯಗಳು ಶ್ರದ್ಧೆಯಿಂದ ನೆರವೇರಿದವು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ವೀರಪ್ಪ, ಧರ್ಮಕರ್ತ ಯು.ಎಂ.ವಿದ್ಯಾಶಂಕರ್, ಪದಾಧಿಕಾರಿಗಳಾದ ಜವುಕಿನ ಸತೀಶ್, ಮಣ್ಣೂರು ಶರಣಪ್ಪ, ವಸ್ತçದ ಜಡೆಯ್ಯಸ್ವಾಮಿ, ಚಿನ್ನದಕಾಂತಿ ಶಿವಮೂರ್ತಿ, ಎಸ್.ಜಡೆಯ್ಯಸ್ವಾಮಿ, ಸಜ್ಜನರ ಮಂಜುನಾಥ, ಅರವಿ ಅಮರೇಶಗೌಡ, ಮಣ್ಣೂರು ನವೀನಗೌಡ, ನಮದಿಕೋಲು ಶಿವಪ್ರಸಾದ್, ಜಿ.ಶಿವಾನಂದ, ಸಲಹಾ ಸಮಿತಿ ಸದಸ್ಯರು, ವೀರಶೈವ ಸಂಘದ ಪದಾಧಿಕಾರಿಗಳು, ವಿವಿಧ ಸಮಾಜಗಳ ಮುಖಂಡರು ಹಾಗೂ ಭಕ್ತರು ಪಾಲ್ಗೊಂಡಿದ್ದರು. ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *