ಶೇಷಾದ್ರಿಪುರಂ ಸಂಜೆ ಕಾಲೇಜಿನ ನಿರ್ವಹಣಾ ವಿಭಾಗದ ಮುಖ್ಯಸ್ಥರೂ ಹಾಗೂ ಮೈಸೂರು ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾದ ವಿನಯ್ ಸಾಗರ್ ಎಲ್. ಎಸ್. ಅವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ….

ಶೇಷಾದ್ರಿಪುರಂ ಸಂಜೆ ಕಾಲೇಜಿನ ನಿರ್ವಹಣಾ ವಿಭಾಗದ ಮುಖ್ಯಸ್ಥರೂ ಹಾಗೂ ಮೈಸೂರು ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾದ ವಿನಯ್ ಸಾಗರ್ ಎಲ್. ಎಸ್. ಅವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ….

ಬೆಂಗಳೂರು: ಶೇಷಾದ್ರಿಪುರಂ ಸಂಜೆ ಕಾಲೇಜಿನ ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ವಿನಯ್ ಸಾಗರ್ ಎನ್. ಎಸ್. ಅವರಿಗೆ ಮೈಸೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರ ವಿಭಾಗದ ಪ್ರೊಫೇಸರ್ ಆದ ಡಾ. ಹರಿಹರನ್ ರವಿ ಅವರ ಮಾರ್ಗದರ್ಶನದಲ್ಲಿ “Issues and Challenges of Startups in Karnataka with Special Reference to Kolar and Chikkaballapur District” ಎಂಬ ವಿಷಯದ ಕುರಿತು ಮೈಸೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆಮೈಸೂರು ವಿಶ್ವವಿದ್ಯಾಲಯವು ಪಿಹೆಚ್. ಡಿ ಪದವಿ ನೀಡಿ ಗೌರವಿಸಿದೆವಿನಯ್ ಸಾಗರ್ ಎಲ್. ಎಸ್ ಅವರು ಕೋಲಾರ ವಲಯದಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ಸುಪ್ರಸಿದ್ಧ ಪ್ರಾಧ್ಯಪಕರಾಗಿದ್ದ ದಿ. ಪ್ರೊ.ಎಲ್. ಆರ್. ಸೀನಪ್ಪನವರೂ ಹಾಗೂ ಶ್ರೀಮತಿ ಬಿ. ಎಂ. ವೇದವಲ್ಲಿ ದಂಪತಿಗಳ ಸುಪುತ್ರರು, ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಸ್ಟಾರ್ಟಪ್ ವಲಯದಲ್ಲಿನ ಸವಾಲುಗಳು, ಅವಕಾಶಗಳು ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಸಂಬಂಧಿಸಿದ ಆಳವಾದ ಅಧ್ಯಯನಕ್ಕಾಗಿ ಶೈಕ್ಷಣಿಕ ವಲಯದಿಂದ ಮೆಚ್ಚುಗೆಯನ್ನು ಗಳಿಸಿದ್ದಾರೆ.ಡಾ. ಎಲ್. ಎಸ್.ವಿನಯ್ ಸಾಗರ್ ಇವರ ಈ ಸಾಧನೆ ಶೈಕ್ಷಣಿಕ ವಲಯದಲ್ಲಿ ಶ್ಲಾಘನೀಯ ಎನಿಸಿದೆ. ಕಾಲೇಜು ಹಾಗೂ ವಿದ್ಯಾರ್ಥಿ ಸಮುದಾಯದಲ್ಲಿ ಸಂತಸ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *