ಸಾಮಾಜಿಕ ಕಳಕಳಿಯ ಹಿರಿಯ ಮುತ್ಸಜ್ಜಿ ಎಸ್.ಎ.ಹೆಚ್.ಮೆಹೆರ್ ಪಾಶ ಅವರ ನಿಧನ…

ಸಾಮಾಜಿಕ ಕಳಕಳಿಯ ಹಿರಿಯ ಮುತ್ಸಜ್ಜಿ ಎಸ್.ಎ.ಹೆಚ್.ಮೆಹೆರ್ ಪಾಶ ಅವರ ನಿಧನ…

ಗಂಗಾವತಿ ನಗರದ ಕಾರ್ಮಿಕ ನಾಯಕರು, ಹಿರಿಯ ಮುಖಂಡರು ಹಾಗೂ ಗಂಗಾವತಿ ನಗರದಲ್ಲಿರುವ ಅಮರ್ ಭಗತ್ ಸಿಂಗ್ ನಗರಕ್ಕೆ ನಾಮಕರಣ ಮಾಡಲು ಕಾರಣಿಕರ್ತರಾದ *ಎಸ್.ಎ.ಹೆಚ್.ಮೆಹೆರ್ ಪಾಶ* ಅವರು ಇಂದು ಮಧ್ಯಾಹ್ನ 2:30ಕ್ಕೆ ಡಾllಬಿ. ಆರ್. ಅಂಬೇಡ್ಕರ್ ನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿರುವರು ಎಂಬುದು ಬಹಳ ದುಃಖದ ಸಂಗತಿ. ಇವರ ಜನನ 15/02/1942 ಮರಣ 09/10/2025 ಇವರ ವಯಸ್ಸು 83ಅವರ ನಿಧನದಿಂದ ಗಂಗಾವತಿ ನಗರ ರಾಜಕೀಯ, ಸಾಮಾಜಿಕ ವಲಯವು ಒಬ್ಬ ಸಕ್ರಿಯ ನಾಯಕನನ್ನು ಕಳೆದುಕೊಂಡಿದೆ.ಆ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇವೆ.ಮೃತರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 12:30ಕ್ಕೆ ಬೇರೊನಿ ಆಬಾದಿ ಮಸೀದಿಯ ಮುಸ್ಲಿಂ ಖಬರಸ್ಥಾನದಲ್ಲಿ ನೆರವೇರಲಿದೆ ಎಂದು ತಿಳಿಸಲಾಗಿದೆ.ಮೃತರ ಆತ್ಮಕ್ಕೆ ಶಾಂತಿ ಕೋರಲು ಅವರ ಆತ್ಮೀಯರು, ಬಂಧುಗಳು, ಮಿತ್ರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕುಟುಂಬಸ್ಥರು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *