ದೇವಿ ಪುರ‍ಾಣ ಪ್ರವಚನ ಸರ್ವರ ಬಾಳ ಜ್ಞಾನ ಜ್ಯೋತಿಯಾಗಿದೆ -ಷ॥ಬ್ರ॥ ಪ್ರಶಾಂತಸಾಗರ ಶಿವಾಚಾರ್ಯ ಸ್ವಾಮಿ…

ದೇವಿ ಪುರ‍ಾಣ ಪ್ರವಚನ ಸರ್ವರ ಬಾಳ ಜ್ಞಾನ ಜ್ಯೋತಿಯಾಗಿದೆ -ಷ॥ಬ್ರ॥ ಪ್ರಶಾಂತಸಾಗರ ಶಿವಾಚಾರ್ಯ ಸ್ವಾಮಿ…

ವಿಜಯನಗರ ಜಿಲ್ಲೆ ಕೂಡ್ಲಿಗಿ : ದೇವಿ ಪುರಾಣ ಪ್ರವಚನವು , ಸರ್ವರ ಬಾಳ ಜ್ಞಾನ ಜ್ಯೋತಿಯಾಗಿದೆ ಎಂದು ಷ॥ಬ್ರ॥ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿಗಳು ನುಡಿದರು. ಅವರು ದಸರ‍ಾ ನವರಾತ್ರಿ ನಿಮಿತ್ತ , ಕೂಡ್ಲಿಗಿ ಹಿರೇಮಠದ ಆವರಣದಲ್ಲಿ ಆಯೋಜಿಸಲಾಗಿರುವ. 14ನೇ ವರ್ಷದ ದಸರಾ ಮಹೋತ್ಸವ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ , ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನವರಾತ್ರೋತ್ಸವ ಸಂದರ್ಭದಲ್ಲಿನ ಸರ್ವರೂ ನಿತ್ಯ , ಶ್ರೀದೇವಿ ಪುರಾಣ ಪ್ರವಚನವನ್ನು ಶ್ರದ್ಧಾ ಭಕ್ತಿಯಿಂದ ಆಲಿಸಬೇಕು. ಬಾಳಿನ ಅಂಧಃಕಾರ ತೊಲಗಿ ಜ್ಞಾನ ಜ್ಯೋತಿ ಬೆಳಗಲಿದೆ , ಶ್ರೀದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕಿದೆ ಎಂದರು. ಜ್ಯೋತಿ ಜ್ಞಾನದ ಸಂಕೇತ ಸುಜ್ಞಾನದ ಸಾರ , ಶ್ರೀದೇವಿ ಪುರಾಣ ಆಲಿಸುವುದರಿಂದ ದೊರಕಲು ಸಾಧ್ಯ ಎಂದರು. ಎಂ ಎ ವೇದ ಮೂರ್ತಿ ರವೀಂದ್ರರವರು , ಶಾಸ್ತ್ರಿಗಳು ಪುತ‍ಣ ಪ್ರವಚನ ಮಾಡಿದರು. ಹಾಗೂ ಸಂಗೀತ ಶಿಕ್ಷಕರಾದ ಶ್ರೀಮತಿ ರೋಜಾರಾಣಿಯವರು , ಮತ್ತು ಸಂಗೀತ ಕಲಾವಿದರಾದ ಹಾರಕಬಾವಿ ಎಂ.ತಿಪ್ಪೇಸ್ವಾಮಿ ರವರಿಂದ ಸಂಗೀತ ಸೇವೆ. ಹಿರೇಗ್ಡಾಳು ಬಣಕಾರ ಕೊಟ್ರೇಶ ರವರು , ಹಾಗೂ ಅಗ್ರಹಾರ ಎನ್ ಎಂ ನಾಗರ‍ಾಜಯ್ಯರವರು ತಬಲ ಹಾರ್ಮೋನಿಯಂ ಸೇವೆ ನೀಡಿದರು. ಹಿರಿಯ ನಾಗರೀಕರು , ಮಹಿಳೆಯರು ಮಕ್ಕಳಾಫಿಯಾಗಿ ಯುವಕರು ವೃದ್ಧರು. ಕೂಡ್ಲಿಗಿ ಹಿರೇಮಠದ ಸಿಬ್ಬಂದುಯವರು , ಹಾಗೂ ನೂರಾರು ಭಕ್ತರು ಪುರಾಣ ಪ್ರವಚನದಲ್ಲಿ ಭಾಗಿಯಾಗಿದ್ದರು.

✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*

Leave a Reply

Your email address will not be published. Required fields are marked *