ಆಗಸ್ಟ್ 10 ರಿಂದ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೆಯ ಆರಾಧನಾ ಮಹೋತ್ಸವ… ಗುರುರಾಜ್ ಆಚಾರ….

ಆಗಸ್ಟ್ 10 ರಿಂದ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೆಯ ಆರಾಧನಾ ಮಹೋತ್ಸವ… ಗುರುರಾಜ್ ಆಚಾರ….

ಗಂಗಾವತಿ. ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆಗಸ್ಟ್ ಹತ್ತರಿಂದ ಮೂರು ದಿನಗಳ ಕಾಲ ಕಲಿಯುಗದ ಕಾಮಧೇನು ಕಲ್ಪವೃಕ್ಷ ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 354ನೇ ಆರಾಧನಾ ಮಹೋತ್ಸವ ಜರುಗಲಿದೆ ಎಂದು ಶ್ರೀಮಠದ ವ್ಯವಸ್ಥಾಪಕ ಸಾಮವೇದಿ ಗುರುರಾಜ ಆಚಾರ್ ಹಾಗೂ ಪ್ರಧಾನ ಅರ್ಚಕ ಭೀಮಸೇನ್ ಆಚಾರ್ ಹೇಳಿದರು. ಅವರು ಶ್ರೀಮಠದ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಮಂತ್ರಾಲಯದ ಪೀಠಾಧಿಕಾರಿಗಳಾದ ಶ್ರೀ ಶುಭೋದಯ ಶ್ರೀ.ಸುಬು ಧ್ಯೇoದ್ರ ತೀರ್ಥ ಶ್ರೀ ಪಾದಂಗಳವರ. ಅಜ್ಞಾನುಸಾರವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಆರಾಧನಾ ಮೋತ್ಸವ ಜರುಗಲಿದ್ದು. ದಿನಂಪ್ರತಿ ಅಷ್ಟೋತ್ತರ ಶತನಾಮಾವಳಿಯೊಂದಿಗೆ ರಾಯರ ಬೃಂದಾವನಕ್ಕೆ ಕ್ಷೀ ರಾಭಿಷೇಕ ಪಂಚಾಮೃತ ಅಭಿಷೇಕ. ಭಜನೆ ಅಲಂಕಾರ ಬ್ರಾಹ್ಮಣರ ಸೇವೆ ಜರುಗಲಿದೆ ದಿನಾಂಕ 11 ಸೋಮವಾರ ಮಧ್ಯರಾದನೆ ದಿನಾಂಕ 12 ಮಂಗಳವಾರ ಉತ್ತರಾಧನೆ. ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳವರ ಸರ್ವ ಲಾಂಕೃತ ಭವ್ಯ ರಥೋತ್ಸವ ಸಕಲ ವಾದ್ಯ ವೈಭವದೊಂದಿಗೆ ಹಾಗೂ ವಿವಿಧ ಭಜನಾ ಮಂಡಳಿ ಅವರಿಂದ ಜರುಗಲಿದ್ದು ಸಕಲ ಭಕ್ತಾದಿಗಳು ಭಾಗವಹಿಸಿ ಶ್ರೀ ರಾಯರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

Leave a Reply

Your email address will not be published. Required fields are marked *