ಮಾಜಿ ವಿಧಾನ ಪರಿಷತ್ ಸದಸ್ಯ ಎಚ್ ಆರ್ ಶ್ರೀನಾಥ್ ಅವರ ಷಷ್ಠಿ ಪೂರ್ತಿ ಅಭಿನಂದನಾ ಸಮಾರಂಭ.

ಗಂಗಾವತಿ.. ಸರ್ವಧರ್ಮ ಸಹಿಷ್ಣುತೆಯ ಹರಿಕಾರ ಮಾಜಿ ವಿಧಾನ ಪರಿಷತ್ ಸದಸ್ಯ ಎಚ್ ಆರ್ ಶ್ರೀನಾಥ್ ಅವರ ಷಷ್ಠಿ ಪೂರ್ತಿ ಅಭಿನಂದನಾ ಸಮಾರಂಭವನ್ನು ದಿನಾಂಕ 29.01 ಗುರುವಾರರಂದು ನಗರದ ಶ್ರೀ ಇಂಟರ್ನ್ಯಾಷನಲ್ ಫಂಕ್ಷನ್ ಹಾಲ್ನಲ್ಲಿ ಆಯೋಜಿಸಲಾಗಿದೆ ಎಂದು ಮುಖಂಡ ವೆಂಕಟೇಶ್ ಅಮರ್ ಜ್ಯೋತಿ ಹೇಳಿದರು.

ಅವರು ಫಂಕ್ಷನ್ ಹಾಲ್ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಗಂಗಾವತಿ ತಾಲೂಕಿನ ಸರ್ವ ಸಮಾಜದ ನಾಗರಿಕರು ಹಾಗೂ ಹಿತೈಷಿಗಳು ಅಭಿಮಾನಿಗಳು ನೇತೃತ್ವದಲ್ಲಿ ಜರುಗಲಿರುವ ಅಭಿನಂದನಾ ಸಮಾರಂಭದಲ್ಲಿ ಬೆಳಿಗ್ಗೆ 10:30 ಕ್ಕೆ ಧಾರ್ಮಿಕ ವಿಧಿ ವಿಧಾನಗಳು ನಾಗರೀಕ ರಿಂದ ಅಭಿನಂದನಾ ಸಮಾರಂಭ 12 ಗಂಟೆ 5 ನಿಮಿಷಕ್ಕೆ ಪೂಜ್ಯ ಮಠಾಧೀಶರಿಂದ ಧರ್ಮ ಗುರುಗಳಿಂದ ಹಾಗೂ ಗಣ್ಯಮಾನ್ಯರಿಂದ ಅಭಿನಂದನಾ ನುಡಿಗಳು ಜರುಗಲಿದ್ದು ಸಮಸ್ತ ಜನತೆ ಭಾಗವಹಿಸುವಂತೆ ಮನವಿ ಮಾಡಿದರು. ರಾಮಕೃಷ್ಣ ಮಾತನಾಡಿ. ಸರಳ ಸಜ್ಜನಿಕೆಯ ರಾಜಕಾರಣಿ ಮಣ್ಣಿನ ಮಗ ಸರ್ವ ಸಮಾಜದ ಧ್ವನಿಯಾಗಿ ಬೃಹತ್ ಶಕ್ತಿಯಾಗಿ ಜನಸೇವೆ ಹಾಗೂ ತಮ್ಮ ಧಾರ್ಮಿಕತೆಯ ಮನೋಭಾವನೆಯನ್ನು ಹೊಂದಿರುವ ಮಾಜಿ ವಿಧಾನ ಪರಿಷತ್ ಸದಸ್ಯ ಎಚ್ ಆರ್ ಶ್ರೀನಾಥ್ ಅವರ ಷಷ್ಠಿ ಪೂರ್ತಿ ಅಭಿನಂದನಾ ಸಮಾರಂಭ ಮೂಲಕ ಅವರ ಆರೋಗ್ಯ ಆಯುಷ್ಯ ವೃದ್ಧಿಸುವಂಥ ಆಗಲಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಿಚ್ಚಾಲಿ ಮಲ್ಲಿಕಾರ್ಜುನ ರಾಮನಾಯ್ಕ್ ಇತರರು ಉಪಸ್ಥಿತರಿದ್ದರು.

