ಸಮಸಮಾಜ ನಿರ್ಮಾಣಕ್ಕೆ ಯುವಭಾರತ ಪಣತೊಟ್ಟರೆ ಮಾತ್ರ ಭಾರತ ವಿಶ್ವಗುರುವಾಗಲಿದೆ- ಡಾ.ಕರಿಗೂಳಿ..

*ಸಮಸಮಾಜ ನಿರ್ಮಾಣಕ್ಕೆ ಯುವಭಾರತ ಪಣತೊಟ್ಟರೆ ಮಾತ್ರ ಭಾರತ ವಿಶ್ವಗುರುವಾಗಲಿದೆ- ಡಾ.ಕರಿಗೂಳಿ*

ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ 26.11.2026ರಂದು ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವೈಶಿಷ್ಟ್ಯಪೂರ್ಣವಾಗಿ ನಮ್ಮ ದೇಶಕ್ಕಾಗಿ ಶ್ರಮಿಸಿದ ಎಲ್ಲಾ ಮಹಾನಾಯಕರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಾಸ್ಥಾವಿಕವಾಗಿ ಮಾತನಾಡಿದ ಅಧ್ಯಾಪಕ ಶಂಕರಪ್ಪ ಎಂ.ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಸಂವಿಧಾನ ಸಮರ್ಪಣಾ ದಿನಾಚರಣೆಯ ಶುಭಾಶಯಗಳನ್ನು ಕೋರಿ ಸಂವಿಧಾನದ ತತ್ವಗಳು ಜನಜೀವನದ ಬದಲಾವಣೆಯಲ್ಲಿ ವಹಿಸಿದ ಮಹತ್ವದ ಪಾತ್ರದ ಕುರಿತು ವಿವರಿಸಿದರು. ಡಾ.ವಿರುಪಾಕ್ಷ ಕೆ. ಕನ್ನಡದಲ್ಲಿ ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಿ ಮಾತನಾಡಿ, ಸಂವಿಧಾನ ರಚನಾ ಸಭೆಯ ಚರ್ಚೆಯಲ್ಲಿ ಭಾಗವಹಿಸಿದ ಮಹನೀಯರ ಮಾತುಗಳನ್ನು ತಿಳಿಯಲು ಸಂವಿಧಾನ ರಚನಾ ಸಭೆಯ ಚರ್ಚೆಯ ನಡಾವಳಿಗಳ ಪುಸ್ತಕ ಸಂಪುಟಗಳನ್ನು ಓದಿ ಅರ್ಥೈಸಿಕೊಳ್ಳಲು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಕರಿಗೂಳಿ ಇಂಗ್ಲಿಷ್ ನಲ್ಲಿ ಸಂವಿಧಾನದ ಪೂರ್ವಪೀಠಿಕೆಯನ್ನು ಭೋದಿಸಿ, ಇಂದಿನ ಕಾರ್ಯಕ್ರಮದ ಕುರಿತು ಮಾತನಾಡುತ್ತಾ, ಯುವಕರು ಇಂದಿನಿಂದಲೇ ಸಂವಿಧಾನದ ತತ್ವಾದರ್ಶಗಳನ್ನು ತಾವು ಅರಿತು, ಇತರರಿಗೂ ತಿಳಿಸಿ, ಪಾಲಿಸಿಕೊಂಡು ಹೋಗಬೇಕೆಂದು ತಿಳಿಸಿದರು. ಆಡಳಿತದಲ್ಲಿರುವವರು ಸಂವಿಧಾನದ ಅಂಶಗಳನ್ನು ಜಾರಿಗೆ ತರುವವರಾಗಿದ್ದು, ಅವರ ಮನೋಸ್ಥಿತಿಯ ಮೇಲೆ ನಮ್ಮ ದೇಶದ ಸಂವಿಧಾನದ ಗುಣಮಟ್ಟ ಕಾರ್ಯಗತವಾಗುತ್ತದೆ, ಹಾಗೂ ತನ್ಮೂಲಕ ದೇಶದ ಸಮಗ್ರ ಅಭಿವೃದ್ಧಿಯ ಗತಿ ನಿರ್ಧಾರವಾಗುತ್ತದೆ, ಅಧಿಕಾರದಲ್ಲಿರುವವರು ಸಂವಿಧಾನಿಕ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಿದರೆ ಭಾರತದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದರು. ಈ ಕಾರಣದಿಂದಲೇ ದೇಶದ ಯುವಪ್ರಜೆಗಳು ಇಂದಿನಿoದಲೇ ಸಾoವಿಧಾನಿಕ ಪ್ರಜ್ಞೆ ಬೆಳೆಸಿಕೊಂಡು ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರರ ಕನಸು ನನಸಾಗಿಸಲು ಹಾಗೂ ಸಮಸಮಾಜ ನಿರ್ಮಿಸಲು ಮುಂದಾಗಬೇಕೆಂದು ಕರೆ ನೀಡಿದರು, ಅಧ್ಯಾಪಕರಾದ ವೀರೇಶ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಡಾ.ದೇವರಾಜ ಬಾಲಚಂದ್ರಪ್ಪ, ಹುಲಿಗೆಮ್ಮ, ರೋಜಾ, ಕನಕಪ್ಪ , ಆಡಳಿತ ಸಿಬ್ಬಂದಿಯವರಾದ ಜಬೀನಾ ಬೇಗಂ, ವಿನಾಯಕ ಮತ್ತು ಸಿಬ್ಬಂದಿಯಾದvಚಿನ್ನವರಪ್ರಸಾದ್ ಶಾಂತಿ, ಶರಣ, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *