ಜನವಿರೋಧಿ ಬೆಲೆ ಏರಿಕೆ ತಕ್ಷಣ ವಾಪಸ್ ಪಡೆಯಿರಿ – ಎಂದು ಸಿಪಿಐ(ಎಂ) ಒತ್ತಾಯ ; ನಿರುಪಾದಿ ಬೆಣಕಲ್…

ಗಂಗಾವತಿ, ಕೊಪ್ಪಳ* *ದಿನಾಂಕ 07.11.2026**ವಿಷಯ :*ಬರದ ಭವಣೆಯಲ್ಲಿ ಬೇಯುವ ಜನತೆಯ ಮೇಲೆ ಬೆಲೆ ಏರಿಕೆಯ ದಾಳಿ – ನಾಚಿಕೆ ಗೇಡಿನಾ ಸಂಗತಿ ಏರಿಸಲಾದ ಎಲ್ಲ ಬೆಲೆಗಳನ್ನು ತಕ್ಷಣ ವಾಪಾಸು ಪಡೆಯುವಂತೆ -ಸಿಪಿಐಎಂ ಒತ್ತಾಯಿಸುತ್ತದೆ. ಬರದ ಬವಣೆಗೆ ಬೆಲೆ ಏರಿಕೆಯ ಬರೆ ; ಸಿಪಿಐ(ಎಂ) ನಿರುಪಾದಿ ಬೆಣಕಲ್**ಜನವಿರೋಧಿ ಬೆಲೆ ಏರಿಕೆ ತಕ್ಷಣ ವಾಪಸ್ ಪಡೆಯಿರಿ – ಎಂದು ಸಿಪಿಐ(ಎಂ) ಒತ್ತಾಯ ; ನಿರುಪಾದಿ ಬೆಣಕಲ್ರಾಜ್ಯ ಸರಕಾರವು,ಕಳೆದ ಒಂದು ತಿಂಗಳ ಅವಧಿಯಲ್ಲಿ ಹಾಲು, ಮೊಸರು ಹಾಗು ಬಸ್ ದರಗಳ ಭಾರೀ ಏರಿಕೆ ಮಾಡಿದೆ. ಹಾಲಿನ ದರ ಲೀಟರ್ ಒಂದಕ್ಕೆ 08 ರೂಗಳನ್ನ ಹೆಚ್ಚಿಸಿದೆ. ಮೊಸರಿನದರ ಲೀಟರ್ ಒಂದಕ್ಕೆ 8 ರೂ ತುಪ್ಪ ಒಂದು ಕೇಜಿಗೆ 104: ರೂ ಹೆಚ್ಚಳವಾಗಿದೆ. ಅದೇ ರೀತಿ, ಸಾರಿಗೆ ದರಗಳನ್ನು ಹೆಚ್ಚಿಸಲಾಗಿದೆ. ಉದಾಹರಣೆಗೆ, ಬೆಂಗಳೂರಿನಿಂದ ಗಂಗಾವತಿ ದರ ಪ್ರತಿ ಹಂತಕ್ಕೆ 9 ರೂ ನಂತೆ ಹೆಚ್ಚಳ ಮಾಡಲಾಗಿದೆ. ಇದು ಕಳೆದ ಎರಡು ವರ್ಷಗಳಲ್ಲಿ ಎರಡನೇ ಬೆಲೆ ಏರಿಕೆಯಾಗಿದೆ. ಅದಾಗಲೇ ಕಾಳ ಸಂತೆ ಕೋರರು ಅಕ್ಕಿ, ಬೇಳೆ ಮುಂತಾದ ಧಾನ್ಯಗಳ ಬೆಲೆ ಏರಿಕೆ ಮಾಡಿದ್ದಾರೆ. ಇಡೀ ರಾಜ್ಯ ಅತ್ಯಂತ ತೀವ್ರ ಬರಗಾಲದಿಂದ ತತ್ತರಿಸುತ್ತಿರುವಾಗ, ದಲಿತ ಮತ್ತಿತರೆ ಬಡ ಹಾಗು ಮಹಿಳಾ ಕೂಲಿಕಾರರ ಕೆಲಸ ಇಲ್ಲದಿರುವಾಗ, ಬೆಳೆಯು ನಷ್ಠವಾಗಿ ರೈತರು ಸಾಲಬಾಧಿತರಾಗಿರುವಾಗ , ಜನತೆಗೆ ನೆರವಾಗ ಬೇಕಾದ ಕೇಂದ್ರ ಮತ್ತು ರಾಜ್ಯ ಸರಕಾರಗಳು ನೆರವಿಗೆ ಧಾವಿಸದೇ ಹೊಣೆಗೇಡಿಯಂತೆ ವರ್ತಿಸುತ್ತಿವೆ.ಮಾತ್ರವಲ್ಲಾ! ಗಾಯದ ಮೇಲೆ ಬರೆ ಎಳೆದು ಉಪ್ಪು ಸವರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಲ್ಲಿ ತೊಡಗಿರುವುದು ನಾಚಿಕೆ ಗೇಡು ! ಎಂದು ಸಿಪಿಐಎಂ ಬಲವಾಗಿ ಖಂಡಿಸಿದೆ ಮತ್ತು ತಕ್ಷಣವೇ ಏರಿಸಲಾದ ಬೆಲೆಗಳನ್ನು ವಾಪಾಸು ಪಡೆಯುವಂತೆ ಸಿಪಿಐ(ಎಂ) ಒತ್ತಾಯಿಸುತ್ತದೆ.ಹಾಲು ಉತ್ಪಾದಕರನ್ನು ನಷ್ಠದಿಂದ ರಕ್ಷಿಸ ಬೇಕೆಂಬುದನ್ನು ಸಿಪಿಐಎಂ ಬೆಂಬಲಿಸುತ್ತದೆ. ಹಾಲು ಉತ್ಪಾದಕರಿಗೆ, ಸಹಾಯಧನವನ್ನು ತಲಾ ಲೀಟರ್ ಗೆ ಹೆಚ್ಚಿಸುವ ಮೂಲಕ ನೆತವಾಗಬೇಕೇ ಹೊರತು ಬಡ ಗ್ರಾಹಕರನ್ನು ಸುಲಿಗೆ ಮಾಡುವುದರ ಮೂಲಕವಲ್ಲ ! ಹಾಲು ಉತ್ಪಾದಕರ ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಪಶು ಆಹಾರ ಮುಂತಾದ ಹೂಡಿಕೆಗಳಿಗೆ ಸಹಾಯಧನವನ್ನು ಒದಗಿಸುವ ಮೂಲಕ ಕ್ರಮ ವಹಿಸಬೇಕು. ಹಾಲು ಉತ್ಪದನಾ ವೆಚ್ಚವನ್ನು ಹೆಚ್ಚಿಸಿ ಹಾಲು ಉತ್ಪಾಕರ ಕೊಳ್ಳೆಯನ್ನು ತಡೆಯುವುದು. ಡೈರಿ, ಚಿಲ್ಲಿಂಗ್ ಸೆಂಟರ್ ಹಾಗು ಒಕ್ಕೂಟಗಳಲ್ಲಿನ ಭ್ರಷ್ಠತೆ, ಸೋರುವಿಕೆಯನ್ನು ತಡೆಯುವ ಮೂಲಕ ನೆರವಾಗ ಬೇಕು ಎಂದು ಸಿಪಿಐಎಂ ಆಗ್ರಹಿಸಿದೆ. ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಕೂಡಾ, ಅಂತರ್ರಾಷ್ಟ್ರೀಯ ಬೆಳವಣಿಗೆಗಳಿಂದಾಗಿ ಕಡಿಮೆ ಬೆಲೆಗೆ ಕಚ್ಛಾ ತೈಲ ಪಡೆದರೂ, ಗ್ರಾಹಕರ ಹೊರೆ ಇಳಿಸಲಿಲ್ಲ. ಬದಲಿಗೆ, ಬೆಲೆ ಏರಿಕೆಯನ್ನು ಮುಂದುವರೆಸಿದೆ. ಪೆಟ್ತೋಲ್, ಡೀಸೆಲ್, ಗ್ಯಾಸ್ ಹಾಗು ನಾಫ್ತಾ ಬೆಲೆಗಳು ಏರುತ್ತಲೆ ಇವೆ.ಸರಕಾರ ಡೈರಿ ಉತ್ಪನ್ನಗಳ ಬೆಲೆ ಏರಿಕೆ ಮಾಡಿದ ಬೆನ್ನ ಹಿಂದೆಯೇ ಖಾಸಗಿ ಡೈರಿ ಉತ್ಪನ್ನಗಳ ಬೆಲೆಗಳನ್ನ ಹೆಚ್ಚಿಸಲಾಗಿರುವುದು. ಅದೇ ರೀತಿ, ಸಾರ್ವಜನಿಕ ಸಾರಿಗೆ ಬಸ್ ದರ ಏರಿಕೆ ಬೆನ್ನ ಹಿಂದೆಯೆ ಖಾಸಗೀ ಬಸ್ ದರ ಏರಿಕೆ ಮಾಡಲಾಗಿದೆ. ಇದನ್ನು ಗಮನಿಸಿದರೆ, ಸರಕಾರದ ಮೇಲೆ ಖಾಸಗೀ ಬಂಡವಾಳದಾರರ ಒತ್ತಡ ಮತ್ತು ಅವರ ಲೂಟಿಗೆ ನೆರವು ನೀಡುವ ದುರುದ್ದೇಶ ಈ ಬೆಲೆ ಏರಿಕೆಗಳ ಹಿಂದೆ ಇರುವಂತೆ ಕಂಡು ಬರುತ್ತಿದೆ. ಇನ್ನು ಬರಗಾಲ ವ್ಯಾಪಕವಾಗಿರುವುದತಿಂದ ಕಾಳ ಸಂತೆ ಕೋರರಿಗೆ ಗ್ರಾಹಕರ ಲೂಟಿ ಮಾಡಲು ರೆಕ್ಕೆ ಬಂದಂತಾಗಿದೆ. ಇಂತಹ ಕಾಳ ಸಂತೆ ನಿಗ್ರಹ ನಿಗ್ರಹಿಸದಿರುವ ಸರಕಾರ ಕಾಳ ಸಂತೆ ಕೋರತನದ ಪರ ನಿಂತಿರುವಿದು ಅಕ್ಷಮ್ಯವಾಗಿದೆ.ಸರಕಾರಗಳ ಈ ಲೂಟಿಕೋರತನದ ಪರವಾದ ನೀತಿಗಳನ್ನು ಖಂಡಿಸಿ, ತಕ್ಷಣವೇ ಏರಿಸಿದ ಬೆಲೆಗಳನ್ನು ವಾಪಾಸು ಪಡೆಯುವಂತೆ ಆಗ್ರಹಿಸಿ ಮತ್ತು ಬರಗಾಲ ಪರಿಹಾರಕ್ಕಾಗಿ ಒತ್ತಾಯಿಸಿ ಮುಂಬರುವ ಒಂದುವಾರದ ಅವಧಿಯಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ಸಿಪಿಐಎಂ ಕರೆ ನೀಡಿದೆ.ನಿರುಪಾದಿ ಬೆನಕಲ್ ಜಿಲ್ಲಾ ಕಾರ್ಯದರ್ಶಿಹುಸೇನಪ್ಪ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರು*ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ)**ಕೊಪ್ಪಳ ಜಿಲ್ಲಾ ಸಮಿತಿ*

Leave a Reply

Your email address will not be published. Required fields are marked *