ಗಂಗಾವತಿ, ಜಿ: ಕೊಪ್ಪಳ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಡಾ. ಛಲವಾದಿ ನಾರಾಯಣಸ್ವಾಮಿಯವರ ಮನೆಗೆ ಚಾಕು, ಕತ್ತಿ ಮತ್ತಿತರ ಮಾರಕಾಸ್ತ್ರಗಳನ್ನು ಹೋಂ ಡೆಲಿವರಿ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಮಾನ್ಯರೇ,*ಇತ್ತೀಚೆಗೆ ನಡೆದ ಮಾನ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಡಾ. ಛಲವಾದಿ ನಾರಾಯಣಸ್ವಾಮಿಯವರ ಮನೆಗೆ ಚಾಕು, ಕತ್ತಿ ಇನ್ನಿತರ ಮಾರಕಾಸ್ತ್ರಗಳನ್ನು ಅವರ ಮನೆಗೆ ಹೋಂ ಡೆಲಿವರಿ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕಾಗಿ ಈ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತೇನೆ.ಮಾನ್ಯ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರೇ, ಈ ಹಿಂದೆ 1992 ರಲ್ಲಿ ತಮ್ಮ ಪೂಜ್ಯ ತಂದೆಯವರಾದ ಮಲ್ಲಿಕಾರ್ಜುನ ಖರ್ಗೆ ಅವರು ಗೃಹ ಮಂತ್ರಿಗಳಾದ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಕಂಬಳಪಲ್ಲಿ ಗ್ರಾಮದಲ್ಲಿ ಅತ್ಯಂತ ದೇಶವೇ ತಲೆತಗ್ಗಿಸುವಂತಹ ಹತ್ಯಾಕಾಂಡ ನಡೆದು ಏಳು ಜನ ದಲಿತರನ್ನು ಸಜೀವ ದಹನ ಮಾಡಲಾಯಿತು. ಆಗ ನಿಮ್ಮ ತಂದೆಯವರು ಗೃಹ ಸಚಿವರಾಗಿ ತಮ್ಮದೇ ಕಾಂಗ್ರೆಸ್ ಸರ್ಕಾರ ಇದ್ದರೂ ಯಾವುದೇ ರೀತಿಯ ಕುಟುಂಬಗಳಿಗೆ ನ್ಯಾಯ ಒದಗಿಸಲಾಗದೆ ಕೈಚೆಲ್ಲಿ ಕೂತಿತ್ತು. ಅಂದಿನ ಎಐಸಿಸಿ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿಯವರು ಹತ್ಯಾಕಾಂಡದ ನಂತರ ಕಂಬಳಪಲ್ಲಿ ಗ್ರಾಮಕ್ಕೆ ಬಂದು ಹೋಗಿದ್ದರೂ ಯಾವುದೇ ರೀತಿಯ ನ್ಯಾಯ ಒದಗಿಸದೆ, ದಲಿತರನ್ನು ಅತ್ಯಂತ ಕೀಳಾಗಿ ನಡೆಸಿಕೊಂಡು ಕೇವಲ ದಲಿತ ವೋಟ್ ಬ್ಯಾಂಕ್ ಮೇಲೆ ನಿಮ್ಮ ರಾಜಕೀಯ ಅಸ್ತಿತ್ವವನ್ನು ಕಂಡುಕೊಂಡಿದ್ದೀರಿ.ಇಂದು ಛಲವಾದಿ ನಾರಾಯಣಸ್ವಾಮಿಯವರು ತಮ್ಮ ಸರ್ಕಾರದ ದಲಿತ ವಿರೋಧಿ ನೀತಿಗಳನ್ನು ಸದನದಲ್ಲಿ ಹಾಗೂ ಸದನದ ಹೊರಗೆ ಬಹಿರಂಗಪಡಿಸುತ್ತಿದ್ದು, ಅದನ್ನು ತಮ್ಮ ಸರ್ಕಾರಕ್ಕೆ ಹಾಗೂ ತಮಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಸುಮಾರು 40 ವರ್ಷಗಳ ನಂತರ ತಮ್ಮ ತಂದೆಯವರಂತೆ ತಾವು ಗೃಹ ಸಚಿವರಾಗಿ 40 ವರ್ಷಗಳ ಹಿಂದಿನ ಪರಿಸ್ಥಿತಿಯನ್ನು ಈಗ ನಿರ್ಮಾಣ ಮಾಡಲು ನೀವು ಹಾಗೂ ನಿಮ್ಮ ಸರ್ಕಾರ ತಯಾರಾಗಿದ್ದು, ಇದನ್ನು ಸಹಿಸಿಕೊಳ್ಳುವ ಪ್ರಶ್ನೆ ಯಾವುದೇ ದಲಿತ ಮುಖಂಡರಾಗಲಿ, ದಲಿತ ಬಂಧುಗಳಾಗಲಿ ಸಹಿಸುವುದಿಲ್ಲ.ಈ ಕೂಡಲೇ ಆರೋಪಿಗಳನ್ನು ಎರಡು ದಿನದಲ್ಲಿ ಬಂಧಿಸದೇ ಇದ್ದ ಪಕ್ಷದಲ್ಲಿ ಕರ್ನಾಟಕ ರಾಜ್ಯದ್ಯಂತ ಛಲವಾದಿ ನಾರಾಯಣಸ್ವಾಮಿ ಅಭಿಮಾನಿಗಳು ಉಗ್ರ ಹೋರಾಟವನ್ನು ಮಾಡಲಾಗುವುದು ಹಾಗೂ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲಾಗುವುದು ಎಂದು ಈ ಮೂಲಕ ಪ್ರಖರವಾಗಿ ಎಚ್ಚರಿಸುತ್ತಿದ್ದೇವೆ.ನಿಮ್ಮ ಈ ಬಲಿತ ದಲಿತ ರಾಜಕೀಯ ಪ್ರವೃತ್ತಿಯನ್ನು ಈ ಕೂಡಲೇ ಕೈಬಿಟ್ಟು ಛಲವಾದಿ ನಾರಾಯಣಸ್ವಾಮಿ ಅವರಿಗೆ ಸೂಕ್ತ ಪೊಲೀಸ್ ಬಿಗಿ ಭದ್ರತೆ ನೀಡಬೇಕಾಗಿ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ.ಬಸವರಾಜ್ ಶಿರುಗುಂಪಿ,**ಬಿಜೆಪಿ ಯುವ ಮುಖಂಡರು, ಗಂಗಾವತಿ ವಿಧಾನಸಭಾ ಕ್ಷೇತ್ರ,**ಅಖಿಲ ಕರ್ನಾಟಕ ಡಾ. ಛಲವಾದಿ ನಾರಾಯಣಸ್ವಾಮಿ ಅಭಿಮಾನಿ ಬಳಗ.*
ಡಾ. ಛಲವಾದಿ ನಾರಾಯಣಸ್ವಾಮಿ ಮನೆಗೆ ಮಾರಕಾಸ್ತ್ರಗಳ ಹೋಂ ಡೆಲಿವರಿ: ಆರೋಪಿಗಳನ್ನು 2 ದಿನದಲ್ಲಿ ಬಂಧಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ – ಬಸವರಾಜ್ ಶಿರುಗುಂಪಿ ಎಚ್ಚರಿಕೆ..
