ಸವಿತಾ ಚಲವಾದಿ ಅವರ ಹುಟ್ಟುಹಬ್ಬದ ಸವಿನೆನಪಿಗಾಗಿ ಶಾಲಾ ವಿದ್ಯಾರ್ಥಿಗಳಿಗೆ ಪೆನ್ನು,ನೋಟಬುಕ್ ವಿತರಿಸಲಾಯಿತು.

ಸವಿತಾ ಚಲವಾದಿ ಅವರ ಹುಟ್ಟುಹಬ್ಬದ ಸವಿನೆನಪಿಗಾಗಿ ಶಾಲಾ ವಿದ್ಯಾರ್ಥಿಗಳಿಗೆ ಪೆನ್ನು,ನೋಟಬುಕ್ ವಿತರಿಸಲಾಯಿತು.

ಇಳಕಲ್:ಇಲ್ಲಿಯ ದೀಪು-ದೀಕ್ಷಾ ಸಂಸ್ಥೆ ಯ ಕಾರ್ಯದರ್ಶಿ ಮತ್ತು ಸಮಾಜ ಸೇವಕಿಯಾದ ಸವಿತಾ ಅಶೋಕ ಚಲವಾದಿ ಅವರ ಹುಟ್ಟು ಹಬ್ಬವನ್ನು ನಗರದ ಸರಕಾರಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಪೆನ್ನು,ನೋಟಬುಕ್ ವಿತರಿಸುವುದರ ಮೂಲಕ ಅತ್ಯಂತ ಸರಳ ರೀತಿಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಇಳಕಲ್ ನಗರದ ಹೆಸರಾಂತ ಸಂಸ್ಥೆಯಾದ ದೀಪು-ದೀಕ್ಷಾ ಸಂಸ್ಥೆ ಯ ಅಧ್ಯಕ್ಷರು,ಸಮಾಜ ಸೇವಕಾರದಾ ಅಶೋಕ ಚಲವಾದಿ ಅವರ ಧರ್ಮಪತ್ನಿ ಸವಿತಾ ಚಲವಾದಿ ಅವರು ತಮ್ಮ ಹುಟ್ಟುಹಬ್ಬವನ್ನು ಇಂದು ಬೆಳಗಿನ ಜಾವ ನಗರದ ಯೋಗಾ ಕುಟುಂಬದ ಜಾಗದಲ್ಲಿ ಸಸಿ ನೆಟ್ಟು ನಂತರ ನಗರದ ಸರಕಾರಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು,ಸರಕಾರಿ ಹೆಣ್ಣು ಮಕ್ಕಳ ಪ್ರೌಢ ಶಾಲೆ,ಶಾಸಕರ ಸರಕಾರಿ ಮಾದರಿ ಶಾಲೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಲಾ ಗುರುಲಿಂಗಪ್ಪ ಕಾಲೋನಿಯಲ್ಲಿ ಪೆನ್ನು,ನೋಟ ಪುಸ್ತಕಗಳನ್ನು ವಿತರಿಸುವ ಮೂಲಕ ಸರಳ ರೀತಿಯಲ್ಲಿ ಸವಿತಾ ಅವರು ತಮ್ಮ ಜನ್ಮ ದಿನವನ್ನು ಆಚರಿಸಿ ಕೊಂಡರು.ಇದೇ ಸಂದರ್ಭದಲ್ಲಿ ಶಾಲಾ,ಕಾಲೇಜಿನ ವತಿಯಿಂದ ಅಶೋಕ ಚಲವಾದಿ,ಮತ್ತು ಅವರ ಧರ್ಮಪತ್ನಿ ಸವಿತಾ ಚಲವಾದಿ ಅವರಿಗೆ ಪೂಜ್ಯ ಡಾ.ಗುರು ಮಹಾಂತ ಶ್ರೀಗಳು ಮತ್ತು ನಗರದ ಗಣ್ಯರು,ಶಿಕ್ಷಕವೃಂದದವರು ಗೌರವಿಸಿ ಸನ್ಮಾನಿಸಿದರು.

Leave a Reply

Your email address will not be published. Required fields are marked *