ಸುಂದರ ಕಲಾಕೃತಿಗಳ ಕಲಾಸೇವೆಯಲ್ಲಿ ‘ಹಂಪಿ ವಿಶ್ವಕರ್ಮ ಶಿಲ್ಪಕಲಾಭವನ’

ಸುಂದರ ಕಲಾಕೃತಿಗಳ ಕಲಾಸೇವೆಯಲ್ಲಿ ‘ಹಂಪಿ ವಿಶ್ವಕರ್ಮ ಶಿಲ್ಪಕಲಾಭವನ’

ವಿಜಯನಗರ / ಹಂಪಿ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವಿಶ್ವ ವಿಖ್ಯಾತ ಹಂಪಿ ರಸ್ತೆ ಕಡ್ಡಿರಾಂಪುರ ಕ್ರಾಸ್, ದ್ವಾರಬಾಗಿಲು ಹತ್ತಿರ ಇರುವ ‘ಹಂಪಿ ವಿಶ್ವಕರ್ಮ ಶಿಲ್ಪಕಲಾಭವನ’ದ ಶಿಲ್ಪಿ ಕೆ. ನಾಗರಾಜ್, 49 ವರ್ಷ, ಅವರು ಒಂದು ಕೈಯಲ್ಲಿ ಸುತ್ತಿಗೆ, ಮತ್ತೊಂದು ಕೈಯಲ್ಲಿ ಉಳಿ ಹಿಡಿದುಕೊಂಡು, ಇಂದಿನ ತಂತ್ರಜ್ಞಾನಗಳೊಂದಿಗೆ ಸುಂದರ ಕಲಾಕೃತಿಗಳನ್ನೂ ಕೆತ್ತುತ್ತಲೇ ಇರುತ್ತಾರೆ. ದಶಕಗಳ ಅವರ ಕಲಾಸೇವೆಯಲ್ಲಿ ಸಾವಿರಾರು ಶಿಲ್ಪಗಳು ಅರಳಿವೆ.ಇವರ ಕುಟುಂಬ ಸುಮಾರು 1995 ರಿಂದ ಈ ಶಿಲ್ಪ ಕಲಾವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದೆ. ಈ ಕುಟುಂಬದ ಕಲಾವಿದರು ದೇವರ ಮೂರ್ತಿಗಳ ತಯಾರಿಕೆಯಲ್ಲಿ ಸಿದ್ಧಹಸ್ತರು. ಕೆ. ನಾಗರಾಜ ಅವರೂ ದಶಕಗಳಿಂದ ಇಂಥದ್ದೇ ವೈವಿಧ್ಯಮಯ ಶಿಲ್ಪಗಳನ್ನು ತಯಾರಿಸಿಕೊಂಡು ಬಂದಿದ್ದಾರೆ.ಕೆ. ನಾಗರಾಜ ಅವರು 10ನೇ ತರಗತಿಗೆ ಓದನ್ನು ಮೊಟಕುಗೊಳಿಸಿ, ಶಿಲ್ಪಕಲಾ ವೃತ್ತಿಯನ್ನೇ ಮುಂದುವರಿಸಿದರು. ಅವರ ಪತ್ನಿ ಲಕ್ಷ್ಮಿ ಕೂಡಾ ಇವರ ವೃತ್ತಿಗೆ ಸಹಕರಿಸಿದ್ದಾರೆ, ನಂತರ, ತಮ್ಮ ಮಕ್ಕಳನ್ನೂ ಇದೇ ಕಲಾ ಕೈಂಕರ್ಯಕ್ಕೆ ಅಣಿಗೊಳಿಸಿದ್ದಾರೆ. ಸಾಂಪ್ರದಾಯಿಕ ಶಿಲ್ಪ ತಯಾರಿಕೆಯಲ್ಲಿ ತಜ್ಞರಾಗಿರುವ ಇವರು, ಆ ಜ್ಞಾನವನ್ನು ಮುಂದಿನ ತಲೆಮಾರಿಗೂ ಧಾರೆ ಎರೆದಿದ್ದಾರೆ.ಕೃಷ್ಣ ಕಲ್ಲಿನ ವಿಗ್ರಹ : ಕೆ. ನಾಗರಾಜ ಅವರು, ಹೆಚ್ಚಾಗಿ ಕರಿ, ಕೃಷ್ಣ ಶಿಲೆ, ಬಿಳಿ ಮೋಡಿ ಕಲ್ಲಿನಿಂದ ವಿಗ್ರಹಗಳನ್ನು ತಯಾರಿಸುತ್ತಾರೆ. ಈ ಕಲ್ಲಿನಲ್ಲಿ ತಯಾರಿಸುವ ವಿಗ್ರಹಗಳಿಗೆ ಬಲು ಬೇಡಿಕೆ ಇದೆ. ಮೈಸೂರು ಭಾಗದಿಂದ ಕಲ್ಲುಗಳನ್ನು ತರಿಸಿಕೊಳ್ಳುತ್ತಾರೆ. ಮೊದಲು ಬಾಗಲಕೋಟೆ, ಕಾಗಲಗುಮ್ಮ ಕಡೆಯಿಂದ ತರಿಸುತ್ತಿದ್ದರಂತೆ. ಈಗ ತಾಂತ್ರಿಕ ಕಾರಣಗಳಿಂದ, ಅಲ್ಲಿಂದ ಕಲ್ಲು ತರಿಸುತ್ತಿಲ್ಲ.ಒಂದೊಂದು ಕಲ್ಲಿನ ಮೂರ್ತಿ ಕೆತ್ತನೆಗೆ ಮೂರುರಿಂದ ನಾಲ್ಕು ತಿಂಗಳು ಬೇಕಾಗುತ್ತದೆ. ಕೆಲವೊಂದು ಮೂರ್ತಿಗಳನ್ನು ಒಂದು ವರ್ಷದ ಕಾಲಾವಧಿಯಲ್ಲಿ ಕೆತ್ತಿದ ಉದಾಹರಣೆಯೂ ಇದೆಯಂತೆ.ಅಪ್ಪನ ಕುಸುರಿ ಕೆಲಸಕ್ಕೆ ಮಗ ವಿರೇಶ ಜತೆಯಾಗಿದ್ದಾರೆ. ಚಿತ್ರಕಲೆಯಲ್ಲಿ ಡಿಪ್ಲೊಮಾ ಪೂರೈಸಿರುವ ಅವರು, ಈ ಹಿಂದೆ ಬೆಂಗಳೂರಿನಲ್ಲಿ ಚಿತ್ರಕಲಾ ಪರಿಷತ್ ನಲ್ಲಿ ತರಬೇತಿ ಪಡೆದಿದ್ದಾರೆ . ತಂದೆಯೊಂದಿಗೆ ಶಿಲ್ಪಗಳನ್ನು ಕೆತ್ತುವ ಕೆಲಸಕ್ಕೆ ಕೈಜೋಡಿಸಿದ್ದಾರೆ. ಇವರೊಂದಿಗೆ ಅವರ ತಮ್ಮ ಕಿರಣ್ ಹಾಗೂ ಇನ್ನಿಬ್ಬರು ಕೆತ್ತನೆ ಕೆಲಸದಲ್ಲಿ ಜತೆಯಾಗುತ್ತಾರೆ. ಒಟ್ಟಾರೆ, ಇಡೀ ಕುಟುಂಬವೇ ಶಿಲ್ಪಗಳ ಕೆತ್ತನೆಯಲ್ಲಿ ತೊಡಗಿಕೊಳ್ಳುತ್ತದೆ.ಆಧುನಿಕ ತಂತ್ರಜ್ಞಾನ : ಆರಂಭದಲ್ಲಿ ಉಳಿ–ಸುತ್ತಿಗೆಗಳಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ ಅವರಿಗೆ, ಜತೆಯಾದ ಮೇಲೆ ಯಂತ್ರಗಳನ್ನು ಬಳಸಲು ಆರಂಭಿಸಿದ್ದಾರೆ.

ಇವರು ಕಲ್ಲಿನಲ್ಲಿ ಕೆತ್ತಿರುವ ಮೂರ್ತಿಗಳನ್ನು ಕಂಡು ಇದು ನಾಗರಾಜ ಕುಟುಂಬದ ಶಿಲ್ಪಕಲೆಯ ಕೌಶಲಕ್ಕೆ ಹಿಡಿದ ಕನ್ನಡಿಯಾಗಿದೆ.ಕೆ. ನಾಗರಾಜ ಕುಟುಂಬ ತಯಾರಿಸಿದ ಶಿಲ್ಪಗಳು ರಾಜ್ಯದ ಬಳ್ಳಾರಿ, ಹೂವಿನ ಹಡಗಲಿ, ಕೊಪ್ಪಳ, ಗಂಗಾವತಿ, ಹಾವೇರಿ, ರಾಯಚೂರು ಸಿಂಧನೂರು, ಬೆಂಗಳೂರು, ಕಲಬುರ್ಗಿ ಜಿಲ್ಲೆಗಳ, ಮೈಸೂರನ ಕೆ ಆರ್ ಎಸ್, ಅಣ್ಣೆಕಟ್ಟು ಹಿಂಭಾಗದ ವೇಣುಗೋಪಾಲ್ ದೇಗುಲಗಳಲ್ಲಿ 48 ವಿಗ್ರಹಗಳು ಪತ್ರಿಷ್ಠಾನಗೊಂಡಿವೆ. ಈಗಲೂ ಶಿಲ್ಪಗಳ ತಯಾರಿಕೆಗಾಗಿ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಅಮೇರಿಕಾದ ಒಕ್ಲಹೋಮ ಸಿಟಿಯಲ್ಲಿ 2002ರಲ್ಲಿ ಸ್ಥಾಪಿತವಾದ ಲಕ್ಷ್ಮಿ ಮೂರ್ತಿ ಹಲವು, ಸೇರಿದಂತೆ ಅಕ್ಕಪಕ್ಕದ ರಾಜ್ಯಗಳಿಂದ ಬೇಡಿಕೆ ಇದೆ. ಆದರೆ, ಕಚ್ಚಾ ವಸ್ತುಗಳು ಸಿಗುವುದೇ ಕಷ್ಟವಾಗಿದೆ’ ಎನ್ನುತ್ತಾರೆ ನಾಗರಾಜರವರು.ಅಭಿರುಚಿಗೆ ತಕ್ಕಂತೆ ಶಿಲ್ಪಗಳು : ಗ್ರಾಹಕರ ಬೇಡಿಕೆ, ಅಭಿರುಚಿಗೆ ತಕ್ಕಂತೆ ಶಿಲ್ಪಗಳನ್ನು ತಯಾರಿಸಿಕೊಡುವ ನಾಗರಾಜ, ಶಿಲ್ಪಕಲೆಯ ಜತೆಗೆ ಪೇಂಟಿಂಗ್‌ನಲ್ಲೂ ಪರಿಣತಿ ಪಡೆದಿರುವ ಈ ಕುಟುಂಬ, ಈಶ್ವರ, ಶಿವಲಿಂಗ, ಗಣಪತಿ, ಬುದ್ಧ, ಬಸವ, ಅಂಬೇಡ್ಕರ್, ನಾಗದೇವತೆ,ದೇವರ ಎದುರಿನ ಬಸವ, ತುಳಿಸಿ ಕಟ್ಟೆ, ದೇವಿಗಳ, ಸಂತರ, ಕವಿಗಳ, , ಕಟ್ಟಿಗೆಯಲ್ಲಿ ತಯಾರಿಸುವ ಆಕರ್ಷಕವಾಗಿ ಪೇಂಟಿಂಗ್ ಮಾಡುತ್ತಾರೆ.ಇತ್ತೀಚೆಗೆ ನಾಗರಾಜ ಅವರ ಮನೆಯ ಅಂಗಳದಲ್ಲಿ ಹೊಸ ತಲೆಮಾರಿನ ಶಿಲ್ಪಗಳೂ ತಯಾರಾಗುತ್ತಿವೆ.

ಅದರಲ್ಲಿ ಹಲವು ರಾಜಕೀಯ ನೇತಾರರು, ವೀರಯೋಧರ ಮೂರ್ತಿಗಳೂ ಸೇರಿವೆ.‌‌ಶಿಲ್ಪಕಲೆಯಲ್ಲಿ ಇಷ್ಟೆಲ್ಲ ಸೇವೆ ಸಲ್ಲಿಸಿರುವ ನಾಗರಾಜ ಅವರನ್ನು ಸ್ಥಳೀಯವಾಗಿ ಹಲವಾರು ಯುವಕ ಮಂಡಳಗಳು ಗೌರವಿಸಿವೆ. ಆದರೆ, ರಾಜ್ಯಮಟ್ಟದಲ್ಲಿ ಇವರನ್ನು ಗುರುತಿಸುವ ಕೆಲಸವಾಗಿಲ್ಲ. ಇದೇ ನೋವಿನ ಸಂಗತಿ ಎನ್ನುತ್ತಾರೆ ಸ್ಥಳೀಯರು. ಶಿಲ್ಪಿಯ ಸಂಪರ್ಕಕ್ಕೆ: 9535899708, 9480059289. (ಕೆ.ನಾಗರಾಜ)ಕೋಟ್ #ಸರ್ಕಾರ ನೆರವು ನೀಡಿದರೆ, ಈ ಶಿಲ್ಪ ಕೆತ್ತನೆಯ ಕೌಶಲ ಕೇಂದ್ರ ತೆರೆದು, ಆಸಕ್ತರಿಗೆ ತರಬೇತಿ ನೀಡಲು ಸಿದ್ಧರಿದ್ದೇವೆ. ಈ ಕಲೆ ಉಳಿಯಬೇಕು, ಮುಂದಿನ ಪೀಳಿಗೆಗೂ ತಿಳಿಸಬೇಕು. ಇನ್ನಷ್ಟು ಮಂದಿಗೆ ಉದ್ಯೋಗ ಸಿಗುವಂತಾಗಬೇಕು ಎಂಬುದು ನಮ್ಮ ಕುಟುಂಬದ ಬಯಕೆ– ಕೆ. ನಾಗರಾಜ, ಶಿಲ್ಪಿಗಾರರು,ಹಂಪಿ.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *