ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ ಕಾರ್ಯಕ್ರಮ.

ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ ಕಾರ್ಯಕ್ರಮ.

ಬಳ್ಳಾರಿ / ಕಂಪ್ಲಿ : ಯುವ ಜನಾಂಗ ಮಾದರಿಯಾದ ಅಕ್ಷರ ಕಲ್ಲಿಸಿದ ಗುರುಗಳನ್ನೆಲ್ಲ ಸನ್ಮಾನಿಸಿ ಗೌರವಿಸಿದ ಗುರುವಂದನೆ ಕಾರ್ಯಕ್ರಮ ತಾಲೂಕಿನ ಚಿಕ್ಕ ಜಾಯಿಗನೂರು ಗ್ರಾಮದ ನೇತಾಜಿ ಸುಭಾಸ್ ಚಂದ್ರ ಬೋಸ್ ಸರ್ಕಾರಿ ಪ್ರೌಢ ಶಾಲೆ ಯಲ್ಲಿ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭಾನುವಾರ ನಡೆಯಿತು.ಶಾಲಾ ಆವರಣದಲ್ಲಿ ಅದೇ ಶಾಲೆಯ 1999-2000ನೇ ಸಾಲಿನ ಹತ್ತನೆ ತರಗತಿ ವಿದ್ಯಾರ್ಥಿಗಳು ಈ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಹಳೇ ವಿದ್ಯಾರ್ಥಿಗಳೆಲ್ಲ ತಮ್ಮ ಪ್ರಾಥಮಿಕ, ಪ್ರೌಢ ಶಾಲೆಯ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆ ನೀಡಿದರು. ನಿವೃತ್ತ ಶಿಕ್ಷಕ ಚಂದ್ರಶೇಖರ ಮಾತನಾಡಿ ಸಮಾಜದಿಂದ ನಾವು ಏನಾದರೂ ಪಡೆಯುವುದಕ್ಕಿಂತ ಮೊದಲು ಸಮಾಜಕ್ಕೆ ನಾನೇನು ಮಾಡಿದ್ದೇನೆ ಎಂಬುದನ್ನು ನಾವು ಮನದಟ್ಟುಮಾಡಿಕೊಳ್ಳಬೇಕು. ಸಮಾಜಕ್ಕೆ ಒಳಿತಾಗುವ ಕಾರ್ಯ ಮಾಡಿ ಆದರ್ಶ ವ್ಯಕ್ತಿಗಳಾಗಿ ಬಾಳಬೇಕು.ವಿದ್ಯಾರ್ಥಿಗಳಲ್ಲಿನ ಆತ್ಮವಿಶ್ವಾಸ ಹೆಚ್ಚಿಸಿದಾಗ ಮಾತ್ರ ಗುರುಶಿಷ್ಯರಲ್ಲಿ ಬಾಂಧವ್ಯ ಹುಟ್ಟಿಕೊಳ್ಳುತ್ತದೆ. ಅದು ಶಿಷ್ಯಂದಿರಲ್ಲಿ ಪ್ರೀತಿವಿಶ್ವಾಸ ಹೆಚ್ಚಿಸಲು ಮೂಲ ಕಾರಣವಾಗುತ್ತದೆ. ಜನತೆಯ ಪ್ರೀತಿವಿಶ್ವಾಸ ಎಂದಿಗೂ ಅಜರಾಮರ ಗುರುಶಿಷ್ಯರ ನಡುವಿನ ಪ್ರೀತಿ ವಿಶ್ವಾಸವೆ ಇಂದು ನಡೆಯುತ್ತಿರುವ ಗುರುವಂದನಾ ಕಾರ್ಯಕ್ರಮ ಗುರುಶಿಷ್ಯರ ಸಮಾಗಮಕ್ಕೆ ಮೂಲ ಕಾರಣ ಎಂದರು. ಹಾಗೆಯೇ ಎಲ್ಲಾ ಶಿಕ್ಷಕರು ಹಳೇ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಹಳೆ ವಿದ್ಯಾರ್ಥಿಗಳಾದ ಮಂಗಮ್ಮ ವೀರಭದ್ರ ಶಿವರಾಮ ಪ್ರಸಾದ ಮಲ್ಲಿಕಾರ್ಜುನ ತಮ್ಮ ಶಾಲಾ ಅನುಭವದ ನೆನಪುಗಳ ಅನಿಸಿಕೆಗಳನ್ನು ಹಂಚಿಕೊಂಡರು .ಶಿಕ್ಷಕರಾದ ಚಂದ್ರಶೇಖರ, ಮುರ್ತುಜಾ ಖಾದ್ರಿ, ಶಂಕ್ರಮ್ಮ, ಬಸನಗೌಡ, ರಾಮಚಂದ್ರ, ರಾಜಶೇಖರ, ಶಿವರುದ್ರ, ಜಡಿಯಪ್ಪ ಚನ್ನಬಸಪ್ಪ ಗುರುಗಳು ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿದರು.ಎಲ್ಲಾ ಶಿಕ್ಷಕರಿಗೆ ಎಲ್ಲಾ ಹಳೆ ವಿದ್ಯಾರ್ಥಿಗಳು ಗೌರವಿಸಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು. ಎಲ್ಲಾ ಶಿಕ್ಷಕರಿಗೆ ಗ್ರಾಮದ ಈಶ್ವರ ದೇವಾಲಯದಿಂದ ಶಾಲೆ ಆವರಣದವರೆಗೂ ಮೆರವಣಿಗೆಯ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು. ವಿಶೇಷವಾಗಿ ಹಳೆಯ ಶಿಕ್ಷಕರಿಂದ ಸಸಿಯನ್ನು ನೆಡುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸಲಾಯಿತು. ಕಾರ್ಯಕ್ರಮ ಹಾಗೂ ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಹಳೆಯ ವಿದ್ಯಾರ್ಥಿಗಳಾದ ವೀರೇಶ, ವೀರಭದ್ರ, ಮಲ್ಲಿಕಾರ್ಜುನ. ಜೆ, ಗುರುರಾಜ, ರವಿಕುಮಾರ, ಮಂಗಮ್ಮ, ಮಂಗಳ ಗೌರಿ, ಪುಷ್ಪಾವತಿ, ಹನುಮಂತ್ ರೆಡ್ಡಿ, ವಿಶ್ವನಾಥ, ಬಸವರಾಜ, ಸೇರಿದಂತೆ 28ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *