ಫೆ 15 ಕ್ಕೆ ಸಂತ ಸೇವಾಲಾಲ ಜಯಂತಿ ಆಚರಣೆ:ಬಂಜಾರ ಸಮಾಜ ಸ್ಪಷ್ಟನೆ….

ಫೆ 15 ಕ್ಕೆ ಸಂತ ಸೇವಾಲಾಲ ಜಯಂತಿ ಆಚರಣೆ:ಬಂಜಾರ ಸಮಾಜ ಸ್ಪಷ್ಟನೆ.

ಇಳಕಲ್:ಇಲ್ಲಿನ ಬಂಜಾರ ಸಮಾಜದ ನೂತನ ತಾಲೂಕಾ ಸಮಿತಿಯನ್ನು ಆಯ್ಕೆ ಮಾಡಿದ್ದೇವೆ ಎಂದು ಬಂಜಾರ ಸಮಾಜದ ಮುಖಂಡರು ಇಳಕಲ್ ನಗರದ ಕೀರಿಯಾಡ ಖಾಸಗಿ ಹೋಟೆಲ್ ನಲ್ಲಿ ಕರೆದ ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ಬಂಜಾರ್ ಸಮಾಜದ ನೂತನ ಅಧ್ಯಕ್ಷರಾಗಿ ದೀಪಕ್ ರಾಠೋಡ್,ಉಪಾಧ್ಯಕ್ಷರಾಗಿ ಸಂತೋಷ ಪೂಜಾರ,ಕಾರ್ಯದರ್ಶಿಯಾಗಿ ವಾಸುದೇವ ರಾಠೋಡ,ಖಜಾಂಚಿಯಾಗಿ ದೊಡ್ಡಪ್ಪ ಚವ್ಹಾಣ್,ಗೌರವಾಧ್ಯಕ್ಷರಾಗಿ ಕಾಳಪ್ಪ ಗಡಾದ,ಸಲಹಾ ಸಮಿತಿ ಅಧ್ಯಕ್ಷರಾಗಿ ವಿಷ್ಣು ರಜಪೂತ್ ಆಯ್ಕೆಗೊಂಡಿದ್ದಾರೆ.ಬಂಜಾರ ಸಮಾಜವು ಇಲ್ಲಿಯ ವರೆಗೂ ಯಾವುದೇ ರಂಗದಲ್ಲಿ ಗುರಿತಿಸಿಕೊಳ್ಳದ ಕಾರಣ ಇಂದು ನೂತನ ಕಮಿಟಿರಚಿಸಿದ ಬೆನ್ನಲ್ಲೇ ಅಧ್ಯಕ್ಷ ದೀಪಕ್ ರಾಠೋಡ ಅವರ ಸಮ್ಮುಖದಲ್ಲಿ ನಮ್ಮ ಸಮಾಜದ ಮಕ್ಕಳ ಸಲುವಾಗಿ ಶಿಕ್ಷಣ ಸಂಸ್ಥೆ,ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಹಣದ ಸಹಾಯ,ಯುವಕರಿಗೆ ಹುದ್ದೋಗ ಇನ್ನು ಹಲವಾರು ಕಾರ್ಯ ಚಟುವಟಿಕೆಗಳನ್ನು ಮಾಡುವುದಷ್ಟೇ ಅಲ್ಲದೇ ಬಂಜಾರ ಸಮಾಜವು ಎಲ್ಲರಂಗದಲ್ಲೂ ಗುರು ತಿಸುವಂತಹ ಕೆಲಸ ಮಾಡುತ್ತೇವೆ ಎಂದು ಹೇಳುತ್ತಾ ಬರುವ ತಿಂಗಳು ಫೆ.15 ರಂದುನಮ್ಮ ಸಮಾಜದ ಶ್ರೀ ಸಂತ ಸೇವಾಲಾಲ್ ಅವರ ಜಯಂತಿಯನ್ನು ಇಳಕಲ್ ನಗರದ ಹೃದಯ ಬಾಗವಾದ ಎಸ್.ಆರ್.ಕಂಠಿ ವೃತ್ತದಲ್ಲಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿದ್ದೇವೆ.ಬಸವೇಶ್ವರ ನಗರದ ಮೂಲಕ ಎಸ್.ಆರ್. ಕಂಠಿ ವೃತ್ತದ ವೆರಗೂಸಂತ ಸೇವಾಲಾಲ ಭಾವಚಿತ್ರಕ್ಕೆ ಮೆರವಣಿಗೆ ಮಾಡಿದ ನಂತರ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಈ ಸುಂದರ ಕಾರ್ಯಕ್ರಮಕ್ಕೆ ಬಂಜಾರ ಸಮಾಜ ಹಾಗೂ ತಾಲೂಕಿನ ವಿವಿಧ ಸಮಾಜದ ಬಂಧುಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕು ಎಂದು ನುಡಿದರು.ಇದೇ ಸಂದರ್ಭದಲ್ಲಿಸಮಾಜದ ಹಿರಿಯರು,ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *