ಸವಿತಾ ಮಹರ್ಷಿ ಕೊಡುಗೆ ಅನನ್ಯ : ಜೂಗಲ್ ಮಂಜುನಾಯಕ…

ಸವಿತಾ ಮಹರ್ಷಿ ಕೊಡುಗೆ ಅನನ್ಯ : ಜೂಗಲ್ ಮಂಜುನಾಯಕ…

ಕಂಪ್ಲಿ : ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ, ಕಂಪ್ಲಿ ತಾಲೂಕು ಸವಿತಾ ಸಮಾಜದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಭಾನುವಾರ ಅರ್ಥಪೂರ್ಣವಾಗಿ ಜರುಗಿತು. ನಂತರ ತಹಶೀಲ್ದಾರ್ ಜೂಗಲ್ ಮಂಜುನಾಯಕ ಮಾತನಾಡಿ, ನಾಡಿಗೆ ಸವಿತಾ ಮಹರ್ಷಿಯವರು ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅವರ ದಾರಿಯಲ್ಲಿ ನಡೆದರೆ, ಜೀವನ ಸುಂದರವಾಗಿರುತ್ತದೆ ಎಂದರು. ನಂತರ ಕಂಪ್ಲಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಎ.ಹನುಮಂತಪ್ಪ ಮಾತನಾಡಿ, ಸವಿತಾ ಸಮಾಜವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದೆ. ಸರ್ಕಾರದ ಕೂಡಲೇ ವಿಶೇಷ ಯೋಜನೆಗಳನ್ನು ನೀಡುವ ಜೊತೆಗೆ ಸವಿತಾ ಸಮಾಜದ ಅಭಿವೃದ್ಧಿ ದೃಷ್ಠಿಯಿಂದ ಕಾಳಜಿವಹಿಸಿ, ಸಮಾಜವನ್ನು ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರಿಸಬೇಕೆಂದು ಒತ್ತಾಯಿಸಿದರು.

ವಿವೇಕಾನಂದ ಶಾಲೆಯ ಮುಖ್ಯಗುರು ಬಿ ಜಿಲಾನಸಾಬ್ ಉಪನ್ಯಾಸ ನೀಡಿ ಮಾತನಾಡಿ, ಸವಿತಾ ಮಹರ್ಷಿ ಅವರ ಆದರ್ಶಗಳ ಪರಿಪಾಲನೆಯೊಂದಿಗೆ ಸಾಗಿದರೆ, ಬದುಕು ಉತ್ತಮವಾಗಿರುತ್ತದೆ. ಮತ್ತು ಸಮಾಜದ ಬದಲಾವಣೆಗೆ ಶಿಕ್ಷಣ ಅತಿಮುಖ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ತಾಪಂ ಇಒ ಆರ್.ಕೆ.ಶ್ರೀಕುಮಾರ, ಶಿರಸ್ತೇದಾರರಾದ ಪಂಪಾಪತಿ, ರಮೇಶ, ಕಂಪ್ಲಿ ತಾಲೂಕು ಸವಿತಾ ಸಮಾಜದ ಖಜಾಂಚಿ ಕೆ.ಆನಂದ, ಮುಖಂಡರಾದ ಎ.ಹನುಮಂತಪ್ಪ, ಕೆ.ಶ್ರೀನಿವಾಸ, ಪಾಂಡುರಂಗ, ಎ.ಅಂಜಿನಪ್ಪ, ಹೆಚ್.ಈರಣ್ಣ, ಜಿ.ಎಚ್.ಗಾದಿಲಿಂಗ, ಕೆ.ಆನಂದ, ಕೆ.ಗೋಪಾಲ ಸೇರಿದಂತೆ ಇತರರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *