ಹೊಸಗೇರಪ್ಪಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರದ ಗೌರವ.

ಕಂಪ್ಲಿ: ಬಳ್ಳಾರಿ ನಗರದ ವಾಲ್ಮೀಕಿ ಭವನದಲ್ಲಿ ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದಿಂದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಅಂಗವಾಗಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕಂಪ್ಲಿ-ಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಹೊಸಗೇರಪ್ಪ ಇವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದರು.ಪ್ರಶಸ್ತಿ ಪುರಸ್ಕೃತ ಹೊಸಗೇರಪ್ಪ ಮಾತನಾಡಿ, ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವಂತೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಜೊತೆಗೆ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಾ ಬಂದ ಹಿನ್ನಲೆ ನಮ್ಮ ಸೇವೆಯನ್ನು ಗುರುತಿಸಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿರುವುದು ಮತ್ತಷ್ಟು ಸೇವೆಗೆ ಪ್ರೋತ್ಸಾಹ ನೀಡುವ ಜೊತೆಗೆ ಖುಷಿ ತಂದಿದೆ. ಈ ಪ್ರಶಸ್ತಿಯೊಂದಿಗೆ ಮುಂದಿನ ದಿನದಲ್ಲಿಯೂ ಇನ್ನಷ್ಟು ಉತ್ತಮ ಸೇವೆಗಳನ್ನು ಮಾಡಲಾಗುವುದು ಎಂದರು.ಈ ಸಂದರ್ಭದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ಸನ್ಮಾನ : ಕಂಪ್ಲಿ-ಕೋಟೆಯ ಸ.ಹಿ.ಪ್ರಾ ಶಾಲೆಯಲ್ಲಿ ಪ್ರಶಸ್ತಿ ಪುರಸ್ಕೃತ ಹೊಸಗೇರಪ್ಪ ಇವರನ್ನು ಶುಕ್ರವಾರ ಸನ್ಮಾನಿಸಿ ಗೌರವಿಸಲಾಯಿತು. ನಂತರ ಸ್ವಾಮಿ ವಿವೇಕಾನಂದ ಶಾಲೆಯ ಮುಖ್ಯಗುರು ಬಿ. ಜಿಲಾನಸಾಬ್ ಮಾತನಾಡಿ, ಕಂಪ್ಲಿ ತಾಲೂಕಿನ ನಂ.10 ಮುದ್ದಾಪುರ ಸ.ಹಿ.ಪ್ರಾ ಶಾಲೆಯಲ್ಲಿ ಕ್ರಿ.ಶ.1999ರಿಂದ 2016ವರೆಗೆ ಸತತ 15 ವರ್ಷ ಸೇವೆ ಸಲ್ಲಿಸಿದ್ದಾರೆ. ನಂತರ ಕಂಪ್ಲಿ-ಕೋಟೆಯ ಸರ್ಕಾರಿ ಶಾಲೆಯಲ್ಲಿ 2016ರಿಂದ ಇಲ್ಲಿವರೆಗೂ ಸೇವೆ ಮಾಡುತ್ತಾರೆ. ಪ್ರತಿ ವರ್ಷದಲ್ಲಿ ನೀಡುವ ಪ್ರಶಸ್ತಿ ಅಸಮಾಧಾನಿತವಾಗಿದೆ. ಕಲ್ಯಾಣ ನಿಧಿಗೆ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಯಿಂದ ನಿಧಿ ಕಟ್ಟಲಾಗುತ್ತಿದೆ. ಆದ್ದರಿಂದ ಶಿಕ್ಷಕರ ಕಲ್ಯಾಣ ನಿಧಿಯಿಂದ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಯ ಒಬ್ಬರಿಗೆ ಜಿಲ್ಲಾ ಮಟ್ಟ ಉತ್ತಮ ಪ್ರಶಸ್ತಿ ನೀಡಬೇಕೆಂಬ ಹಕ್ಕೋತ್ತಾಯ ಮಾಡಿದರು. ಈ ವೇಳೆ ಹಿರಿಯ ಶಿಕ್ಷಕ ಚಂದ್ರಶೇಖರ, ಮುಖಂಡ ಹುಸೇನ್ ಸಾಬ್ ಇದ್ದರು. ವರದಿ : ಜಿಲಾನಸಾಬ್ ಬಡಿಗೇರ್
