ಮಾರುಕಟ್ಟೆ ಕೌಶಲ್ಯಗಳ ಮೂಲಕ ಬಿಬಿಎ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಬೇಕು:ಡಾ.ಶಿವರಾಜ್ ಗುರಿಕಾರ.

ಮಾರುಕಟ್ಟೆ ಕೌಶಲ್ಯಗಳ ಮೂಲಕ ಬಿಬಿಎ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಬೇಕು:ಡಾ.ಶಿವರಾಜ್ ಗುರಿಕಾರ.

ಗಂಗಾವತಿ: ಮಾರುಕಟ್ಟೆಯ ಕೌಶಲ್ಯಗಳ ಬಗ್ಗೆ ಮನವರಿಕೆ ಮಾಡಿಕೊಂಡು ಬಿವಿಎ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಕೊಲ್ಲಿ ನಾಗೇಶ್ವರ ಸರಕಾರಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಿವರಾಜ್ ಗುರಿಕಾರ್ ಹೇಳಿದರು.ಅವರು ನಗರದ ಕೊಲ್ಲಿ ನಾಗೇಶ್ವರರಾವ್ ಸರ್ಕಾರಿ ಮಹಾವಿದ್ಯಾಲಯದ ಬಿಬಿಎ ವಿದ್ಯಾರ್ಥಿಗಳು ಮಾರುಕಟ್ಟೆ ಕೌಶಲ್ಯ ಉತ್ಕರ್ಷ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.ವಿದ್ಯಾರ್ಥಿಗಳ ಸೃಜನಶೀಲತೆ, ವ್ಯವಹಾರಿಕ ಜಾಣ್ಮೆ ಮತ್ತು ನಿರ್ವಹಣಾ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಮಾರುಕಟ್ಟೆ ಮೇಳವನ್ನು ರೂಪಿಸಲಾಗಿದೆ. ಈ ಭಾಗದಲ್ಲಿ ನಮ್ಮ ಕಾಲೇಜಿನ ಬಿಬಿಎ ವಿಭಾಗವು ಸುಮಾರು ೨೫ ವರ್ಷಗಳಿಂದ ನಿರ್ವಹಣಾ ಶಾಸ್ತ್ರ ಶಿಕ್ಷಣವನ್ನು ನೀಡುತ್ತಾ ಬಂದಿದೆ. ರಾಜ್ಯ ಮತ್ತು ದೇಶದ ವಿವಿಧ ಕಂಪನಿಗಳು ಮತ್ತು ಸರ್ಕಾರಿ ಹುದ್ದೆಗಳಲ್ಲಿ ನಮ್ಮ ಕಾಲೇಜಿನ ಬಿಬಿಎ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿರುವುದು ಕಾಲೇಜಿಗೆ ಹೆಮ್ಮೆಯ ವಿಷಯವಾಗಿದೆ ಪ್ರಸ್ತುತ ಇರೋ ವಿದ್ಯಾರ್ಥಿಗಳು ಸಹ ಬಿಬಿಎ ಕೋರ್ಸ್ ನಲ್ಲಿ ಅತ್ಯುತ್ತಮ ಜ್ಞಾನ ಪಡೆಯುವ ಮೂಲಕ ಊರಿಗೆ ಕೀರ್ತಿ ತರುವಂತೆ ಕರೆ ನೀಡಿದರು. ಕಾರ್ಯಕ್ರಮವು ವಿದ್ಯಾರ್ಥಿಗಳ ಜಾಹೀರಾತು ಕೌಶಲ್ಯ, ನವೀನ ಚಿಂತನೆ ಮತ್ತು ಸಂವಹನ ಸಾಮರ್ಥ್ಯವನ್ನು ಉತ್ತೇಜಿಸಿತು. ತಂಡಗಳ ಸೃಜನಶೀಲ ಅಭಿವ್ಯಕ್ತಿ, ಮನೋಜ್ಞ ಸಂಭಾಷಣೆಗಳ, ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಒಟ್ಟು ೧೨ ತಂಡಗಳ ವಿದ್ಯಾರ್ಥಿಗಳು ವಿವಿಧ ಮಾರ್ಕೆಟಿಂಗ್ ಸ್ಟಾಲ್‌ಗಳ ಪ್ರದರ್ಶನವನ್ನು ನಡೆಸಿದರು. ಆಹಾರ, ಪುಸ್ತಕ ಮತ್ತು ಲೇಖನ ಸಾಮಾಗ್ರಿಗಳ, ಆಟಗಳ ಸ್ಟಾಲ್‌ಗಳು, ಹೊಸ ವ್ಯವಹಾರಿಕ ಕಲ್ಪನೆಗಳು ಮೊದಲಾದ ವಿಭಾಗಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಿದರು. ಈ ಚಟುವಟಿಕೆ ವಿದ್ಯಾರ್ಥಿಗಳಿಗೆ ಮಾರಾಟ ನಿರ್ವಹಣೆ, ಗ್ರಾಹಕ ಸಂಪರ್ಕ, ಬಜೆಟ್ ಯೋಜನೆ, ಮಾರುಕಟ್ಟೆ ತಂತ್ರ ಮತ್ತು ತಂಡದ ಜೊತೆ ಕೆಲಸ ಮಾಡುವ ಅನುಭವವನ್ನು ಒದಗಿಸಿತು. ಕಾಲೇಜು ಆವರಣದಲ್ಲಿ ಚೈತನ್ಯಮಯ ವಾಣಿಜ್ಯ ವಾತಾವರಣ ನಿರ್ಮಾಣವಾಗಿ ಮೇಳವು ಯಶಸ್ವಿಯಾಯಿತು.ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಡಾ.ಮಮ್ತಾಜ್ ಬೇಗಂ, ಡಾ.ಕೃಷ್ಣ ಜೆ, ಡಾ.ಇಬ್ರಾಹಿಂ ಸಾಬ್, ಡಾ. ಮುಮ್ತಾಜ್ ಬೇಗಂ, ಡಾ.ಅನಿಲ್ ಕುಮಾರ್ ಎಡ್ವರ್ಡ್ , ಡಾ. ಶೋಭಾ ಕೆ.ಎಸ್., ಭಾರಿಕರ್ ಪಣಿರಾಜ್, ಡಾ.ಮಂಜುನಾಥ್ ಕೆ. ಹೆಚ್., ಡಾ.ರವಿ ಕೆ.ಎನ್., ಅಕ್ಕಿಮಾರುತಿ, ರವಿ ಹಾದಿಮನಿ, ಮೆಹತಾಬ್ ಅಂಜುಮ್,ಮಲ್ಲಿಕಾರ್ಜುನ ಡಿ, ಸುಮಲತಾ ಎಸ್, ಭೂಮಿಕಾ ಎ, ಸಲೀಂ, ಡಾ. ಅಶೋಕ್ ಕೆ, ನಯನ ಎಸ್, ಕಚೇರಿಯ ಸಿಬ್ಬಂದಿ ವರ್ಗದವರಾದ ರಾಘಮ್ಮ ಸಿ, ಶಾಮೀದ್, ಪ್ರತಿಭಾ ಮುದಗಲ್, ವೀರೇಶ್ ಮತ್ತು ದುರ್ಗೇಶ್ ಹಾಗೂ ಎಲ್ಲಾ ಅತಿಥಿ ಉಪನ್ಯಾಸಕರಿದ್ದರು.

Leave a Reply

Your email address will not be published. Required fields are marked *