ಮನರಂಜಿಸಿದ ಸಂಗೀತ ಸ್ವರ ಸಾಗರ ಇವೆಂಟ್ ..

ಮನರಂಜಿಸಿದ ಸಂಗೀತ ಸ್ವರ ಸಾಗರ ಇವೆಂಟ್ ..

ಹೊಸಪೇಟೆ,08 : ನಗರದ ಸರ್ಕಾರಿ ನೌಕರರ ಭವನದಲ್ಲಿ ಸಂಗೀತ ಸ್ವರ ಸಾಗರ ಇವೆಂಟ್ ನೋಡುಗರ ಮನರಂಜಿಸಿತು. ಸಿ.ಪಿ.ಶಶಿಕಲಾ ಮತು ಪುಷ್ಪಲತಾ ಇವರ ಸಹಯೋಗದಲ್ಲಿ ಹಳೆಯ ಮತ್ತು ಹೊಸ ಕನ್ನಡ ಗೀತೆಗಳ ಗಾಯನ ಸಮಾಗಮ ನಡೆಯಿತು ರಾಜ್ಯದ ಬೆಂಗಳೂರು, ಮಂಗಳೂರು, ಬಾಗಲಕೋಟೆ, ಧಾರವಾಡ, ಬಳ್ಳಾರಿ, ಕೊಪ್ಪಳ, ರಾಯಚೂರು, ಮತ್ತು ಸ್ಥಳೀಯ ವಿಜಯನಗರ ಜಿಲ್ಲೆಯಿಂದ ಗಾಯಕರುಆಗಮಿಸಿ ಕನ್ನಡದ ಡಾ.ರಾಜಕುಮಾರ, ವಿಷ್ಣುವರ್ಧನ, ಅಂಬರೀಶ ಸೇರಿದಂತೆ ಈಗಿನ ಹೊಸ ನಟರ ಹಳೆಯ ಮತ್ತು ಹೊಸ ಗೀತೆಗಳನ್ನು ಹಾಡಿ ನೋಡುಗರ ಮನರಂಜಿಸಿದರು ಗೀತೆಗಳನ್ನು ಹಾಡಿದ ಗಾಯಕರಿಗೆ ಪ್ರೆಸ್ ಕ್ಲಬ್ ನ ಜಿಲ್ಲಾಧ್ಯಕ್ಷ ಪ್ರಕಾಶ್ ಕಾಕುಬಾಳು ಹಾಗು ಸಿ.ಪಿ.ಶಶಿಕಲಾ ಅವರು ಪ್ರಮಾಣಪತ್ರಗಳನ್ನು ವಿತರಿಸಿದರು ಈ ಸಂದರ್ಭದಲ್ಲಿ ನಿರೂಪಣೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಕೊಪ್ಪಳ ತಾಲೂಕು ಕುಂಬಾರ ಸಮಾಜದ ಅಧ್ಯಕ್ಷ ಡಾ.ಅಮರೇಶ ಕುಂಬಾರ.ಇಂಧರಗಿ ಇವರಿಗೆ ಸನ್ಮಾನಿಸಿ ಗೌರವಿಸಿದರು ಮತ್ತು ಸಂತೋಷ್ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *