ಗಂಗಾವತಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಾಮಾಜಿಕ ಸಂದೇಶದ ರಂಗೋಲಿ ಚಿತ್ರ…

ಗಂಗಾವತಿ: ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಗಂಗಾವತಿಯಲ್ಲಿ ವಿದ್ಯಾರ್ಥಿನಿ ಕಾವೇರಿ 7ನೇ ಸೆಮಿಸ್ಟರ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗ) ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಕಲಾತ್ಮಕ ರಂಗೋಲಿ ವಿನ್ಯಾಸವನ್ನು ಸಿದ್ಧಪಡಿಸಿದ್ದಾರೆ.”STOP RAPE” ಎಂಬ ಬಲವಾದ ಸಂದೇಶವನ್ನು ಒಳಗೊಂಡಿರುವ ಈ ರಂಗೋಲಿ ಮಹಿಳೆಯರ ಮೇಲಿನ ಹಿಂಸಾಚಾರವನ್ನು ತಡೆಗಟ್ಟುವ ಅಗತ್ಯವನ್ನು ಮನದಟ್ಟು ಮಾಡುತ್ತದೆ. ಮಹಿಳೆಯರ ರಕ್ಷಣೆಗೆ ಸಮಾಜದಲ್ಲಿ ಜಾಗೃತಿ, ಜವಾಬ್ದಾರಿಯುತ ನಡೆ ಹಾಗೂ ಕಾನೂನುಬದ್ಧ ಕ್ರಮಗಳು ಅತ್ಯಗತ್ಯವೆಂದು ಈ ಕೃತಿಯ ಮೂಲಕ ವಿದ್ಯಾರ್ಥಿನಿ ತಿಳಿಸಿಕೊಟ್ಟಿದ್ದಾರೆ.ಕಾಲೇಜು ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಈ ಕಲಾಶೈಲಿಗೆ ಪ್ರಶಂಸೆ ವ್ಯಕ್ತಪಡಿಸಿ, ಇಂತಹ ಸಮಾಜಮುಖಿ ಸಂದೇಶ ಸಾರುವ ಚಟುವಟಿಕೆಗಳು ಇನ್ನಷ್ಟು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
