ಶವ ಸಂಸ್ಕಾರ ಸ್ಮಶಾನಕ್ಕೆ ಹೋಗಲು ರಸ್ತೆಯೇ ಇಲ್ಲ.. ಹುಳಿಕಿಹಾಳಕ್ಯಾಂಪಿನ ಜನರ ಸಂಕಷ್ಟ ಕೇಳುವವರಾರು?

ಶವ ಸಂಸ್ಕಾರ ಸ್ಮಶಾನಕ್ಕೆ ಹೋಗಲು ರಸ್ತೆಯೇ ಇಲ್ಲ.. ಹುಳಿಕಿಹಾಳಕ್ಯಾಂಪಿನ ಜನರ ಸಂಕಷ್ಟ ಕೇಳುವವರಾರು?

ಕನಕಗಿರಿ…. ಇತಿಹಾಸ ಪ್ರಸಿದ್ಧ ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುಳಕಿ ಹಾಳ ಗ್ರಾಮದಲ್ಲಿ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು *ಒಳ್ಳೆಯ ಆದರ್ಶಯುತ ಜೀವನವನ್ನು ಬದುಕಿ ಕಾಲದ ಕರೆಗೆ ಓಗೊಟ್ಟು ದೇಹವನ್ನು ತ್ಯಜಿಸಿದ ಜನರ ಶವಸಂಸ್ಕಾರ ಮಾಡಲು ಸ್ಮಶಾನಕ್ಕೆ ಹೋಗಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದ್ದು ಈ ಕ್ಯಾಂಪಿನ ಜನರ ಗೋಳನ್ನು ಕೇಳುವವರೇ ಇಲ್ಲದಾಗಿದೆ.**ಸುಮಾರು 25 ವರ್ಷಗಳ ಹಿಂದೆ ಬೇರೆ ಬೇರೆ ಊರುಗಳಿಂದ ವಲಸೆ ಬಂದು ಬದುಕು ಕಟ್ಟಿಕೊಂಡಿರುವ 500 ಕ್ಕೂ ಹೆಚ್ಚು ಕುಟುಂಬಗಳು ಶವಸಂಸ್ಕಾರ ಮಾಡುವ ಸಂದರ್ಭದಲ್ಲಿ ಅನುಭವಿಸುವ ಪಡಿಪಾಟಾಲು ಯಾರಿಗೂ ಬರಬಾರದು ಹಾಗೂ ಸುಮಾರು ವರ್ಷಗಳಿಂದ ಸ್ಮಶಾನಕ್ಕೆ ರಸ್ತೆಯಿಲ್ಲವೆಂದು ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳಿಗೆ ಹಾಗೂ ಜನ ಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಪ್ರತಿಬಾರಿ ಚುನಾವಣೆಗಳು ಬಂದಾಗ ರಾಮದೇವರ ದೇವಸ್ಥಾನದಿಂದ ಸ್ಮಶಾನದವರೆಗೆ ಡಾಂಬರ್ ರಸ್ತೆ ಇಲ್ಲವೇ ಸಿ. ಸಿ ರೋಡ್ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡುವುದು ಎಲ್ಲರೂ ಬರೀ ಆಶ್ವಾಸನೆಗಳನ್ನು ಕೊಡುವುದು ಪ್ರತಿ ಬಾರಿಯೂ ನಡದೆ ಇದೆ. ಆದರೆ ಕೆಲಸ ಮಾತ್ರ ಶೂನ್ಯ.ರೊಚ್ಚಿಗೆದ್ದು ತಾವೇ ರಸ್ತೆ ಸರಿಪಡಿಸಿಕೊಂಡ ಜನ**ನಿನ್ನೆಯ ದಿನ ಈ ಕ್ಯಾಂಪಿನಲ್ಲಿ ಹನುಮಂತ ಕಬ್ಬರಗಿ ಎಂಬ ಯಜಮಾನರೊಬ್ಬರು ನಿಧನರಾಗಿದ್ದರು. ಆದರೆ ಅವರ ಶವಸಂಸ್ಕಾರ ಮಾಡಲು ಸ್ಮಶಾನಕ್ಕೆ ಹೋಗಲು ಹರಸಾಹಸ ಪಡಬೇಕಾದ ಸನ್ನಿವೇಶ ನಿರ್ಮಾಣವಾಗಿತ್ತು. ಇದರಿಂದ ಬೇಸತ್ತ ಜನರು ತಾವೇ ಸ್ವತಃ ಅವರಿವರ ಟ್ರಾಕ್ಟರ್ ಗಳನ್ನು ಹಾಗೂ ದುಡ್ಡು ಸಂಗ್ರಹಿಸಿ ಜೆ. ಸಿ. ಬೀ ತರಿಸಿ ರಸ್ತೆ ಸಮತಟ್ಟು ಮಾಡಿದ ಪ್ರಸಂಗ ನಡೆದಿದೆ. ಹೌದು ಸೋಮವಾರ ಸುರಿದ ಮಳೆಯಿಂದಾಗಿ ರುದ್ರಭೂಮಿಗೆ ಹೋಗುವುದು ಹೇಗೆ? ಶವ ಸಂಸ್ಕಾರ ಮಾಡೋದು ಹೇಗೆ ಎಂಬ ಚಿಂತೆಯ ನಡುವೆ ಊರಿನ ಹಿರಿಯರು ಹಾಗೂ ಯುವಕರು ಸೇರಿ ರಸ್ತೆಯನ್ನು ಸಮತಟ್ಟು ಮಾಡಿಕೊಂಡು ಶವಸಂಸ್ಕಾರ ಮಾಡಿಬಂದಿದ್ದಾರೆ. ಇನ್ನಾದರೂ ರುದ್ರಭೂಮಿ ಹಾಗೂ ರವಿನಗರದ ಮೂಲಕ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಸರಿಪಡಿಸಿಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಹಸೀಲ್ದಾರ್ ಕಚೇರಿಯ ಮುಂದೆ ಧರಣಿ ಕುಳಿತು ಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *