4ನೇ ಪುಣ್ಯಸ್ಮರಣೆ: ಎಲ್ಲರಿಗೂ ಅಪ್ಪು ಅಚ್ಚುಮೆಚ್ಚು, ಪುನೀತ್ ಸ್ಮರಿಸಿದ ಅಭಿಮಾನಿಗಳು…

ಬಳ್ಳಾರಿ/ ಕಂಪ್ಲಿ : ಇಂದು ನಟ ಪವರ್ ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ನಾಲ್ಕು ವರ್ಷ ಕಳೆದಿವೆ. ಅವರ ಅಭಿಮಾನಿಗಳು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಮುಂದುಗಡೆ ಇರುವ ಪುನೀತ್ ರಾಜಕುಮಾರ್ ಸರ್ಕಲ್ ನಲ್ಲಿ ಪುಷ್ಪ ನಮನ ಸಲ್ಲಿಸಿದರು. ನಂತರ ಮಾತನಾಡಿದ ಜಿ. ಬಾಬು ಪುನೀತ್ ರಾಜಕುಮಾರ್ ಅವರ ನಟನೆ, ಸಮಾಜಸೇವೆ, ಸರಳ ವ್ಯಕ್ತಿತ್ವ ಇಂದಿಗೂ ಜೀವಂತವಾಗಿದೆ. ನಟನಾಗಿ, ದೊಡ್ಮನೆ ಮಗನಾಗಿ, ಸಮಾಜದಲ್ಲಿ ಒಬ್ಬ ವ್ಯಕ್ತಿಯಾಗಿ ಹೇಗೆ ಬದುಬೇಕೆಂದು ಕಲಿಸಿಕೊಟ್ಟ ನಟ ಪುನೀತ್ ಅವರನ್ನು ಇಂದಿಗೂ ನಮ್ಮ ಜೊತೆಗಿದ್ದಾರೆ. ಚಿತ್ರರಂಗದಲ್ಲೂ ಅಪ್ಪು ಕಂಡರೆ ಇಷ್ಟ. ಅಜಾತಶತ್ರುವಾಗಿ ಬದುಕಿದ್ದ ವ್ಯಕ್ತಿ ಅಪ್ಪು ಅವರನ್ನು ಫ್ಯಾನ್ಸ್ ಇಂದಿಗೂ ಸ್ಮರಿಸುತ್ತಿದ್ದಾರೆ ಎಂದು ಹೇಳಿದರು. ಸಿ ಚೆನ್ನಪ್ಪ ಮಾತನಾಡಿ ಸಹ ಕಲಾವಿದರಿಗೆ, ಚಿಕ್ಕಮಕ್ಕಳಿಗೆ, ವಯೋವೃದ್ಧರಿಗೂ ಅಪ್ಪು ಎಂದರೆ ಅಚ್ಚು ಮೆಚ್ಚು.2021ರ ಅಕ್ಟೊಬರ್ 29ರಂದು ಪುನೀತ್ ಹೃದಯಾಘಾತದಿಂದ ನಿಧನರಾದರು. ಬಳಿಕವೇ ಅವರು ಮಾಡಿದ ಸಮಾಜ ಸೇವೆ, ಬಡವರಿಗೆ ತೋರಿದ ಸಹಾಯಹಸ್ತ, ಕಷ್ಟದಲ್ಲಿರುವವರಿಗೆ ಸ್ಪಂದಿರುವ ರೀತಿ ಜಗತ್ತಿಗೆ ಬಹಿರಂಗವಾಯಿತು. ಅಲ್ಲಿಯವರೆಗೂ ಅವರ ಎಲೆಮರೆ ಕಾಯಿಯಂತೆ ಸೇವೆ ಮಾಡುತ್ತಿದ್ದರು. ಅಪಾರ ಅಭಿಮಾನಿ ಬಳಗ ಸಂಪಾದಿಸಿರುವ ಅಪ್ಪು ಸಾವಿನ ಬಳಿಕ ಅವರು ದೇವತಾ ಮನುಷ್ಯರಾದರು. ಅವರ ಆದರ್ಶ, ಸಮಾಜ, ಬಡವರ ಬಗೆಗಿನ ಅವರ ಕಾಳಜಿ ಇಂದಿಗೂ ಅವರ ಹೆಸರಿನಲ್ಲಿ ಅಭಿಮಾನಿಗಳು ಮುಂದುವರಿಸುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಲಕ್ಷ್ಮಣ, ನಾಗರಾಜ, ಕುಮಾರ್ ಸೇರಿದಂತೆ ಅಭಿಮಾನಿಗಳು ಹಾಜರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್
