ಮಾರುಕಟ್ಟೆ ಮೌಲ್ಯ, ಗುಣಮಟ್ಟ, ಗೃಹ ಸಾಲ ಮಾಹಿತಿ: ವೀಕ್ಷಕರಿಗು ಗಿಫ್ಟ್೫೦ ಸಾಲ್‌ಗಳಲ್ಲಿ ಮೂರುದಿನ ಕಟ್ಟಡ ಸಾಮಾಗ್ರಿಗಳ ಉಚಿತ ಬೃಹತ್ ಪ್ರದರ್ಶನ…

ಮಾರುಕಟ್ಟೆ ಮೌಲ್ಯ, ಗುಣಮಟ್ಟ, ಗೃಹ ಸಾಲ ಮಾಹಿತಿ: ವೀಕ್ಷಕರಿಗು ಗಿಫ್ಟ್೫೦ ಸಾಲ್‌ಗಳಲ್ಲಿ ಮೂರುದಿನ ಕಟ್ಟಡ ಸಾಮಾಗ್ರಿಗಳ ಉಚಿತ ಬೃಹತ್ ಪ್ರದರ್ಶನ…

ಗಂಗಾವತಿ: ಇಂಜಿನೀರ‍್ಸ್ ದಿನಾಚರಣೆ ಅಂಗವಾಗಿ ಸೆಪ್ಟಂಬರ್ ೧೩,೧೪ ಹಾಗು ೧೫ ಮೂರು ದಿನಗಳ ಕಾಲ ನಗರದ ಶ್ರೀ ಅಮರಜ್ಯೋತಿ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ ೧೦.೩೦ ರಿಂದ ರಾತ್ರಿ ೮-೩೦ರ ವರೆಗೆ ಕಟ್ಟಡ ಸಾಮಾಗಳ ಗುಣಮಟ್ಟ, ಫರ್ನಿರ‍್ಸ್ , ಮಾರುಕಟ್ಟೆ ಮೌಲ್ಯ, ಗೃಹ ಸಾಲಗಳ ಸಂಪೂರ್ಣ ಮಾಹಿತಿ ಮಾಹಿತಿ ಒದಗಿಸುವ ಉದ್ದೇಶದಿಂದ ಬೃಹತ್ ಉಚಿತ (ಹೋಮ್ ಎಕ್ಸಪೋ) ಗೃಹ ಕಟ್ಟಡ ಸಾಮಾಗ್ರಿಗಳ ಪ್ರದರ್ಶನವನ್ನು ಗಂಗಾವತಿಯ ಸರ್.ಎಂ.ವಿ. ಕನ್ಸಲ್ಟಿಂಗ್ ಸಿವಿಲ್ ಇಂಜಿನೀಯರ್ಸ್ ಅಸೋಸಿಯೇಶನ್ ನಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಹಾಗು ನಗರಸಭೆ ಮಾಜಿ ಅಧ್ಯಕ್ಷ ವಾಸು ಕೊಳಗದ ಹೇಳಿದರು.ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ಗೃಹ ಕಟ್ಟಡ ಸಾಮಾಗ್ರಿಗಳು, ಫರ್ನಿಚರ್ ಗುಣಮಟ್ಟ ಹಾಗು ಮಾರುಕಟ್ಟೆ ಮೌಲ್ಯಗಳ ಕುರಿತು ಸಂಪೂರ್ಣ ಮಾಹಿತಿ ಒದಗಿಸುವ ಉದ್ದೇಶ ಇದ್ದು, ಪ್ಲಾಸ್ಟಿಕ್, ಕಬ್ಬಿಣ, ಕಟ್ಟಿಗೆ, ಇಟ್ಟಿಗೆ, ಕಲ್ಲು, ಮಣ್ಣು, ಮರಳು ಇವುಗಳ ಬಳಕೆ ಕ್ವಾಲಿಟಿ ಪರೀಕ್ಷಿಸುವ ವಿಧಾನ, ಮನೆ ಸಾಲ ಪಡೆಯುವುದು ಹೇಗೆ ಎನ್ನವುದನ್ನು ವಿವರಿಸಲಾಗುತ್ತಿದ್ದು, ಪ್ರದರ್ಶನ ವೀಕ್ಷಣೆಗೆ ಆಗಮಿಸುವವರಿಗೆ ಗಿಫ್ಟ್ ನೀಡಲಾಗುತ್ತಿದ್ದು ಗಂಗಾವತಿಯಲ್ಲಿಯೇ ಪ್ರಥಮ ಬಾರಿಗೆ ಉಚಿತ ಬೃಹತ್ ಹೋಮ್ ಎಕ್ಸ್ ಪೋ ನಡೆಯುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.ಸಂಯೋಜಕ ಪ್ರಕಾಶ್ ಮಾತನಾಡಿ, ರಾಜ್ಯದಾದ್ಯಂತ ಹಲವಾರು ಗುಣಮಟ್ಟದ ಕಂಪನಿಗಳ ಕಟ್ಟಡ ಸಾಮಾಗ್ರಿಗಳ ಕುರಿತು ಜಾಗೃತಿ ಮೂಡಿಸಲಾಗಿದ್ದು, ಗಂಗಾವತಿಯಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿದೆ. ಗ್ರಾಹಕರು ಮೋಸ ಹೋಗದೆ ಅತ್ಯುತ್ತಮ ಮನೆ ನಿರ್ಮಿಸಿಕೊಳ್ಳಲು ಸಹಕಾರಿಸುವುದು ನಮ್ಮ ಉದ್ದೇಶಿವಾಗಿದೆ ಸುಮಾರು ೫೦ ಸ್ಟಾಲ್‌ಗಳಲ್ಲಿ ಪ್ರದರ್ಶನ ಏರ್ಪಡಿಸಲಾಗುತ್ತಿದೆ ಎಂದರು.ಗAಗಾವತಿಯ ಇಂಜಿನೀರ‍್ಸ್ ಅಶೋಸಿಯೇಷನ್ ಅಧ್ಯಕ್ಷ ಚೇತನ್ ಕುಮಾರ್ ಹಿರೇಮಠ ಮಾತನಾಡಿ ಕಾರ್ಯಕ್ರಮವನ್ನು ಗಂಗಾವತಿ ಸರಕಾರಿ ಇಂಜಿನೀಯರ್ ಕಾಲೇಜು ಪ್ರಾಂಶುಪಾಲರಾದ ಪ್ರೊ.ಚನ್ನಬಸವ ಗೌಡ ಉದ್ಘಾಟಿಸಲಿದ್ದು, ಸರಕಾರಿ ಇಂಜಿನೀಯರ್ ಕಾಲೇಜು ಸಿವಿಲ್ ಹೆಚ್‌ಒಡಿ ಡಾ. ರೂಪಶ್ರೀ ಎಂ.ಎಸ್, ಸಹಾಯಕ ಯೋಜನಾಧಿಕಾರಿ ಮಂಜೇಶ್ ಕುಮಾರ್, ನಗರಸಭೆ ಪೌರಾಯುಕ್ತ ವಿರುಪಾಕ್ಷಮೂರ್ತಿ, ಅಧ್ಯಕ್ಷರು ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆಂದರು.ಗೋಷ್ಟಿಯಲ್ಲಿ ಸಂಸ್ಥೆಯ ಖಜಾಂಚಿ ದೇವೇಂದ್ರ ಕುಮಾರ್, ಇಂಜನೀಯರ್‌ಗಳಾದ ಕುಂಬಾರ ಪಾನ್ ಪ್ರಕಾಶ್, ಪವನ್ ಪತ್ತಾರ್ ಇತರರಿದ್ದರು.

Leave a Reply

Your email address will not be published. Required fields are marked *