ಜಾತಿ, ಧರ್ಮ ಮೀರಿ ಜಯಂತ್ಯುತ್ಸವ ಆಚರಿಸೋಣ- ಬಳೂಟಗಿಯ ಶಿವಕುಮಾರ ದೇವರು ಸಲಹೆ- ಮಲ್ಲಿಕಾರ್ಜುನ ಮಠದಲ್ಲಿ ಪೂರ್ವಭಾವಿ ಸಭೆ..

ಜಾತಿ, ಧರ್ಮ ಮೀರಿ ಜಯಂತ್ಯುತ್ಸವ ಆಚರಿಸೋಣ- ಬಳೂಟಗಿಯ ಶಿವಕುಮಾರ ದೇವರು ಸಲಹೆ- ಮಲ್ಲಿಕಾರ್ಜುನ ಮಠದಲ್ಲಿ ಪೂರ್ವಭಾವಿ ಸಭೆ..

ಗಂಗಾವತಿ: ನಗರದಲ್ಲಿ ಸೆ.10 ರಿಂದ 20ರ ವರೆಗೆ ನಡೆಯಲಿರುವ ಹಾನಗಲ್ ಕುಮಾರ ಮಹಾ ಶಿವಯೋಗಿಗಳ ಜಯಂತ್ಯುತ್ಸವದ ಹಿನ್ನೆಲೆ ಒಟ್ಟು 9 ದಿನ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಪಾದಯಾತ್ರೆ ನಡೆಯಲಿದೆ. ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಎಂಬ ಘೋಷ ವಾಕ್ಯದಡಿ ಸ್ವಸ್ಥ ಸಮಾಜ ನಿರ್ಮಿಸುವುದು ನಮ್ಮ ಉದ್ದೇಶ ಎಂದು ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಬಳೂಟಗಿಯ ಶಿವಕುಮಾರ ದೇವರು ಹೇಳಿದರು.ನಗರದ ಮಲ್ಲಿಕಾರ್ಜುನ ಮಠದ ಸಭಾಂಗಣದಲ್ಲಿ ನಡೆದ ಶ್ರೀ ಹಾನಗಲ್ ಕುಮಾರ ಮಹಾ ಶಿವಯೋಗಿಗಳ 158ನೇ ಜಯಂತಿ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಂಗಳವಾರ ಮಾತನಾಡಿದರು.ನಗರ ಸೇರಿ ಸುತ್ತಲಿನ ಗ್ರಾಮೀಣ ಪ್ರದೇಶದ ಜನರು ಜಾತಿ- ಧರ್ಮ ಮೀರಿ, ಎಲ್ಲರೂ ಒಗ್ಗೂಡಿ ಗುರು ಕುಮಾರ ಮಹಾಸ್ವಾಮಿಗಳ ಜಯಂತಿ ಆಚರಿಸಬೇಕಿದೆ. ಕಾರ್ಯಕ್ರಮದ 11 ದಿನದ ಕಾರ್ಯಕ್ರಮವನ್ನೂ ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸುವ ಮೂಲಕ ನಮ್ಮೆಲರಲ್ಲೂ ಇರುವುದು ಭಕ್ತಿ ಪಕ್ಷ ಎಂಬುದು ತೋರಿಸಿಕೊಡಬೇಕಿದೆ ಎಂದು ಸಲಹೆ ನೀಡಿದರು. ಸೆ.10 ರಂದು ಜಯಂತ್ಯುತ್ಸವಕ್ಕೆ ಚಾಲನೆ‌ ಸಿಗಲಿದೆ. ಸೆ. 11 ರಿಂದ ಸೆ. 19ರ ವರೆಗೆ ಬೆಳಗ್ಗೆ 6 ಗಂಟೆಗೆ ಸುಮಾರು 50 ರಿಂದ 100 ಸ್ವಾಮೀಜಿಗಳು ನಗರ ಪ್ರದೇಶದ ನಾನಾ ವಾರ್ಡ್ ಹಾಗೂ ದಿನಕ್ಕೆ ‌ಎರಡು ಗ್ರಾಮದಲ್ಲಿ ಪಾದಯಾತ್ರೆ ಮಾಡಲಿದ್ದಾರೆ. ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಎಂಬ ಘೋಷ ವಾಕ್ಯದಡಿ ಪಾದಯಾತ್ರೆ ನಡೆಯುತ್ತದೆ. ತುಂಬಾ ವಿಜೃಂಭಣೆಯಿಂದ ಕಾರ್ಯಕ್ರಮ ನಡೆಯುವ ವಿಶ್ವಾಸ ಇದೆ. ಈ ಹಿಂದೆ ಮತ್ತು ಮುಂದೆಂದೂ ನಡೆಯದಂತೆ ಕಾರ್ಯಕ್ರಮ ಆಯೋಜನೆ ಮಾಡಬೇಕಿದೆ ಎಂದು ಆಶಿಸಿದರು. ಪಾದಯಾತ್ರೆ: ಸೆ. 11 ರಿಂದ ಗಂಗಾವತಿ ನಗರದ ವಿವಿಧ ವಾರ್ಡ್ ಮತ್ತು ಗ್ರಾಮೀಣ ಭಾಗದಲ್ಲಿ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ.

ಪಾದಯಾತ್ರೆಯಲ್ಲಿ ಕನಿಷ್ಠ 50 ರಿಂದ 100 ಜನ ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ. ಬೆಳಗ್ಗೆ 5.30 ರಿಂದ 7 ಗಂಟೆ ವರೆಗೆ ನಗರ ಪ್ರದೇಶದಲ್ಲಿ ನಂತರ ಬೆಳಗ್ಗೆ 8.30 ರಿಂದ ಮಧ್ಯಾಹ್ನ 12.30ರ ವರಗೆ ಗ್ರಾಮೀಣ ಭಾಗದಲ್ಲಿ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಹೆಸರಿನಲ್ಲಿ ಪಾದಯಾತ್ರೆ ನಡೆಯಲಿದೆ. ಸಂಜೆ ಮಲ್ಲಿಕಾರ್ಜುನ ಸ್ವಾಮಿ ಮಠದ ಪುರಾಣ ಮಂಟಪದಲ್ಲಿ ಶ್ರೀ ಗುರು ಕುಮಾರೇಶ್ವರ ಶಿವಯೋಗಿಯವರ ಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.ಸೆ.11 ರಂದು ಬೆಳಗ್ಗೆ ಗಂಗಾವತಿಯ ಹಿರೇ ಜಂತಕಲ್, ಬಸಾಪಟ್ಟಣ ಮತ್ತು ದಾಸನಾಳ ಗ್ರಾಮ, ಸೆ.12 ರಂದು ಟೀಚರ್ಸ್ ಕಾಲೋನಿ, ಢಣಾಪೂರ, ಮುಷ್ಟೂರ, ಸೆ. 13 ರಂದು ಭಗತ್ ಸಿಂಗ್ ನಗರ, ಹಣವಾಳ, ಸೆ. 14 ರಂದು ಜಯನಗರ ಹಾಗೂ ವಡ್ಡರಹಟ್ಟಿ- ಆರಾಳ, ಸೆ. 15 ಪ್ರಶಾಂತ ನಗರ, ಗಡ್ಡಿ- ಉಡಮಕಲ್ ಗ್ರಾಮ, ಸೆ.16 ರಂದು ಶರಣಬಸವೇಶ್ವರ ಕ್ಯಾಂಪ್, ಆಚಾರ ನರಸಾಪೂರ- ಮರಳಿ, ಸೆ.17 ಸಿಬಿಎಸ್ ವೃತ್ತ, ಹೊಸಳ್ಳಿ- ಜಂಗಮರ ಕಲ್ಗುಡಿ, ಸೆ.18 ನೀಲಕಂಠೆಶ್ವರ ಕ್ಯಾಂಪ್, ವಿವೇಕಾನಂದ ನಗರ ಗ್ರಾಮೀಣ ಭಾಗದಲ್ಲಿ ಹೇರೂರ, ಸೆ. 19 ರಂದು ವಿಜಯನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕೇಸರಹಟ್ಟಿ- ಅರಳಹಳ್ಳಿ ಗ್ರಾಮದಲ್ಲಿ ಸ್ವಾಮೀಜಿಗಳ ಪಾದಯಾತ್ರೆ ನಡೆಯಲಿದೆ ಎಂದು ಸಭೆಗೆ ಸಂಗಯ್ಯ ಸ್ವಾಮಿ ಮತ್ತು ತಿಪ್ಪೇರುದ್ರ ಸ್ವಾಮಿ ಮಾಹಿತಿ ನೀಡಿದರು. ಸಮಿತಿ ಕಾರ್ಯದರ್ಶಿ ದೋಟಿಹಾಳದ ಚಂದ್ರಶೇಖರ ದೇವರು, ಕಲಬುರಗಿಯ ದುದ್ರಮುನಿ ದೇವರು ಸಾನ್ನಿಧ್ಯ ವಹಿಸಿದ್ದರು. ಸಮಾಜದ ಮುಖಂಡ ಮಾಜಿ ಕಾಡಾ ಅಧ್ಯಕ್ಷ ಬಿ.ಹೆಚ್.ಎಂ. ತಿಪ್ಪೇರುದ್ರಸ್ವಾಮಿ ವಕೀಲರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಕಳಕನಗೌಡ, ತಾಲೂಕಾಧ್ಯಕ್ಷ ಎಚ್.ಗಿರಿಗೌಡ, ನಿಕಟಪೂರ್ವ ಅಧ್ಯಕ್ಷ ಅಶೋಕ ಸ್ವಾಮಿ ಹೇರೂರು, ಕಾರ್ಯದರ್ಶಿ ಮನೋಹರಸ್ವಾಮಿ ಹೇರೂರು, ಮಹಾಸಭಾ ಮುಖಂಡರಾದ ಹೆಚ್.ಎಂ.ಸಿದ್ರಾಮಯ್ಯ, ವಿರೂಪಾಕ್ಷಪ್ಪ ಸಿಂಗನಾಳ, ಮನೋಹರಗೌಡ, ವಿಶ್ವನಾಥ ಮಾಲೀಪಾಟೀಲ್, ಎಸ್.ಬಿ.ಹಿರೇಮಠ, ಆದಯ್ಯಸ್ವಾಮಿ ಹಿರೇಮಠ, ರೈತ ಮುಖಂಡ ಶರಣಪ್ಪ ಯರಡೋಣ, ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಮುದಗಲ್, ಯುವ ಘಟಕದ ಅಧ್ಯಕ್ಷ ಶರಣಬಸವ ಹುಲಿಹೈದರ ಮಾತನಾಡಿದರು. ಉಪಾಧ್ಯಕ್ಷ ಮುಕ್ಕಣ್ಣ ಕತ್ತಿ ಸೇರಿ ಇತರರು ಇದ್ದರು.

ಕೋಟ್::::: ಈಗಾಗಲೇ ಅನೇಕ ಗ್ರಾಮದಲ್ಲಿ ಪೂರ್ವಭಾವಿ ಸಭೆ ಮಾಡಿ,‌ ಪಾದಯಾತ್ರೆ ಬಗ್ಗೆ ಚರ್ಚಿಸಿದ್ದೇವೆ. ನಾವು ಭೇಟಿ ನೀಡಿದ ಎಲ್ಲ ಗ್ರಾಮದಲ್ಲಿ ಪಾದಯಾತ್ರೆಗೆ ಜನರಿಂದ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದೆ. ಜಾತಿ- ಧರ್ಮದ ತಾರತಮ್ಯ ಇಲ್ಲದೇ ಜನರು ಭಾಗವಹಿಸಲು ಸಿದ್ಧರಾಗಿದ್ದಾರೆ. ಸಭೆಯಲ್ಲಿ ಎಲ್ಲರೂ ನೀಡಿದ ಸಲಹೆ- ಸೂಚನೆ ಪರಿಗಣಿಸಿ, ಕಾರ್ಯಕ್ರಮ ರೂಪಿಸಲಾಗುವುದು. – ಎಚ್.ಗಿರಿಗೌಡ, ತಾಲೂಕಾಧ್ಯಕ್ಷ,‌ ವೀರಶೈವ ಮಹಾಸಭಾ————– ಕೋಟ್:::::::ಗಂಗಾವತಿಯಲ್ಲಿ ನಡೆದ ಎಲ್ಲ ರಾಜ್ಯ ಮಟ್ಟದ ಕಾರ್ಯಕ್ರಮಗಳೂ ಅತ್ಯಂತ ಅದ್ದೂರಿಯಾಗಿ ಹಾಗೂ ಮಾದರಿಯಾಗಿ ನಡೆದಿವೆ.‌‌ ಅದರಂತೆ ಗುರು ಕುಮಾರೇಶ್ವರರ ಜಯಂತಿ ಕೂಡ ಯಾವುದೇ ಕೊರತೆ ಇಲ್ಲದಂತೆ ನಡೆಯಬೇಕಿದೆ.‌ ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ. – ಪರಣ್ಣ ಮುನವಳ್ಳಿ, ಮಾಜಿ ಶಾಸಕ ಫೋಟೋಗಂಗಾವತಿಯ ಮಲ್ಲಿಕಾರ್ಜುನ ಮಠದ ಸಭಾಂಗಣದಲ್ಲಿ ನಡೆದ ಶ್ರೀ ಹಾನಗಲ್ ಕುಮಾರ ಮಹಾ ಶಿವಯೋಗಿಗಳ 158ನೇ ಜಯಂತಿ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಬಳೂಟಗಿಯ ಶಿವಕುಮಾರ ದೇವರು ಮಂಗಳವಾರ ಮಾತನಾಡಿದರು.

Leave a Reply

Your email address will not be published. Required fields are marked *