ಸಂಘಟನೆಯ ಬಲವರ್ಧನೆ ಜೊತೆಗೆ ಯೋಜನೆಗಳನ್ನು ಜನತೆಗೆ ಮುಟ್ಟಿಸಲು ಶ್ರಮಿಸಿ : ಇ.ಧನಂಜಯ್ಯ…

ಸಂಘಟನೆಯ ಬಲವರ್ಧನೆ ಜೊತೆಗೆ ಯೋಜನೆಗಳನ್ನು ಜನತೆಗೆ ಮುಟ್ಟಿಸಲು ಶ್ರಮಿಸಿ : ಇ.ಧನಂಜಯ್ಯ.

ಬಳ್ಳಾರಿ / ಕಂಪ್ಲಿ: ಸಂಘಟನೆಯ ತತ್ವ, ಸಿದ್ಧಾಂತಗಳೊಂದಿಗೆ ಜನತೆಗೆ ಸರ್ಕಾರ ಯೋಜನೆಗಳನ್ನು ಸಕಾಲದಲ್ಲಿ ಮುಟ್ಟಿಸಲು ನೂತನ ಪದಾಧಿಕಾರಿಗಳ ಮಾತ್ರ ಅತಿಮುಖ್ಯವಾಗಿದೆ ಎಂದು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಧನಂಜಯ್ಯ ಹೇಳಿದರು.ತಾಲೂಕಿನ ಸಣಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಂಡಯ್ಯಕ್ಯಾಂಪಿನಲ್ಲಿ ಕ.ಮಾ.ರ.ವೇದಿಕೆಯ ಸಂಘಟನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಬಡ ಜನರಹಿತದೃಷ್ಠಿಯಿಂದ ಸರ್ಕಾರ ಸಾಕಷ್ಟು ಯೋಜನೆಗಳನ್ನು ನೀಡಿದ್ದು, ಆ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕು. ಸಂಘಟನೆ ಬಲ ಪಡಿಸಲು ಮುಂದಾಗಬೇಕು ಎಂದರು.ಈ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ನೀಲಪ್ಪ ಪೇಂಟರ್, ಸಂಘಟನಾ ಕಾರ್ಯದಶಿಗಳಾದ ರಾಕೇಶ, ರಾಮಾಂಜಿನೀಯಲು, ಖಜಾಂಚಿ ಸುಂಕಪ್ಪ ಸೇರಿ ಅನೇಕರಿದ್ದರು. ಆಯ್ಕೆ : ಇಲ್ಲಿನ ಕೊಂಡಯ್ಯಕ್ಯಾಂಪಿನ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಜಯಣ್ಣ, ಗೌರವಾಧ್ಯಕ್ಷ್ಷರಾಗಿ ನಾನೆಪಾಟಿ ರಾಜೇಶ, ಉಪಾಧ್ಯಕ್ಷರಾಗಿ ಆಲೂರು ಶ್ರೀನು, ಬಲರಾಮ, ಪ್ರಧಾನ ಕಾರ್ಯದರ್ಶಿಯಾಗಿ ಆಂಥೋನಿ, ಸಂಘಟನಾ ಕಾರ್ಯದರ್ಶಿಯಾಗಿ ನಾಗರಾಜ, ರಾಮದಾಸು, ನಾಗಾರ್ಜುನ, ಬ್ರಹ್ಮಯ್ಯ, ವಿರೇಶ, ಖಜಾಂಚಿಯಾಗಿ ಈಶ್ವರ, ಜಿ.ಬಾಬು, ಸದಸ್ಯರಾಗಿ ರಾಜಶೇಖರ, ರಾಮಪ್ಪ, ಮಾರೆಣ್ಣ, ನೆಟಕಲ್ಲಪ್ಪ, ಶಿವುಕುಮಾರ, ಚಂದ್ರ ಆಯ್ಕೆಯಾದರು. ನಂತರ ನೂತನ ಪದಾಧಿಕಾರಿಗಳಿಗೆ ಆದೇಶ ಪ್ರತಿ ನೀಡಿ ಗೌರವಿಸಿದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *