ಸಂದೀಪ್ ಸಂಪತ್ ಓಡಿಸಾ ಡಿಐಜಿ ಕನಕಚಲಪತಿ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಭೇಟಿ…

ಸಂದೀಪ್ ಸಂಪತ್ ಓಡಿಸಾ ಡಿಐಜಿ ಕನಕಚಲಪತಿ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಭೇಟಿ…

ಕನಕಗಿರಿ ಪಟ್ಟಣದಲ್ಲಿ ಇರುವ ಪಟ್ಟಣದ ಆರಾಧ್ಯ ದೈವವಾದ ಶ್ರೀ ಕನಕಚಲ ಲಕ್ಷ್ಮೀನಾರಸಿಂಹ ದೇವರ ದೇವಸ್ಥಾನಕ್ಕೆ ಓಡಿಸಾದ ಸಂದೀಪ್ ಸಂಪತ್ ಡಿ ಐ ಜಿ ಭೇಟಿ ನೀಡಿ ಕನಕಾಚಲಪತಿ ಲಕ್ಷ್ಮಿ ನರಸಿಂಹ ಸ್ವಾಮಿ ದರ್ಶನ ಪಡೆದರು . ಇವರು ಹಂಪಿ ಪ್ರವಾಸ ಹಾಗೂ ಅಂಜನಾದ್ರಿ ಬೆಟ್ಟದಿಂದ ನೇರವಾಗಿ ಕನಕಗಿರಿ ಇತಿಹಾಸ ಹಾಗೂ ಸಂಪ್ರದಾಯ ಪರಂಪರಾ ಬಗ್ಗೆ ದೇವಸ್ಥಾನದ ಮಹಿಮೆ ಕುರಿತಂತೆ ತಿಳಿಯಲು ಸ್ಥಳೀಯ ಇತಿಹಾಸಕಾರರು ದುರ್ಗದಾಸ್ ಯಾದವ್ ಅವರ ಹತ್ತಿರ ಮಾಹಿತಿ ಪಡೆದುಕೊಂಡರು. ಶ್ರೀ ಕನಕಾಚಲಪತಿ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಒಡಿಸ್ಸಾದ ಡಿಐಜಿ ಸಂದೀಪ್ ಸಂಪತ್ ರವರು ತಮ್ಮ ಕುಟುಂಬ ಸಮೇತವಾಗಿ ಬಂದು ಲಕ್ಷ್ಮಿ ನರಸಿಂಹ ಸ್ವಾಮಿ ದರ್ಶನ ಪಡೆದರು. ಸ್ಥಳೀಯ ಪಿಐ ಎಂ ಡಿ ಫೈಸಲ್ ಪೊಲೀಸ್ ಸಿಬ್ಬಂದಿ ಆದ ಸಿದ್ದರಾಮಯ್ಯ ಹಾಗೂ ಬಸವರಾಜ್ ನಂದನೂರ್ಇತಿಹಾಸಗಾರರು ಮತ್ತು ಸಾಮಾಜಿಕ ಹೋರಾಟಗಾರರು ದುರ್ಗಸ್ ಯಾದವ್ ವೀರೇಶ್ ತೆಗ್ಗಿನಮನಿ ಡಿ ಐ ಜಿ ಸಂದೀಪ್ ಸಂಪತ್ ಅವರನ್ನು ಸ್ವಾಗತಿಸಿ ಶ್ರೀ ಕನಕ ಚಲಪತಿ ಲಕ್ಷ್ಮೀನರಸಿಂಹ ಸ್ವಾಮಿಯ ದರ್ಶನ ಮಾಡಿಸಿ ದೇವಸ್ಥಾನದ ಅರ್ಚಕ ಸಿಬ್ಬಂದಿ ವತಿಯಿಂದ ಸತ್ಕಾರವನ್ನು ಮಾಡಿ ಪ್ರಸಾದವನ್ನು ನೀಡಿದರು ಇಲ್ಲಿರುವ ಇತಿಹಾಸದ ಕುರಿತು ತಿಳಿಕೊಂಡು ಮತ್ತು ವೆಂಕಟಪತಿ ಬಾವಿ ವೈಶಿಷ್ಟತೆ ಮತ್ತು ಛತ್ರಪತಿ ಸಾಂಭಾಜಿ ಅವರ ಸಮಾಧಿ ಕುರಿತಂತೆ ತಿಳಿಸಿದರು . ಮತ್ತು ಕಣ್ಣಿದ್ದವರು ಕನಕಗಿರಿ ನೋಡು ಕಾಲ ಇದ್ದರೆ ಹಂಪಿಯ ನೋಡು ಎಂಬ ನಾನುಡಿಯ ಇತಿಹಾಸ ಹೊಂದಿರುವಂತ ದೇವಸ್ಥಾನದ ಬಗ್ಗೆ ತಿಳಿದು ಸ್ಥಳೀಯರಗೆ ಹಾಗೂ ಸಿಬ್ಬಂದಿಯವರಿಗೆ ಕೃತಜ್ಞತೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಕನಕಗಿರಿ ಪಿ ಐ ಎಂಡಿ ಫೈಸಲ್ ಪೊಲೀಸ್ ಸಿಬ್ಬಂದಿಗಳಾದ ಬಸವರಾಜ್ ನಂದನುರ್ ಸಿದ್ದರಾಮಯ್ಯ ಮುತ್ತಣ್ಣ ಸ್ಥಳೀಯ ಇತಿಹಾಸದ ಹಾಗೂ ಸಾಮಾಜಿಕ ಹೋರಾಟಗಾರರು ದುರ್ಗಾದ ಯಾದವ್ ವೀರೇಶ್ ತೆಗ್ಗಿನಮನಿ ಗಣೇಶ್ ರೆಡ್ಡಿ ರಂಗಣ್ಣ ಕುರುಬೂರ್ ಹಾಗೂ ದೇವಸ್ಥಾನದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ರಮೇಶ್ ಈಳಿಗೆರ್ ವಾಲ್ಮೀಕಿ ಅಸ್ತ್ರ ನ್ಯೂಸ್ ಕನಕಗಿರಿ ತಾಲೂಕಿನ ವರದಿಗಾರಫೋನ್ ನೋ:9035332032

Leave a Reply

Your email address will not be published. Required fields are marked *