ದಿನಾಚರಣೆಗಳನ್ನು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನ.

ದಿನಾಚರಣೆಗಳನ್ನು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನ.

ಬಳ್ಳಾರಿ / ಕಂಪ್ಲಿ: ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಡಿ.29ರ ವಿಶ್ವ ಮಾನವ ದಿನಾಚರಣೆ ಹಾಗೂ 2026ರ ಜ.1ರ ವಿಶ್ವಕರ್ಮ ಅಮರಶಿಲ್ಪಿ ಚಕಣಾಚಾರಿ ಅವರ ಸಂಸ್ಕರಣ ದಿನಾಚರಣೆಯ ಪೂರ್ವಭಾವಿ ಸಭೆ ಶುಕ್ರವಾರ ನಡೆಯಿತು.ತಹಶೀಲ್ದಾರ್ ಜೂಗಲ್ ಮಂಜುನಾಯಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ವಿಶ್ವ ಮಾನವ ದಿನಾಚರಣೆ ಹಾಗೂ ವಿಶ್ವಕರ್ಮ ಅಮರಶಿಲ್ಪಿ ಚಕಣಾಚಾರಿ ಅವರ ಸಂಸ್ಕರಣ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಇಂತಹ ದಿನಾಚರಣೆ ದಿನದಂದು ಮಹಾನ್ ನಾಯಕರ ಹಾಗ ಶರಣ ಸಂತರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ನಂತರ ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಡಿ.ಮೌನೇಶ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಸಹ ಅಮರಶಿಲ್ಪಿ ಚಕಣಾಚಾರಿ ಅವರ ಸಂಸ್ಕರಣ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸುವ ಜೊತೆಗೆ ದಿನಾಚರಣೆದಂದು ಶಿಲ್ಪಿಗಳನ್ನು ಕರೆಸಿ ಸನ್ಮಾನಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಶಿರಸ್ತೇದಾರ ರಮೇಶ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಡಿ.ರುದ್ರಪ್ಪ ಅಚಾರ್, ಉಪಾಧ್ಯಕ್ಷ ಕಾಳಚಾರಿ ಎ.ಚಂದ್ರಶೇಖರ, ಮುಖಂಡರಾದ ಆನಂದಾಚಾರ್, ಎ.ಮೌನೇಶ ಆಚಾರ್, ಮಂಜುನಾಥ, ಚನ್ನಪ್ಪ, ಬಸವರಾಜ ಸೇರಿದಂತೆ ಇತರರು ಇದ್ದರು. ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *