ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಕೊಟ್ಟು ಭವಿಷ್ಯದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು : ರೇಖಾ ಎಂ. ಬಿ….

ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಕೊಟ್ಟು ಭವಿಷ್ಯದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು : ರೇಖಾ ಎಂ. ಬಿ….

ಬಳ್ಳಾರಿ / ಕಂಪ್ಲಿ : ತಾಲೂಕಿನ ಮೆಟ್ರಿ ಗ್ರಾಮದ ಶರಣಮ್ಮ ಮತ್ತು ದೊಡ್ಡ ಬಸವಯ್ಯಸ್ವಾಮಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಾಗ್ಯಜ್ಯೋತಿ ಮಹಿಳಾ ಜ್ಞಾನವಿಕಾಸ ಕೇಂದ್ರದ ಅಡಿಯಲ್ಲಿ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಣದ ಪಾತ್ರ ಕುರಿತು ಕಾರ್ಯಕ್ರಮ ಜರಗಿತು ಈ ವೇಳೆ ಸಮನ್ವಯ ಅಧಿಕಾರಿ ರೇಖಾ ಎಂ ಬಿ ಮಾತನಾಡಿ ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಕೊಟ್ಟು ಭವಿಷ್ಯದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಹಾಗೂ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.ನಂತರ ಸಂಪನ್ಮೂಲ ವ್ಯಕ್ತಿ ಶಿಕ್ಷಕ ಎಸ್ ರಾಮಪ್ಪ ಮಾತನಾಡಿ ಶಿಕ್ಷಣ ಜೊತೆಗೆ ಮಾನವೀಯ ಮೌಲ್ಯಗಳು ಹಾಗೂ ಆರೋಗ್ಯವನ್ನು ಕಾಪಾಡಿಕೊಂಡು ಸಮಾಜದಲ್ಲಿ ಸುಸಂಸ್ಕೃತ ವ್ಯಕ್ತಿಗಳಾಗಿ ಗ್ರೂಪ್ಗೊಳ್ಳಬೇಕು ಅಲ್ಲದೆ ತಂದೆ ತಾಯಿ ಗುರು ಹಿರಿಯರು ಹೇಳುವ ವಿಚಾರಗಳನ್ನು ಪಾಲಿಸಬೇಕು ಎಂದರು.ಈ ಸಂದರ್ಭದಲ್ಲಿ ಮುಖ್ಯ ಗುರು ಜಗದೀಶ್ ಸಹ ಶಿಕ್ಷಕ ದೊಡ್ಡ ಬಸವ ಸ್ವಾಮಿ ವೀರೇಶ್ವರಮ್ಮ ಸೇವಾ ಪ್ರತಿನಿಧಿ ವಿಶಾಲಾಕ್ಷಿ ಸೇರಿದಂತೆ ಮಕ್ಕಳು ಇದ್ದರು.ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *