ಕನ್ನಡ ಸಿನಿಮಾಗಳು ವಿಶ್ವದಲ್ಲಿ ನಂಬರ್ 1 : ಎಂ. ಎಸ್. ಮುನ್ನಾ.

ಬಳ್ಳಾರಿ / ಕಂಪ್ಲಿ : ಹೌದು 50 ದಿನ ಕಂಪ್ಲೀಟ್ ಮಾಡಿದ ಕಾಂತಾರ ಚಾಪ್ಟರ್-1 ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಚಾಪ್ಟರ್-1 ಪಟ್ಟಣದ ಚಂದ್ರಕಲಾ ಚಿತ್ರಮಂದಿರದಲ್ಲಿ ಸಿನಿಮಾ ಭರ್ಜರಿ 50 ದಿನಗಳನ್ನ ಪೂರೈಸಿದೆ. ಈ ಖುಷಿ ಸಂಭ್ರಮವನ್ನ ಚಿತ್ರಮಂದಿರದ ಹೊನ್ನಳ್ಳಿ ಸುರೇಶ ಹಾಗೂ ಸ್ನೇಹಿತರು, ಅಭಿಮಾನಿಗಳು ಸೇರಿದಂತೆ ಕೇಕ್ ಕತ್ತರಿಸಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮ ಹಂಚಿಕೊಂಡರು. ಕರವೇ ವಿದ್ಯಾರ್ಥಿ ಘಟಕದ ತಾಲೂಕು ಅಧ್ಯಕ್ಷ ಎಂ. ಎಸ್. ಮುನ್ನಾ ( ಷಾಶವಲಿ) ಮಾತನಾಡಿ ಅಕ್ಟೋಬರ್ 2ರಂದು ವಿಶ್ವದಾದ್ಯಂತ ತೆರೆಕಂಡ ಈ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಈ ಸಿನಿಮಾ ಇಂಗ್ಲೀಷ್ ಭಾಷೆಗೂ ಡಬ್ಬಿಂಗ್ ಆಗಿ ತೆರೆಕಂಡಿದೆ. ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವದು ನಿಜ್ವಾಕ್ಕೂ ಸಂತೋಷದ ವಿಚಾರವಾಗಿದೆ.ಕೆಲವು ಅದ್ಧೂರಿ ಕಮರ್ಷಿಯಲ್ ಚಿತ್ರಗಳ ಜೊತೆಗೆ ಹಲವು ಕಲಾತ್ಮಕ ಚಿತ್ರಗಳು ಕೂಡ ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆ ಪಡೆಯುತ್ತಿವೆ. ಕರ್ನಾಟಕ ರಾಜ್ಯೋತ್ಸವದ ಈ ತಿಂಗಳಲ್ಲಿ ಕನ್ನಡ ಸಿನಿಮಾಗಳು ವಿಶ್ವದಲ್ಲಿ ನಂಬರ್ 1 ಆಗಿವೆ ಎಂದು ತಿಳಿಸಿದರು.ಈ ಸಂರ್ಭದಲ್ಲಿ ಹೊನ್ನಳ್ಳಿ ಸುರೇಶ್, ಸೊಫೀ, ಗೋಪಿ, ಹೊನ್ನಳ್ಳಿ ಭದ್ರಿ, ರಂಗಪ್ಪ, ರಾಮಾಂಜಿನಿ, ಕೊಟ್ರೇಶ್, ಹೊನ್ನಳ್ಳಿ ಪ್ರಣಭ, ಅಂಜಿ, ಮೇರಿಯಂ ಸೇರಿದಂತೆ ಇತರರಿದ್ದರು.ವರದಿ : ಜಿಲಾನಸಾಬ್ ಬಡಿಗೇರ್
