ಸರಳ ಸಜ್ಜನಿಕೆ ವ್ಯಕ್ತಿಗೆ ಸಂದ ಗೌರವ,, ಸಾಮಾಜಿಕ ಸೇವೆಯಲ್ಲಿ ಗುರುತರ ಸೇವೆಗೈದ ಶರಣಯ್ಯ ಕರಡಿಮಠಗೆ ಡಾಕ್ಟರೇಟ್ ಪದವಿ,,

ಸರಳ ಸಜ್ಜನಿಕೆ ವ್ಯಕ್ತಿಗೆ ಸಂದ ಗೌರವ, ಸಾಮಾಜಿಕ ಸೇವೆಯಲ್ಲಿ ಗುರುತರ ಸೇವೆಗೈದ ಶರಣಯ್ಯ ಕರಡಿಮಠಗೆ ಡಾಕ್ಟರೇಟ್ ಪದವಿ,,

ಗಂಗಾವತಿ : ಶರಣಯ್ಯ ಡಿ. ಕರಡಿಮಠ ಮೂಲತಃ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕುದ್ರಮೋತಿಯವರಾಗಿದ್ದು, ಸದಾ ಕ್ರೀಯಾಶೀಲ ವ್ಯಕ್ತಿತ್ವದೊಂದಿಗೆ ಸಮಾಜದಲ್ಲಿ ಸರ್ವ ಸಮುದಾಯದೊಂದಿಗೆ ತಮ್ಮನ್ನು ತೊಡಗಿಸಿಕೊಂಡು ಸಮಾಜಿಕ ಕಳ-ಕಳಿ ಹೊಂದಿದವರಾಗಿದ್ದಾರೆ.ಇವರು ತಾಲೂಕ ವೀರಶೈವ ಲಿಂಗಾಯತ ಯುವ ವೇದಿಕೆ ತಾಲೂಕ ಸಂಚಾಲಕರಾಗಿ, ವಿಷ್ಣು ಸೇನಾ ಸಮಿತಿಯ ಜಿಲ್ಲಾ ಉಪಾಧ್ಯಕ್ಷನಾಗಿ, ಪತ್ರಿಕಾರಂಗ, ಸೇರಿದಂತೆ ಶೈಕ್ಷಣಿಕ ರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸುವ ಜೊತೆಗೆ ಹಲವಾರು ಸಂಘ ಸಂಸ್ಥೆಗಳ ಜೊತೆಗೆ ವಿವಿಧ ಸಮಾಜಿಕ ಸೇವೆಯ ಹೋರಾಟಗಳಲ್ಲಿ ಭಾಗಿಯಾಗುವ ಮೂಲಕ ತಮ್ಮನ್ನು ಸಮಾಜಕ್ಕೆ ಅರ್ಪಿಸಿಕೊಂಡವರಲ್ಲಿ ಒಬ್ಬರಾಗಿದ್ದರಾರೆ.ಇವರ ಚಿತ್ರರಂಗ ಹಾಗೂ ಪೋಲಿಸ್ ಇಲಾಖೆ ಸೇರಿದಂತೆ ವೈದ್ಯರೊಂದಿಗೆ ಉತ್ತಮ ಒಡನಾಟ ಹೊಂದಿರುವ ಇವರು ತಮ್ಮ ಸ್ನೇಹತರಿಗೆ ಹಾಗೂ ಪರಿಚಯಸ್ಥರಿಗೆ ಸಮಯ ಬಂದಾಗ ವಿವಿಧ ಇಲಾಖೆಗಳಲ್ಲಿ ಸಹಾಯ, ಸಹಕಾರ ಮಾಡುವ ಮನೋಭಾವದೊಂದಿಗೆ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ.ಸಮಾಜದಲ್ಲಿ ಇಂದು ನಡೆಯುತ್ತಿರುವ ರಸ್ತೆ ಅಪಘಾತಗಳಂತಹ ದುರಂತಗಳು ಸಂಭವಿಸಿ ಪ್ರಾಣಾಪಾಯವಾಗುವುದನ್ನು ಜಾಗೃತಿ ಮೂಡಿಸಲೆಂದು ತಮ್ಮ ಮಗನ ನಾಮಕರಣದ ಸಂದರ್ಭದಲ್ಲಿ ತಮ್ಮ ಸ್ನೇಹಿತರಿಗೆ, ವಾಹನ ಚಾಲಕರಿಗೆ ಉಚಿತ ಹೆಲ್ಮೆಟ್ ನೀಡುವ ಮೂಲಕ ಸಮಾಜಿಕ ಕಳಿ ಕಳಿ ಹೊಂದಿದ್ದು ಶ್ಲಾಘನೀಯವಾಗಿದೆ.ಇತ್ತೀಚಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಕಾರ್ಯಕಾರಣಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ. ಇವರ ಸಮಾಜಿಕ ಚಿಂತನೆ ಹಾಗೂ ಕಳ ಕಳಿಯನ್ನು ಗುರುತಿಸಿದ ಬೆಂಗಳೂರಿನ ಸನ್ ರೈಸ್ ಇಂಟರ್ ನ್ಯಾಷನಲ್ ಯುನಿವರ್ಸಿಟಿ ಆಡಳಿತ ಮಂಡಳಿಯು ಪ್ರೊಫೈಲ್ ಮತ್ತು ಅರ್ಜಿಯನ್ನು ಪರಿಶೀಲಿಸಿದ ನಂತರ ಅನುಮೋದಿಸಿ. ವಿಶ್ವವಿದ್ಯಾನಿಲಯದ ಸಂದರ್ಭದಲ್ಲಿ 29.11.2025 ರಂದು ಬೆಂಗಳೂರಿನಲ್ಲಿ ಸಾಮಾಜಿಕ ಸೇವೆಯ ವಿಭಾಗದಲ್ಲಿ ಇವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿ ಸನ್ಮಾಸಿ ಗೌರವಿಸಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.

Leave a Reply

Your email address will not be published. Required fields are marked *