ರೆಡ್ಡಿ ವೀರಣ್ಣ ಶಾಲೆಯಲ್ಲಿ ಅರ್ಥಪೂರ್ಣವಾಗಿ ಮಕ್ಕಳ ದಿನಾಚರಣೆ…

ಕಾರಟಗಿ ನವನಗರ್ : ಕಮ್ಮವಾರಿ ಶಿಕ್ಷಣ ಸಂಸ್ಥೆ ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.ಬೇಬಿ ಕ್ಲಾಸ್ ಎಲ್ ಕೆ ಜಿ, ಯು ಕೆ ಜಿ, ಮಕ್ಕಳಿಗೆ ಫ್ಯಾನ್ಸಿ ಡ್ರೆಸ್ ಕಾಂಪಿಟೇಶನ್ 6ನೇ ತರಗತಿ ವಿದ್ಯಾರ್ಥಿಗಳಿಗೆ ಆಹಾರಮೇಳ, ವೆಜಿಟೇಬಲ್ ಅಂಡ್ ಫ್ರೂಟ್ ಕಾರ್ವಿಂಗ್, ಇನ್ನು ವಿವಿಧ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು,ಈ ವೇಳೆ ಸಂಸ್ಥೆಯ ಅಧ್ಯಕ್ಷರ ಶೇಷಗಿರಿರಾವ್ ಕೊಲ್ಲಾ ಮಾತನಾಡಿ ಇಂತಹ ಆಹಾರ ಮೇಳವನ್ನು ಆಯೋಜನೆ ಮಾಡುವುದರಿಂದಾಗಿ ವಿದ್ಯಾರ್ಥಿಗಳಲ್ಲಿ ವ್ಯಾಪಾರ ವ್ಯವಹಾರದ ಬಗ್ಗೆ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಿದಂತಾಗುತ್ತದೆ ಎಂದು ತಿಳಿಸಿದರು.ನಂತರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದರಲ್ಲಿ ಉತ್ಸಾಹ ತೋರಿದರು.ಈ ಸಂದರ್ಭದಲ್ಲಿ ಆಡಳಿತ ಅಧಿಕಾರಿ ಶ್ರೀಮನ್ ನಾರಾಯಣ, ಡಾ ಮೊಹಮ್ಮದ್ ರಫೀಕ್ ಪ್ರಾಚಾರ್ಯರು, ಶ್ರೀದೇವಿ ಕೊಲ್ಲಾ ಶಾಲೆಯ ಮುಖ್ಯಸ್ಥರು, ಸಾಜಿದ ಬೇಗಂ, ಶಿಕ್ಷಕ ವೃಂದ ಪಾಲಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

