62 ನೂತನ ಬಿಸಿಎಂ ಹಾಸ್ಟೆಲ್ ಮಂಜೂರು ಎಸ್ಎಫ್ಐ ಸಂಘಟನೆಯ ಹೋರಾಟಕ್ಕೆ ಸಂದ ಜಯ….

ಕೊಪ್ಪಳ: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಾವಿರಾರು ವಿದ್ಯಾರ್ಥಿಗಳು ಹಾಸ್ಟೆಲ್ ನಿಂದ ವಂಚಿತರಾಗವುದನ್ನು ತಪ್ಪಿಸಲು ರಾಜ್ಯ ಸರ್ಕಾರ ನೂತನವಾಗಿ 62 ಹಾಸ್ಟೆಲ್ ಮಂಜೂರು ಮಾಡಿರವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಸಮಿತಿಯು ಸ್ವಾಗತಿಸುತ್ತದೆ ಇದು ನಮ್ಮ ಸಂಘಟನೆಯ ಹೋರಾಟಕ್ಕೆ ದೊರೆತ ಜಯ ಎಂದು ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಗ್ಯಾನೇಶ್ ಕಡಗದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಹಿಂದುಳಿದ ಸಮುದಾಯಕ್ಕೆ ಸೇರಿದ ಹತ್ತಾರು, ಸಾವಿರಾರು ವಿದ್ಯಾರ್ಥಿಗಳು ಪ್ರಮುಖವಾಗಿ ತಮ್ಮ ಉತ್ತಮ ಗುಣಮಟ್ಟದ ಹಾಗೂ ಉನ್ನತ ಶಿಕ್ಷಣಕ್ಕಾಗಿ ವಿವಿಧ ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಕ್ಕೆ ಶಿಕ್ಷಣ ಮುಂದುವರಿಸಲು ಬರವ ವಿದ್ಯಾರ್ಥಿಗಳು ಹಾಸ್ಟೆಲ್ ನಿಂದ ವಂಚಿತರಾಗವುದನ್ನು ಅರಿತುಕೊಂಡ ನಮ್ಮ ಸಂಘಟನೆಯು ನಿರಂತರವಾಗಿ ಹಾಸ್ಟೆಲ್ ಗಾಗಿ ಸಾವಿರಾರು ವಿದ್ಯಾರ್ಥಿಗಳು ಎಸ್ಎಫ್ಐ ನೇತೃತ್ವದಲ್ಲಿ ರಾಜ್ಯದ ವಿವಿಧ ಜಿಲ್ಲಾಗಳಲ್ಲಿ ಪ್ರತಿಭಟನೆ ನಡೆಸಿದೆ ಜೊತೆಗೆ ಹಾಸ್ಟೆಲ್ ಬಲವರ್ಧನೆಗಾಗಿ ರಾಜ್ಯವ್ಯಾಪ್ತಿ ಶೈಕ್ಷಣಿಕ ಜಾಥಾ ಮಾಡಿ ಹಾವೇರಿಯಲ್ಲಿ ನಡೆದ ಎಸ್ಎಫ್ಐ ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಮಾವೇಶದಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ನೂತನ ಹಾಸ್ಟೆಲ್ ಮಂಜೂರು ಮಾಡುಂತೆ ಆಗ್ರಹಿಸಿ ಹೋರಾಟದ ನಿರ್ಣಯ ತೆಗೆದುಕೊಳ್ಳಲಾಗಿದ ಹಿನ್ನೆಲೆಯಲ್ಲಿ ಬಿಸಿಎಮ್ ಇಲಾಖೆಯ 62 ನೂತನ ಹಾಸ್ಟೆಲ್ ಮಂಜೂರು ಮಾಡಿ ಆದೇಶ ಹೊರಡಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು.ನಮ್ಮ ಸಂಘಟನೆಯ ಹೋರಾಟದ ಪರಿಣಾಮವಾಗಿ ರಾಜ್ಯ ಸರ್ಕಾರ ಈ ಶೈಕ್ಷಣಿಕ ವರ್ಷದಲ್ಲಿ ನೂತನವಾಗಿ 100 ಸಂಖ್ಯೆ ಬಲವುಳ್ಳ 62 ಹಾಸ್ಟೆಲ್ ಮಂಜೂರು ಮಾಡಿರುವುದನ್ನು ಹಾಗೂ ಅದರಲ್ಲಿ ಕೊಪ್ಪಳ ಜಿಲ್ಲೆಯ ತಳಕಲ್ ಗೆ 6 ಹಾಸ್ಟೆಲ್ ಮುಂಜೂರು ಮಾಡಿದ್ದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಇಲಾಖೆಯ ವ್ಯಾಪ್ತಿಯ ಹಾಸ್ಟೆಲ್ ಗಳು ವಸತಿ ಶಾಲಾ ಸದಸ್ಯರಾದ ನಾಗರಾಜ್ ಯಮನೂರ. ಅಮರೇಶ್. ಬಸಯ್ಯ್. ಕನಕಚಲ. ಹನುಮೇಶ್. ಪತ್ರಿಕೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
