ಗ್ರಾಮೀಣ ಪ್ರದೇಶದಲ್ಲೂ ಗುಣಮಟ್ಟದ ಉನ್ನತ ಶಿಕ್ಷಣ ಸಾಧ್ಯ- ಡಾ.ಕರಿಗೂಳಿ…

ಗ್ರಾಮೀಣ ಪ್ರದೇಶದಲ್ಲೂ ಗುಣಮಟ್ಟದ ಉನ್ನತ ಶಿಕ್ಷಣ ಸಾಧ್ಯ- ಡಾ.ಕರಿಗೂಳಿ…

ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ದಿನಾಂಕ : 09ನೇ ಅಕ್ಟೋಬರ್‌ 2026 ರಂದು 2026-27ನೇ ಸಾಲಿನ *ಸಾಂಸ್ಕೃತಿಕ,ಕ್ರೀಡೆ,NSS, ರೆಡ್ ಕ್ರಾಸ್ ,ಪ್ಲೇಸ್ ಮೆಂಟ್ ಸೆಲ್ ಮತ್ತು ಇತರೆ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ ಮತ್ತು ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ* ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಕರಿಗೂಳಿಯವರು ವಿದ್ಯಾರ್ಥಿಗಳಿಗೆ ನಿಮ್ಮ ಕನಸುಗಳು ದೊಡ್ಡದಾಗಿರಲಿ, ಆದರೆ ಮನಸ್ಸು ಸದಾ ವಿನಮ್ರವಾಗಿರಲಿ. ಯಶಸ್ಸು ಸಿಕ್ಕಾಗ ಗರ್ವಪಡಬೇಡಿ, ಸೋಲು ಬಂದಾಗ ಕುಗ್ಗಬೇಡಿ. ಪ್ರತಿಯೊಂದು ಅನುಭವವೂ ನಿಮ್ಮ ಬದುಕಿನ ಪಾಠವಾಗಲಿ. ಎಂದು ಸಲಹೆ ನೀಡಿದರು, ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದರ ಕುರಿತು ಮಾತನಾಡಿದರು, ಗ್ರಾಮೀಣ ಪ್ರತಿಭೆಗಳೇ ಜಗತ್ತಿನಲ್ಲಿ ಮೇರು ಸ್ತರದಲ್ಲಿವೆ ಎಂದರು. ಕಾರ್ಯಕ್ರಮದ ಉದ್ಘಾಟಕರಾದ ಡಾ.ಸರ್ಫರಾಜ್ ಅಹ್ಮದ ಸಹ ಪ್ರಾಧ್ಯಾಪಕರು ರವರುವಿದ್ಯಾರ್ಥಿಗಳು ಯಾವಾಗಲೂ ಧನಾತ್ಮಕ ಚಿಂತನೆಗಳಲ್ಲಿ ತೊಡಗಿದರೆ ತಮ್ಮ ಬದುಕು ಸುಂದರವಾಗಿರಲೂ ಸಾಧ್ಯ ಎಂದು ತಿಳಿಸಿದರು , ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ರಾದ ಶ್ರೀ ವೀರೇಶ ರವರು ಪ್ರಾಸ್ತಾವಿಕ ನುಡಿಯಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಮಾತ್ರ ಜ್ಞಾನದೊಂದಿಗೆ ಸಮಾಜದಲ್ಲಿ ಎಲ್ಲರಿಗೂ ಗೌರವಿಸುವ ಮತ್ತು ಬದುಕುವ ಕಲೆ ಕಲಿಯಲು ಸಾಧ್ಯ ಎಂದು ವಿವರಿಸಿದರು ಕನ್ನಡ ಉಪನ್ಯಾಸಕರಾದ ವಿನಯಕುಮಾರ ರವರು ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಮತ್ತು ಕ್ರೀಡೆ ಗಳಲ್ಲಿ ಸ್ಪರ್ಧೆ ಗಳನ್ನು ಏರ್ಪಡಿಸಿ ಬಹುಮಾನಗಳನ್ನು ನೀಡಲಾಯಿತು. ಬಿಎ,ಬಿಕಾಂನ 5ನೇ ಸೆಮ್ ವಿದ್ಯಾರ್ಥಿನಿಯರಾದ ಹೇಮಾ,ರಕ್ಷಿತಾ,ಅಕ್ಷತಾ,ಲಾವಣ್ಯ, ಚಂದ್ರು,ಶಾಂಭವಿ ,ವೀರೇಶ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಡಾ.ಶಶಿಕುಮಾರ, ರವಿಕುಮಾರ,ಡಾ.ವಿರುಪಾಕ್ಷ.ಕೆ,ಶಂಕ್ರಪ್ಪ ಮತ್ತು ಎಲ್ಲಾ ವಿಭಾಗದ ಉಪನ್ಯಾಸಕರು, ಆಡಳಿತ ಸಿಬ್ಬಂದಿ ವಿನಾಯಕ, ಸಹಾಯಕ ಸಿಬ್ಬಂದಿ ಶಾಂತಿ, ಶರಣಬಸವ ಹಾಗೂ ಕಾಲೇಜಿನ ಎಲ್ಲಾ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *