ಹಿರಿಯ ನಟ ನಾನಾ ಪಾಟೇಕರ್ ನಿಧನಕ್ಕೆ ತೀವ್ರ ಸಂತಾಪ…

ಹಿರಿಯ ನಟ ನಾನಾ ಪಾಟೇಕರ್ ನಿಧನಕ್ಕೆ ತೀವ್ರ ಸಂತಾಪ…

ಬೆಂಗಳೂರು / ಗಂಗಾವತಿ:*ಭಾರತೀಯ ಚಿತ್ರರಂಗದ ಹೆಸರಾಂತ ನಟ *ನಾನಾ ಪಾಟೇಕರ್ (75)* ಅವರ ನಿಧನವಾರ್ತೆ ನೋವುಂಟು ಮಾಡಿದೆ.ಇಂದು ಮುಂಜಾನೆ ಅಕ್ಟೋಬರ್ 08, 2026 ರಂದು ಗೋವಾದ ದೋನಾ ಪೌಲಾದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ಮತ್ತು ಮಣಿಪಾಲ್ ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ. ಬೆಳಿಗ್ಗೆ 5.20ಕ್ಕೆ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.ಹಿಂದಿ ಮತ್ತು ಮರಾಠಿ ಚಿತ್ರಗಳ ಜೊತೆ ಕನ್ನಡ, ತೆಲುಗು, ತಮಿಳು ಹೀಗೆ ಅನೇಕ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದ ನಾನಾ ಪಾಟೇಕರ್ ಮೂಲತ: ಮರಾಠಿ ರಂಗಭೂಮಿಯ ಕೊಡುಗೆ.ತಮ್ಮ ವಿಶಿಷ್ಟ ಬಗೆಯ ಅಭಿನಯ ಮತ್ತು ಮಾತಿನ ಶೈಲಿಯಿಂದ ಜನಮನ ಸೆಳೆದಿದ್ದ ನಾನಾ ಪಾಟೇಕರ್ ಒಬ್ಬ ಅಭಿಜಾತ ಕಲಾವಿದ. ಅವರು ಬಿಟ್ಟುಹೋದ ಸ್ಥಾನವನ್ನು ಮತ್ತೊಬ್ಬ ಕಲಾವಿದ ತುಂಬುವುದು ಕಷ್ಟ.ತಮ್ಮ ದುಡಿಮೆಯ ಒಂದಷ್ಟು ಪಾಲನ್ನು ಅಬಲರ ಸೇವೆಗಾಗಿಯೇ ಬಳಸುತ್ತಿದ್ದ ಸಮಾಜಮುಖಿ ಜೀವವನ್ನು ನಾವಿಂದು ಕಳೆದುಕೊಂಡಿದ್ದೇವೆ.ಪದ್ಮಶ್ರೀ, ಫಿಲ್ಮ್‌ಫೇರ್ ‌ನಂತಹ ಅನೇಕ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದ ನಾನಾ ಪಾಟೇಕರ್ ಪ್ರಶಸ್ತಿಗಳನ್ನು ಮೀರಿದ ಪ್ರೀತಿ-ಅಭಿಮಾನದ ಸ್ಥಾನವನ್ನು ಚಲನಚಿತ್ರ ಪ್ರಿಯರ ಹೃದಯದಲ್ಲಿ ಪಡೆದವರು.ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬ ಮತ್ತು ಅಭಿಮಾನಿ ವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ.

Leave a Reply

Your email address will not be published. Required fields are marked *