ನಗರದ ಗ್ರಾಮ ದೇವತೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಸಕಲಸಿದ್ಧತೆ…. ನಾರಾಯಣಪ್ಪ ನಾಯಕ.

ನಗರದ ಗ್ರಾಮ ದೇವತೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಸಕಲಸಿದ್ಧತೆ…. ನಾರಾಯಣಪ್ಪ ನಾಯಕ.

ಗಂಗಾವತಿ. ನಗರದ ಗ್ರಾಮದೇವತೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ ಹೇಳಿದರು. ಅವರು ಮಾಧ್ಯಮದೊಂದಿಗೆ ಮಾತನಾಡಿ ಮೂರು ವರ್ಷಕ್ಕೊಮ್ಮೆ ಜರುಗಲಿರುವ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಇದೇ ದಿನಾಂಕ ಹದಿನೆಂಟರಿಂದ ಆರಂಭಗೊಂಡು ದಿನಾಂಕ 21ಕ್ಕೆ ಸಂಪನ್ನಗೊಳ್ಳಲಿದೆ. ನಾಲ್ಕು ದಿನಗಳ ಕಾಲ ಜರುಗಲಿರುವ ನಗರ ಸಭೆಯ ವ್ಯಾಪ್ತಿಯ ನಾಲ್ಕು ದಿಕ್ಕಿಗಳಲ್ಲಿ ಜಾತ್ರಾ ಮಹೋತ್ಸವದ ಕಮಾನುಗಳು. ಪ್ರಮುಖ ವೃತ್ತಗಳು ಸೇರಿದಂತೆ ದಾರಿ ಉದ್ದಕ್ಕೂ ವಿದ್ಯುತ್ ದೀಪ ಅಲಂಕಾರ ತಳಿರು ತೋರಣಗಳಿಂದ ಅಲಂಕರಿಸುವುದರ ಮೂಲಕ ಆಗಮಿಸುವ ಭಕ್ತಾದಿಗಳಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.. ಜಾತ್ರಾ ಮಹೋತ್ಸವದ ಪ್ರಯುಕ್ತ ಪೂರ್ಣಕುಂಭ ಮೆರವಣಿಗೆ ದುರ್ಗಾ ಸಪ್ತಶತಿ ಪಾರಾಯಣ ನವಚಂಡಿ ಹೋಮ ಹಾಗೂ ಶುಭ ಯಾತ್ರೆ ಸೇರಿದಂತೆ ದಿನಾಂಕ 21 ರಂದು ಶ್ರೀ ದುರ್ಗಾ ದೇವಿ ಅಮ್ಮನವರ ಮಹಾ ರಥೋತ್ಸವ ಕಾರ್ಯಕ್ರಮದೊಂದಿಗೆ ಸಂಪನ್ನ ಗೊಳ್ಳಲಿದೆ ಎಂದು ತಿಳಿಸಿದ ಅವರು ಈ ನಾಲ್ಕು ದಿನದ ಜಾತ್ರಾ ಮಹೋತ್ಸವಕ್ಕೆ ಎಲ್ಲಾ ಸಮಾಜದ ಬಾಂಧವರು ಸಕಲ ಭಕ್ತಾದಿಗಳು ಭಾಗವಹಿಸುವುದರ ಮೂಲಕ ಶ್ರೀ ದುರ್ಗಾದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

ಜೊತೆಗೆ ಶ್ರೀ ದುರ್ಗಾದೇವಿಗೆ ವಿಶೇಷ ಸೇವೆ ಸಲ್ಲಿಸುವ ಭಕ್ತಾದಿಗಳು ತಮ್ಮ ಹೆಸರುಗಳನ್ನು ಮುಂಚಿತವಾಗಿ ದೇವಸ್ಥಾನದ ಕಾರ್ಯಾಲಯದಲ್ಲಿ ನೊಂದಾಯಿಸಬೇಕೆಂದು ತಿಳಿಸಿದರು.

Leave a Reply

Your email address will not be published. Required fields are marked *