ನಗರಾಭಿವೃದ್ಧಿ ಇಲಾಖೆ ಸರ್ಕಾರದ ಆಧೀನ ಕಾರ್ಯದರ್ಶಿ ಟಿ ಮಂಜುನಾಥ್ ಅವರಿಂದ ಗಂಗಾವತಿ ನಗರಸಭೆಯ ಮೀಸಲಾತಿ ಪ್ರಕಟ..

ಕರ್ನಾಟಕ ಪುರಸಭೆ ಕಾಯ್ದೆ 1964ರ ಕಲಂ 11 ರನ್ವಯ (Karnataka Act 22 of 1964) ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ: ಸಂವ್ಯಶಾಇ 13 ಶಾಸನ 2012, ಬೆಂಗಳೂರು, ದಿನಾಂಕ 30/08/2012 (Karnataka Act No. 32 of 2012) & : 240 ಎಂಎಲ್ಆರ್ 2013, ದಿನಾಂಕ 18/12/2013 ಹಾಗೂ ತಿದ್ದುಪಡಿ ಆದೇಶ ಸಂಖ್ಯೆ:ನಅಇ 21 ಎಂಎಲ್ಆರ್ 2016, ದಿನಾಂಕ 09/02/2016ರಲ್ಲಿ ಸ್ಪಷ್ಟಪಡಿಸಿರುವಂತೆ, ಸರ್ಕಾರವು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ 2011ರ ಜನಗಣತಿಯನ್ನಾಧರಿಸಿ, ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆಗೆ ವಾರ್ಡುವಾರು ಕರಡು ಮೀಸಲಾತಿಯನ್ನು ಪ್ರಕಟಿಸಲಾಗಿದೆ.ಈ ಅಧಿಸೂಚನೆಯ ಮೂಲಕ ಗಂಗಾವತಿ ನಗರಸಭೆಯ ವಾರ್ಡುಗಳಿಗೆ ಕರಡು ಮೀಸಲಾತಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಲಾಗಿದೆ. ಈ ಅಧಿಸೂಚನೆಯನ್ನು ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 7 ದಿನಗಳ ತರುವಾಯ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಅಧಿಸೂಚನೆಗೆ ಸಂಬಂಧಿಸಿದಂತೆ ಯಾವುದೇ ಸಲಹೆ/ಆಕ್ಷೇಪಣೆಯನ್ನು ಸಲ್ಲಿಸಲು ಇಚ್ಚಿಸುವ ವ್ಯಕ್ತಿಗಳು ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ನಿಗದಿತ ದಿನಾಂಕಕ್ಕೆ ಮೊದಲು ಜಿಲ್ಲಾಧಿಕಾರಿ, ಕೊಪ್ಪಳ ಜಿಲ್ಲೆ ಇವರಿಗೆ ಸಲ್ಲಿಸಬೇಕೆಂದು ಈ ಮೂಲಕ ಸೂಚಿಸಲಾಗಿದೆ.1. ಗಂಗಾವತಿ ನಗರಸಭೆಯ ವಾರ್ಡುಗಳ ಸಂಖ್ಯೆ: 35 (ಮೂವತ್ತೈದು)2. ಪ್ರತಿ ವಾರ್ಡಿಗೆ ತಲಾ ಒಂದು ಸ್ಥಾನವನ್ನು ಮೀಸಲಿಡಲಾಗಿದೆ.3. ಪ್ರತಿ ವಾರ್ಡಿಗೆ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಹಿಂದುಳಿದ ವರ್ಗ/ ಸಾಮಾನ್ಯ ಸ್ಥಾನವನ್ನು ಮತ್ತು ಆಯಾ ವರ್ಗದ ಮಹಿಳೆಯರ ಸ್ಥಾನವನ್ನು ಅನುಬಂಧದ ಕಲಂ 3 ರಲ್ಲಿ ನಿಗದಿಪಡಿಸಿದೆ.ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ(ಟಿ.ಮಂಜುನಾಥ)ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ ಗಂಗಾವತಿ. ಇಲ್ಲಿನ ನಗರಸಭೆಯ 35 ವಾರ್ಡ್ಗಳ ಮೀಸಲಾತಿಯನ್ನು ಕರ್ನಾಟಕ ರಾಜ್ಯಪಾಲರ ಆಜ್ಞಾಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಆಧೀನ ಕಾರ್ಯದರ್ಶಿ ಬಾಬಾ ನಗರಾಭಿವೃದ್ಧಿ ಇಲಾಖೆ ಟಿ ಮಂಜುನಾಥ್ ಪ್ರಕಟಿಸಿದ್ದಾರೆ. ವಾರ್ಡ್ ನಂಬರ್ 1 ಹಿಂದುಳಿದ ವರ್ಗಗಳ( ಎ) ಮಹಿಳೆ ವಾರ್ಡ್ ನಂಬರ್ 2 ಪರಿಶಿಷ್ಟ ಪಂಗಡ ವಾರ್ಡ್ ನಂಬರ್ 3 ಸಾಮಾನ್ಯ. ವಾರ್ಡ್ ನಂಬರ್ 4 ಪರಿಶಿಷ್ಟ ಪಂಗಡ ಮಹಿಳೆ ವಾರ್ಡ್ ನಂಬರ್ 5 ಹಿಂದುಳಿದ ವರ್ಗಗಳ(ಬಿ) ಮಹಿಳೆ. ವಾರ್ಡ್ ನಂಬರ್ 6 ಸಾಮಾನ್ಯ. ವಾರ್ಡ್ ನಂಬರ್ 7 ಹಿಂದುಳಿದ ವರ್ಗಗಳ (ಎ) ವಾರ್ಡ ನಂಬರ್ ಎಂಟು ಸಾಮಾನ್ಯ ಮಹಿಳೆ ವಾರ್ಡ್ ನಂಬರ್ 9 ಹಿಂದುಳಿದ ವರ್ಗಗಳ( ಬಿ) ವಾರ್ಡ್ ನಂಬರ್ 10. ಹಿಂದುಳಿದ ವರ್ಗಗಳ (ಎ) ಮಹಿಳೆ. ವಾರ್ಡ್ ನಂಬರ್ 11 ಸಾಮಾನ್ಯ. ವಾರ್ಡ್ ನಂಬರ್ 12 ಸಾಮಾನ್ಯ. ವಾರ್ಡ್ ನಂಬರ್ 13 ಹಿಂದುಳಿದ ವರ್ಗಗಳ (ಎ)ವಾರ್ಡ್ ನಂಬರ್ 14 ಸಾಮಾನ್ಯ ಮಹಿಳೆ. ವಾರ್ಡ್ ನಂಬರ್ 15 ಸಾಮಾನ್ಯ. ವಾರ್ಡ್ ನಂಬರ್ 16 ಸಾಮಾನ್ಯ. ವಾರ್ಡ್ ನಂಬರ್ 17 ಹಿಂದುಳಿದ ವರ್ಗಗಳ (ಎ). 18 ಸಾಮಾನ್ಯ ಮಹಿಳೆ. ವಾರ್ಡ್ ನಂಬರ್ 19 ಸಾಮಾನ್ಯ. ವಾರ್ಡ್ ನಂಬರ್ 20 ಸಾಮಾನ್ಯ. ವಾರ್ಡ್ ನಂಬರ್ 21 ಹಿಂದುಳಿದ ವರ್ಗಗಳ (ಎ). ವಾರ್ಡ್ ನಂಬರ್ 22 ಸಾಮಾನ್ಯ ಮಹಿಳೆ. ವಾರ್ಡ್ ನಂಬರ್ 23 ಪರಿಶಿಷ್ಟ ಜಾತಿ. ವಾರ್ಡ್ ನಂಬರ್ 24 ಹಿಂದುಳಿದ ವರ್ಗಗಳ (ಎ) ಮಹಿಳೆ. ವಾರ್ಡ್ ನಂಬರ್ 25 ಸಾಮಾನ್ಯ. ವಾರ್ಡ್ ನಂಬರ್ 26 ಸಾಮಾನ್ಯ ಮಹಿಳೆ. ವಾರ್ಡ್ ನಂಬರ್ 27 ಪರಿಶಿಷ್ಟ ಜಾತಿ. ವಾರ್ಡ್ ನಂಬರ್ 28 ಹಿಂದುಳಿದ ವರ್ಗಗಳ ( ಎ) ಮಹಿಳೆ ವಾರ್ಡ್ ನಂಬರ್ 29 ಸಾಮಾನ್ಯ ಮಹಿಳೆ. ವಾರ್ಡ್ ನಂಬರ್ 30 ಸಾಮಾನ್ಯ ಮಹಿಳೆ. ವಾರ್ಡ್ ನಂಬರ್ 31 ಪರಿಶಿಷ್ಟ ಜಾತಿ ಮಹಿಳೆ. ವಾರ್ಡ್ ನಂಬರ್ 32 ಪರಿಶಿಷ್ಟ ಜಾತಿ. ವಾರ್ಡ್ ನಂಬರ್ 33 ಸಾಮಾನ್ಯ ಮಹಿಳೆ. ವಾರ್ಡ್ ನಂಬರ್ 34 ಸಾಮಾನ್ಯ ಮಹಿಳೆ. ವಾರ್ಡ್ ನಂಬರ್ 35 ಪರಿಶಿಷ್ಟ ಜಾತಿ ಮಹಿಳೆ. ಇದಕ್ಕೆ ಸಂಬಂಧಿಸಿದಂತೆ ಯಾರಾದರೂ ತಕರಾರು ಸಲ್ಲಿಸುವ ಉದ್ದೇಶ ಒಂದಿದ್ದರೆ ಏಳು ದಿನದ ಒಳಗೆ ಸಲ್ಲಿಸುವಂತೆ ಅಧೀನ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

