ಕಮ್ಮವಾರಿ ಶಿಕ್ಷಣ ಸಂಸ್ಥೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ …

ಕಾರಟಗಿ ನವನಗರ್ : ಕಮ್ಮವಾರಿ ಶಿಕ್ಷಣ ಸಂಸ್ಥೆ ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಂದ ಗೌತಮಿ ಪುತ್ರ ಶಾತಕರ್ಣಿ ಎಂಬ ಪೌರಾಣಿಕ ನೃತ್ಯ ರೂಪಕ ಎಲ್ಲರ ಗಮನ ಸೆಳೆಯಿತು. ನಂತರ ಶಾಲಾ ಸಂಸತ್ತಿಗೆ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಾಮಫಲಕ ವಿತರಿಸಲಾಯಿತು, ಶಿಕ್ಷಕರಾದ ಬಸವರಾಜ್ ಸ್ವಾಮಿ ಇವರು ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಶ್ರೀಮನ್ ನಾರಾಯಣ ಆಡಳಿತ ಅಧಿಕಾರಿ, ಡಾ ಮೊಹಮ್ಮದ್ ರಫೀಕ್ ಪ್ರಾಚಾರ್ಯರು, ವಸಂತ ದೇಸಾಯಿ, ಶ್ರೀದೇವಿ ಕೊಲ್ಲಾ ಶಾಲೆಯ ಮುಖ್ಯಸ್ಥರು, ಸಾಜಿದ ಬೇಗಂ, ಗಂಗಮ್ಮ ಹಿರೇಮಠ, ಅಮರೇಶ್ ಬಿ, ಡ್ಯಾನ್ಸ್ ಮಾಸ್ಟರ್ ಬಿ ದೇವರಾಜ್, ಶಿಕ್ಷಕ ವೃಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
