ಶ್ರೀ ಕನ್ನಿಕಾ ಪರಮೇಶ್ವರಿ ಶರಣ್ ನವರಾತ್ರಿ ಮಹೋತ್ಸವ: ಗಮನ ಸೆಳೆದ ಕವಿ ಕಾವ್ಯ ಕುಂಚ….

ಶ್ರೀ ಕನ್ನಿಕಾ ಪರಮೇಶ್ವರಿ ಶರಣ್ ನವರಾತ್ರಿ ಮಹೋತ್ಸವ: ಗಮನ ಸೆಳೆದ ಕವಿ ಕಾವ್ಯ ಕುಂಚ….

ಗಂಗಾವತಿ: ಧಾರ್ಮಿಕ ಆಚರಣೆಯ ಜೊತೆಗೆ ಸಾಂಸ್ಕೃತಿಕ ಪ್ರತಿಭೆಗಳ ಅನಾವರಣದ ದೃಷ್ಟಿಯಿಂದ ಈ ಬಾರಿಯ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಶರಣ್ ನವರಾತ್ರಿ ಪ್ರಯುಕ್ತ “ಕವಿ ಕಾವ್ಯ ಕುಂಚ” ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಆರ್ಯವೈಶ್ಯ ಸಮಾಜ ಹಿರೇಜಂತಕಲ್ ವಿರೂಪಾಪುರ ಅಧ್ಯಕ್ಷ ಸರೋಜಿ ನಾಗರಾಜ ಶೆಟ್ಟಿ ಹೇಳಿದರು.ನಗರದ ದೇವಸ್ಥಾನದ ಶ್ರೀ ಶ್ರೀನಿವಾಸ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಧರ್ಮ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಹಬ್ಬ ಹುಣ್ಣಿಮೆ ಆಚರಣೆಗಳಿಂದ ದೂರದರ್ಶಿ ಸಂಸ್ಕಾರವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಸಮಾಜದ ಸಂಘಟನೆಗೆ ಪ್ರೇರಕ ಶಕ್ತಿಯಾಗಿ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಾಗುತ್ತದೆ ಎಂಬ ಸಂದೇಶವನ್ನು ಅವರು ವ್ಯಕ್ತಪಡಿಸಿದರು.

ಇದಕ್ಕೂ ಪೂರ್ವದಲ್ಲಿ ದಸರಾ ವೈಭವದ ಅಡಿಯಲ್ಲಿ ಅಲ್ಲಿವಾಗಿ ಶ್ರೀ ಆಚಾರ್ ಬರೇಬಾಳ್, ಗೊರೆಬಾಳ್ ಇವರಿಂದ ಶ್ರೀ ವೆಂಕಟೇಶ್ವರ ಮಹಾತ್ಮೆ ಪ್ರವಚನ ಜರುಗಿತು.ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಡಿ. ರಾಜಕುಮಾರ್, ದರೋಜಿ ವೆಂಕಟೇಶ್, ಎನ್.ವಿ. ಮಂಜು, ಎನ್. ವಿಜಯ್, ದಮ್ಮೂರು ಸುರೇಶ್, ಗೋಪಾಲ ಶೆಟ್ಟಿ, ರುಕ್ಮಿಣಿ ಬಾಯಿ ದಮ್ಮೂರು, ಪದ್ಮಾವತಿ ದರೋಜಿ, ದಮ್ಮೂರು ಮಂಜುಳಾ ಸೇರಿದಂತೆ ವಾಸವಿ ಯುವಜನ ಸಂಘದ ಅಧ್ಯಕ್ಷರು, ವಾಸವಿ ಮಹಿಳಾ ಪದಾಧಿಕಾರಿಗಳು, ಆರ್ಯವೈಶ್ಯ ಸಮಾಜದ ಬಂಧುಗಳು ಪಾಲ್ಗೊಂಡಿದ್ದರು.*ವರದಿ: ನಾಗರಾಜ್ ದರೂಜಿ, ಗಂಗಾವತಿ*

Leave a Reply

Your email address will not be published. Required fields are marked *