ಗ್ರಾಮ ದೇವತೆ ಶ್ರೀ ದುರ್ಗಾದೇವಿಯ ನಾಲ್ಕು ದಿನಗಳ ಜಾತ್ರಾ ಮಹೋತ್ಸವ…

ಗ್ರಾಮ ದೇವತೆ ಶ್ರೀ ದುರ್ಗಾದೇವಿಯ ನಾಲ್ಕು ದಿನಗಳ ಜಾತ್ರಾ ಮಹೋತ್ಸವ…

ಗಂಗಾವತಿ. ಇಲ್ಲಿನ ಶ್ರೀ ದುರ್ಗಾದೇವಿ ಗ್ರಾಮ ದೇವತೆಯ ಜಾತ್ರಾ ಮಹೋತ್ಸವ ದಿನಾಂಕ 18ರಿಂದ 21 ರವರೆಗೆ ನಾಲ್ಕು ದಿನಗಳ ಕಾಲ ಶ್ರದ್ಧೆ ಭಕ್ತಿ ಸಂಭ್ರಮದಿಂದ ಜರುಗಲಿದೆ ಎಂದು ದೇವಸ್ಥಾನದ ಸಮಿತಿಯ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ. ಸೇರಿದಂತೆ ವಿವಿಧ ಸಮಾಜದ ಮುಖಂಡರುಗಳಾದ ಅಮರ ಜ್ಯೋತಿ ವೆಂಕಟೇಶ ನಾಗರಾಜ ಸೈಯದ್ ಅಲಿ ಅನ್ನಪೂರ್ಣ ಸಿಂಗ್ ರಮೇಶ್ ದಳಪತಿ ದುರ್ಗಪ್ಪ ಎಜೆ ರಂಗನಾಥ್ ವೀರಭದ್ರಪ್ಪ ನಾಯಕ್ ಹನುಮಂತಪ್ಪ ನಾಯಕ ಗೀತಾ ವಿಕ್ರಂ ಚೌಡಕಿ ರಮೇಶ್ ಸೇರಿದಂತೆ ಮತ್ತಿತರರು ಹೇಳಿದರು. ಅವರು ಸೋಮವಾರದಂದು ದೇವಸ್ಥಾನದ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ದಿನಾಂಕ 18 ರಂದು ಪೂರ್ಣ ಕುಂಭೋತ್ಸವದ ಮೆರವಣಿಗೆ ಸಕಲ ವಾದ್ಯ ವೈಭವದೊಂದಿಗೆ ಕಲ್ಮಠ ದೇವಸ್ಥಾನದಿಂದ ಪ್ರಮುಖ ರಾಜ ಬೀದಿಗಳ ಮೂಲಕ ದೇವಸ್ಥಾನಕ್ಕೆ ಆಗಮಿಸಲಿದ್ದು ಈ ಸಂದರ್ಭದಲ್ಲಿ ಮಹಾ ಸಂಕಲ್ಪ ದುರ್ಗಾ ಸಪ್ತ ಶತಿ ಪಾರಾಯಣ ಮಹಾ ದಾಸೋಹ ಜರುಗಲಿದ್ದು ಸಂಜೆ ಕುಂಕುಮಾರ್ಚನೆ ನಡೆಯಲಿದೆ ಹಾಗೆಯೇ ದಿನಾಂಕ 20 ರಂದು ಮಹಾ ಗಣಪತಿ ಪೂಜೆ ಲವಚಂಡಿ ಹೋಮ ಅಮ್ಮನವರ ಮೆರವಣಿಗೆ ಜರ್ಗದಿದ್ದು ದಿನಾಂಕ 21 ರಂದು ಶ್ರೀ ದುರ್ಗಾದೇವಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಅಮ್ಮನವರಿಗೆ ಅಭಿಷೇಕ ಹೂವಿನ ಅಲಂಕಾರ ಸೇರಿದಂತೆ ಲಲಿತ ಸಹಸ್ರ ಪಾರಾಯಣ ಮಹಾಪ್ರಸಾದ ಜರುಗಲಿದೆ ಎಂದು ತಿಳಿಸಿದ ಅವರು ಈ ಮೇಲಿನಎಲ್ಲಾ ಕಾರ್ಯಕ್ರಮಗಳಿಗೆ ಸರ್ವ ಧರ್ಮದವರು ಜನಾಂಗದವರು ಆಗಮಿಸಿ ಮಾತೆ ದುರ್ಗಾಪರಮೇಶ್ವರಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

Leave a Reply

Your email address will not be published. Required fields are marked *