ಶ್ರೀ ತುಂಗಭದ್ರಾ ಸೇವಾ ಸಮಿತಿಯಿಂದ ಆಗಸ್ಟ್ 3 ರಂದು ಎಡದಂಡೆ ಕಾಲುವೆಗೆ ಬಾಗಿನ ಸಮರ್ಪಣೆ…

ಶ್ರೀ ತುಂಗಭದ್ರಾ ಸೇವಾ ಸಮಿತಿ ಗಂಗಾವತಿ ಇವರಿಂದ ಆಗಸ್ಟ್ 3ರಂದು ಭಾನುವಾರ ಐತಿಹಾಸಿಕ ಪ್ರಸಿದ್ಧ ಮತ್ತು ಪಂಚ ಲಿಂಗಗಳಲ್ಲಿ ಒಂದಾಗಿರುವ ಶ್ರೀ ವಾಣಿಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ವಾಣಿಭದ್ರೇಶ್ವರ ದೇವರಿಗೆ ರುದ್ರಾಭಿಷೇಕ ಹಾಗೂ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಇರುವ ತುಂಗಭದ್ರ ಎಡದಂಡೆ ಕಾಲುವೆಗೆ ಬಾಗಿನ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ ಈ ಒಂದು ಕಾರ್ಯಕ್ರಮದಲ್ಲಿ ಗಂಗಾವತಿ ನಗರ ಹಾಗೂ ಕೊಪ್ಪಳ ಜಿಲ್ಲೆಯ ಸರ್ವ ಸಮಾಜ ಬಾಂಧವರು ವ್ಯಾಪಾರಸ್ಥ ಬಂಧುಗಳು ಮಿತ್ರರು ಹಾಗೂ ಗುರಿ ಹಿರಿಯರು ಪಾಲ್ಗೊಂಡು ಶ್ರೀ ವಾಣಿಭದ್ರೆಶ್ವರ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ತುಂಗಭದ್ರ ಸೇವಾ ಸಮಿತಿಯ ಪ್ರಮುಖರಾದ ಮಹಾಂತೇಶ ಶಾಸ್ತ್ರಿ ಮಠ ಮಲ್ಲಿಕಾರ್ಜುನ ಮುಸಾಲಿ ಡಾಕ್ಟರ್ ಶರಭಯ್ಯ ಸ್ವಾಮಿ ಹನುಮೇಶ್ ವಕೀಲರು ವೀರೇಶ್ ಆನೆಗೊಂದಿ ಶ್ರೀಕಾಂತ ಹಿರೇಮಠ ಚನ್ನಬಸವ ಕಲ್ಮಠ ಪ್ರದೀಪ್ ಖಾದಿ ಬಂಡಾರ ಹಾಗೂ ವೀರಶೈವ ಮಹಿಳಾ ಘಟಕದ ಪ್ರಮುಖರಾದ ಪ್ರಿಯಾಂಕ ಮುಸಾಲಿ ಅವರು ಮನವಿ ಮಾಡಿದ್ದಾರೆ ..
