ಗಮನ ಸೆಳೆದ ರಂಗು ರಂಗೋಲಿ ನ ರಂಗೋಲಿ ಸ್ಪರ್ಧೆ….

ಗಮನ ಸೆಳೆದ ರಂಗು ರಂಗೋಲಿ ನ ರಂಗೋಲಿ ಸ್ಪರ್ಧೆ ಬೇಸಿಗೆ ರಜೆ ಅವಧಿಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಕಳೆದ 17 ವರ್ಷಗಳಿಂದ ಸಿವಿಎಸ್ ಉಚಿತ ಕೋಚಿಂಗ್ ಸೆಂಟರ್ ವತಿಯಿಂದ ನಡೆಸಿಕೊಂಡು ಬರುತ್ತಿರುವ ಉಚಿತ ತರಬೇತಿ ಕಾರ್ಯಗಾರದಲ್ಲಿ ವಿಜ್ಞಾನ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮಕ್ಕಳು ಅತ್ಯಂತ ಆಸಕ್ತಿಯಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ನಿರ್ಣಾಯಕರಾಗಿ ಭಾಗವಹಿಸಿದ್ದ ಉಲ್ಲಾಸ ರೆಡ್ಡಿ ಸಿದ್ದಲಿಂಗೇಶ್ವರ ಪೂಲಬಾವಿ, ಹಾಗೂ ಬಸವರಾಜ ಭೋವಿ ಶಿಕ್ಷಕರು ಮಾತನಾಡಿ 10ನೇ ತರಗತಿಯಲ್ಲಿ ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಅಂಕ ಗಳಿಸಲು ಚಿತ್ರಗಳು ನೆರವಾಗುತ್ತವೆ ಈ ದಿಸೆಯಲ್ಲಿ ಮಕ್ಕಳ ಕಲಾ ಕೌಶಲ್ಯ, ವಿವರಣ ಶೈಲಿಯನ್ನು ಪರೀಕ್ಷಿಸಲು ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ಮಾತನಾಡಿ ಈ ಸ್ಪರ್ಧೆಯಿಂದ ನಮಗೆ ವಿಷಯದ ಜ್ಞಾನ ಪಡೆಯಲು ಹಾಗೂ ಹೆಚ್ಚಿನ ಅಂಕ ಪಡೆಯಲು ಸಹಕಾರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಕೋಚಿಂಗ್ ಸೆಂಟರ್ ನ ಗುಂಪು ಫೋಟೋ ತೆಗೆಯಲಾಯಿತು.

ಈ ಸಂದರ್ಭದಲ್ಲಿ ಶ್ರೀಮಠದ ಹಿರಿಯ ಧರ್ಮದರ್ಶಿಗಳಾದ ಸಿದ್ಧನಗೌಡ ಪಾಟೀಲ್, ಕೆ ಚೆನ್ನಬಸಯ್ಯಸ್ವಾಮಿ, ಚಂದ್ರೇಗೌಡ ಪೊಲೀಸ್ ಪಾಟೀಲ್ ಸಿಬಿಎಸ್ ಕೋಚಿಂಗ್ ಸೆಂಟರ್ ನ ಸಂಚಾಲಕ ಸಿದ್ಧಲಿಂಗೇಶ್ವರ ಪೂಲಬಾವಿ, ಸಂಪನ್ಮೂಲ ಶಿಕ್ಷಕರಾದ ಬಸವರಾಜ್ ಭೋವಿ, ಉಲ್ಲಾಸ್ ರೆಡ್ಡಿ, ಮುಕೇಶ್ ,ಉಮೇಶ್, ಗದ್ಯಮ್ಮ , ರಘುನಂದನ್, ಶರಣೆಗೌಡ ಪೊಲೀಸ್ ಪಾಟೀಲ್, ಗೌಸ್ ಪಾಷ, ಶಿವಾನಂದ್, ಶ್ರೀ ಮಠದ ಸಚಿನ್ ಅರುಣ್ ಪುನೀತ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *