ಶಾಲೆಯ ಮೆಟ್ಟಿಲೇ ಏರದ ಬಡ ಕುರಿಗಾಯಿ ಮಗಳ ಸಾಧನೆ,, ಎಸ್ಎಸ್ಎಲ್ ಸಿಯಲ್ಲಿ 625ಕ್ಕೆ 614 ಅಂಕಗಳಿಸಿ ಶೇ 98.24 ಪಡೆದ ಕವಿತಾ ಒಂಟಿಗಾರ್,,

ಗಂಗಾವತಿ : 04ಇಂದರಗಿ ಪ್ರೌಢಶಾಲೆ ವಿದ್ಯಾರ್ಥಿನಿ ಕವಿತಾ ಒಂಟಿಗಾರ್ ಎಸ್ಎಸ್ಎಲ್ ಸಿ ಪರಿಕ್ಷೇಯಲ್ಲಿ 625ಅಂಕಗಳಿಗೆ 614 ಅಂಕ ಪಡೆದು (ಶೇ.98.24) ಸಾಧನೆ ಮಾಡಿ ಶಾಲೆಯ ಹಾಗೂ ಪಾಲಕರ ಕಿರ್ತೀ ಹೆಚ್ಚಿಸಿದ್ದಾಳೆ.ಹೌದು,, ಈ ವಿದ್ಯಾರ್ಥಿನಿಯ ತಂದೆ ಶಿವಪ್ಪ ಒಂಟಿಗಾರ್ ಇವರು ಇಂದರಗಿ ಗ್ರಾಮದವರಾಗಿದ್ದು ಇವರಿಗೆ ಇಬ್ಬರೂ ಪುತ್ರಿಯರಿದ್ದು ಓರ್ವ ಮಗನಿದ್ದಾನೆ, ಇಬ್ಬರೂ ಪುತ್ರಿಯರಲ್ಲಿ ಮೊದಲನೇ ಮಗಳು ಶಿಲ್ಪಾ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.90ರಷ್ಟು ಪಡೆದು ಸಾಧನೆ ಮಾಡಿದ್ದರೇ, ಎರಡನೇ ಮಗಳು ಕವಿತಾ ಹತ್ತನೇ ತರಗತಿ ಪರಿಕ್ಷೆಯಲ್ಲಿ ಶೇ.98.24 ಪಡೆದಿದ್ದು ತಂದೆ ತಾಯಿ ಸಂತಸ ವ್ಯಕ್ತ ಪಡಿಸಿದ್ದಾರೆ.ತಂದೆ ಶಿವಪ್ಪ ಒಂಟಿಗಾರ್ ವೃತ್ತಿಯಲ್ಲಿ ಕುರಿಗಾಯಿಯಾಗಿದ್ದು, ತಾಯಿ ಕೂಲಿ ಕೆಲಸ ಮಾಡುತ್ತಾ ಕಡು ಬಡತನದ ಮದ್ಯೆಯೇ ಮಕ್ಕಳ ಶಿಕ್ಷಣಕ್ಕೆ ಶ್ರಮವಹಿಸುತ್ತಿದ್ದಾರೆ. ಇವರು ತಮ್ಮ ಮಕ್ಕಳ ಉನ್ನತ ವ್ಯಾಸಾಂಗ ಮಾಡುತ್ತ ಉತ್ತಮ ಅಂಕಗಳೊಂದಿಗೆ ತೆರ್ಗಡೆ ಹೊಂದುತ್ತಿರುವುದು ಸಂತೋಷದ ವಿಚಾರವಾದರೂ ಮುಂದಿನ ವ್ಯಾಸಾಂಗಕ್ಕೆ ಹಣ ಕೂಡಿಸುವುದು ಕಷ್ಟಕರವಾಗುತ್ತಿದೆ ಎನ್ನುತ್ತಾರೆ ಶಿವಪ್ಪ, ನಾವು ಕುರಿಗಾಯಿಗಳಾಗಿದ್ದು ನಮ್ಮ ದುಡಿಮೆ ಅಷ್ಟಕ್ಕಷ್ಟೇ ಆದರೂ ಎದೆ ಗುಂದದೇ ಮಕ್ಕಳನ್ನು ಉನ್ನತ ವ್ಯಾಸಾಂಗ ಮಾಡಿಸಿ ಅವರ ದಾರಿಗೆ ಅವರನ್ನು ಹಚ್ಚಬೇಕೆಂದರೇ, ಈಗ ದುಬಾರಿ ಶಿಕ್ಷಣವಾಗಿದ್ದು ನಮ್ಮಂತಹ ಬಡ ಜನತೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ರುಚಿ ಎಂದು ತಿನ್ನಲು ಹೋದರೇ ಬಾಯಿನೆ ಸುಟ್ಟುಕೊಳ್ಳುವ ಪರಸ್ಥಿತಿ ನಮಗಿದೆ. ಆದರೂ ನನ್ನ ಶಕ್ತಿಗೂ ಮೀರಿ ಪ್ರಯತ್ನ ಪಟ್ಟು ನನ್ನ ಮಕ್ಕಳನ್ನು ಸರಕಾರಿ ನೌಕರಿ ಮಾಡಿಸುತ್ತೇನೆ, ಆ ಭಗವಂತ ನಂಬಿದವರನ್ನು ಎಂದಿಗೂ ಕೈ ಬಿಡುವುದಿಲ್ಲಾ ಎಂದು ವಿಶ್ವಾಸದ ಮಾತುಗಳನ್ನು ಹೇಳಿದರು. ಇಂತಹ ಗ್ರಾಮೀಣ ಪ್ರತಿಭೆಗಳಿದ್ದರೂ ಬಡ ಕುಟುಂಬದಲ್ಲಿ ಜನಿಸುವುದು ಒಂದು ಶಾಪವಾಗಿದೆ. ಇಂತಹ ಬಡ ಪ್ರತಿಭೆಗಳ ಉನ್ನತ ವ್ಯಾಸಾಂಗಕ್ಕೆ ಸರಕಾರವಾಗಲಿ, ಜನಪ್ರತಿನಿಧಿಗಳಾಗಲಿ ಇಲ್ಲವೇ ಶಿಕ್ಷಣ ಪ್ರೇಮಿಳಾಗಲಿ ಸಹಾಯ ಹಸ್ತ ಚಾಚಲು ಮುಂದಾಗಬೇಕು ಎನ್ನುವುದು ನಮ್ಮ ಪತ್ರಿಕೆಯ ಅಭಿಲಾಷೆಯಾಗಿದೆ. *ಬಾಕ್ಸ್,,,* *ಗ್ರಾಮೀಣ ಭಾಗದ ಕೂಲಿಕಾರರ, ರೈತರ, ಬಡಜನತೆಯ ಮಕ್ಕಳುಪ್ರತಿಭಾವಂತರಿದ್ದು, ನಮ್ಮ ಭಾಗದಲ್ಲಿ ವಿದ್ಯಾವಂತರಿಗೇನು ಕೊರತೆ ಇಲ್ಲಾ, ಆದರೆ ಇಂತಹ ವಿದ್ಯಾರ್ಥಿಗಳಿಗೆ ಆರ್ಥಿಕ ಮುಗ್ಗಟ್ಟಿನ ಕೊರತೆ ಇದ್ದು, ಮುಂದೆ ದಾರಿ ತೋಚದೇ ಓದು ನಿಲ್ಲಿಸಿದ ಸಾಕಷ್ಟು ನಿದರ್ಶನಗಳಿವೆ. ಇದರೂ ಇಂದರಗಿ ಈ ಶಾಲಾ ಮಕ್ಕಳಿಗೆ ಇಷ್ಟೋಂದು ಉತ್ತಮ ಶ್ರೇಣಿಯಲ್ಲಿ ಅಂಕ ಪಡೆದು ಶಾಲೆಗೆ ಪಾಲಕರಿಗೆ ಕಿರ್ತೀ ತಂದಿದ್ದಕ್ಕಾಗಿ ಅವರಿಗೆ ಅಭಿನಂದನೆ.* *ಡಾ.ಅಮರೇಶ ಕುಂಬಾರ.*ಶಿಕ್ಷಣ ಪ್ರೇಮಿಗಳು ಇಂದರಗಿ.
