ಕಲಾವಿದ ರಾಮಣ್ಣಗೆ ಪ್ರಶಸ್ತಿ ಪ್ರದಾನ…ಕಲಾವಿದ ರಾಮಣ್ಣಗೆ ಪ್ರಶಸ್ತಿ ಪ್ರದಾನ…

ಗಂಗಾವತಿ : ಜಾನಪದ ಅಕಾಡೆಮಿಯ 2025ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಯನ್ನು ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ಹಿರಿಯ ಹಗಲು ವೇಷ ಸಾಧಕ ಕಲಾವಿದ ರಾಮಣ್ಣ ಅವರಿಗೆ ಪ್ರದಾನ ಮಾಡಲಾಯಿತು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜಾನಪದ ಅಕಾಡೆಮಿ ಶುಕ್ರವಾರ ಆಯೋಜಿಸಿದ್ದ 2025ನೇ ಸಾಲಿನ ಗೌರವ ಪ್ರಶಸ್ತಿ, ತಜ್ಞ ಪ್ರಶಸ್ತಿ ಹಾಗೂ 2024ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಸಾಧಕ ಕಲಾವಿದ ರಾಮಣ್ಣ ಅವರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ನಂತರ 30ಸಾಧಕ ಕಲಾವಿದರಿಗೆ ಮೈಸೂರು ಪೇಟ, ಮುತ್ತಿನ ಹಾರ, ಶಾಲು ಹಾಗೂ ಪ್ರಶಸ್ತಿ ಫಲಕ ವಿತರಿಸಿ ಗೌರವಿಸಿದರು.ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ರಿಜಿಸ್ಟ್ರಾರ್ ಎನ್.ನಮ್ರತ, ಸದಸ್ಯ ಸಂಚಾಲಕ ಬಾ ಹುಲಿಕುಂಟೆ ಮೂರ್ತಿ, ಬಾ ಜೀವನ ಸಾಬ್ ಬಿನ್ನಾಳ, ಮಹೆಬೂಬ್ ಕಿಲ್ಲೇದಾರ್ ಸೇರಿದಂತೆ ಅಕಾಡೆಮಿಯ ಎಲ್ಲಾ ಸದಸ್ಯರು ಹಾಗೂ ರಾಮಣ್ಣ ಕುಟುಂಬದವರು, ಬಂಧು ಬಳಗದವರು ಪಾಲ್ಗೊಂಡಿದ್ದರು.

