ಶ್ರದ್ಧೆ ಭಕ್ತಿಯಿಂದ ಜರುಗಿದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ನಿರ್ಮಾಣದ ಭೂಮಿ ಪೂಜೆ…..

ಗಂಗಾವತಿ.. ನಗರದ ಆರ್ಯವೈಶ್ಯ ಸಮಾಜ ಬಾಂಧವರ ಅತ್ಯಂತ ಬಹು ನಿರೀಕ್ಷಿತ ಕುಲದೇವತೆ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ ನಿರ್ಮಾಣದ ಭೂಮಿ ಪೂಜೆ ಭಾದ್ರಪದ ಮಾಸದ ಸೋಮವಾರ ದಿನದಂದು ಜಯನಗರದಲ್ಲಿರುವ ಎಂ ಎನ್ ಎಂ. ಪ್ರೌಢಶಾಲೆಯ ಸಮೀಪದಲ್ಲಿರುವ ಮೂರುವರೆ ಎಕರೆ ವಿಸ್ತೀರ್ಣದ ನಿವೇಶನದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ರೂಪ ರಾಣಿ ಲಕ್ಷ್ಮಣ ರಾಯಚೂರ್. ಈಶ್ವರ ಶೆಟ್ಟಿ. ಸುರೇಶ್ ಶೆಟ್ಟಿ ಸೇರಿದಂತೆ ಮಾಜಿ ಸಚಿವ ಮಲ್ಲಿಕಾರ್ಜುನ್ ನಾಗಪ್ಪ. ಮಾಜಿ ಶಾಸಕ ಪರಣ್ಣ ಮುನವಳ್ಳಿ. ಮಾಜಿ ವಿಧಾನ ಪರಿಷತ್ ಸದಸ್ಯ ಹೆಚ್ ಆರ್ ಶ್ರೀ ನಾಥ್. ಮಾಜಿ ಸಂಸದ ಶಿವರಾಮೇಗೌಡ ರಾಜಮಾತೆ ಲಲಿತಾರಾಣಿ ರಾಯಲು ಸೇರಿದಂತೆ ಮತ್ತಿತರ ಗಣ್ಯರ ಸಮಕ್ಷಮದಲ್ಲಿ ನೆರವೇರಿಸಲಾಯಿತು.

ಇದಕ್ಕೂ ಪೂರ್ವದಲ್ಲಿ ಶ್ರೀ ಕನ್ನಿಕಾ ಪರಮೇಶ್ವರಿಯ ಭಾವಚಿತ್ರದ ಭವ್ಯ ಮೇಲ್ಮನೆಗೆ ಶ್ರೀ ನಗರೇಶ್ವರ ದೇವಸ್ಥಾನ ದಿಂದ ಪೂರ್ಣ ಕುಂಭದೊಂದಿಗೆ ಸಕಲ ವಾದ್ಯ ವೈಭವದೊಂದಿಗೆ ಭೂಮಿ ನಿವೇಶನದ ಸ್ಥಳಕ್ಕೆ ಆಗಮಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ದಿಗಂಬರ್ ಭಟ್ ಜೋಶಿ ಹಾಗೂ ವೇದಮೂರ್ತಿ ಭೀಮ್ ಭಟ್ ಬಾಸ ಪಟ್ಟಣ ಅವರು ಅಧ್ಯಕ್ಷೆ ರೂಪ ರಾಣಿ ದಂಪತಿಗಳಿಗೆ ಮಹಾಸಂಕಲ್ಪ ಮಹಾಗಣಪತಿ ಪೂಜೆ ಇತ್ಯಾದಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಸಾಂಗತವಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮಾತನಾಡಿ. ಕಳೆದ 13 ವರ್ಷಗಳ ಬಳಿಕ ದೇವಸ್ಥಾನದ ನಿರ್ಮಾಣಕ್ಕೆ ಸಮಾಜ ಬಾಂಧವರು ಮುಂದಾಗಿರುವುದು ಸಂತಸದಾಯಕವಾಗಿದೆ. ಈ ಹಿನ್ನೆಲೆಯಲ್ಲಿ ಸರ್ವರನ್ನು ವಿಶ್ವಾಸಕ್ಕೆ ಪಡೆದುಕೊಳ್ಳುವುದರ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಬೇಕು ಮುಂದೊಂದು ದಿನ ಶಕ್ತಿ ಪೀಠವಾಗಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. ಸಮಾಜದ ಕಾರ್ಯದರ್ಶಿ ಈಶ್ವರ ಶೆಟ್ಟಿ ಮಾತನಾಡಿ ಸಮಾಜದ ಹಿರಿಯರ ಕಂಡ ಕನಸು ಇಂದು ಸಕಾರಗೊಂಡಿದೆ. ಸದರಿ ನಿವೇಶನದ ಸಮೀಪದಲ್ಲಿ ಮಾತಾ ಗಾಯಿತ್ರಿ ದೇವಿ. ಪಕ್ಕದಲ್ಲಿ ಶ್ರೀ ಗಂಗಾದೇಶ್ವರ ದೇವಸ್ಥಾನ ಮಾರ್ಗ ಮಧ್ಯದಲ್ಲಿ ಸತ್ಯ ಆಂಜನೇಯ ಗುಡಿ ಹೀಗೆ ಧಾರ್ಮಿಕ ತಾಣ ವಾಗಿ ಕಂಗೊಳಿಸುತ್ತಿರುವ ಸದರಿ ನಿವೇಶನದಲ್ಲಿ. ಮಾತೆ ಕನ್ನಿಕಾ ಪರಮೇಶ್ವರಿ ದೇವಸ್ಥಾನ ನಿರ್ಮಾಣಕ್ಕೆ ಮಾಜಿ ಸಚಿವರು ಮಾಜಿ ಶಾಸಕರು ಮಾಜಿ ಸಂಸದರು ಸರ್ವ ಸಮಾಜ ಬಾಂಧವರು ಭಾಗವಹಿಸುವುದರ ಮೂಲಕ ಸಾಕ್ಷಿಯಾಗಿರುವುದು ಮತ್ತಷ್ಟು ಉತ್ಸಾಹ ಹೆಚ್ಚಿಸಿದೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಶ್ರವಣಕುಮಾರ್ ರಾಯ್ಕರ್. ನಾಗರಾಜ ದರೋಜಿ ಶೆಟ್ಟಿ. ಎಸ್ ರಾಘವೇಂದ್ರ ಜೋಗದ ನಾರಾಯಣಪ್ಪ ನಾಯಕ್. ರಮೇಶ್ ಚೌಡಕಿ ವಾಸುದೇವನವಲಿ ಹಾಗೂ ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಭಾಗ್ಯ ಈಶ್ವರ ಶೆಟ್ಟಿ. ಹಾಗೂ ಸದಸ್ಯರೂ ಪದಾಧಿಕಾರಿಗಳು ಸಮಾಜದ ಹಿರಿಯರು ಮುಖಂಡರು ಯುವಕರು ಪಾಲ್ಗೊಂಡಿದ್ದರು.
