ಶ್ರೀ ಜಗನ್ನಾಥ ದಾಸರು ಭಾಗ ೦೨ ಧ್ವನಿ ಸರುಳಿ ಹಾಗು ಟೀಸರ್ ಬಿಡುಗಡೆ ಇಂದುರೆಡ್ಡಿ, ಹಿಟ್ನಾಳ್, ಲಲಿತಾರಾಣಿ, ಪರಣ್ಣ, ಶ್ರೀನಾಥ, ನಿರ್ಮಾಪಕ ಹವಲ್ದಾರ್ ಭಾಗಿ..

ಗಂಗಾವತಿ: ನಗರದ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಸೆಪ್ಟಂಬರ್ ೨೨ ಸೋಮವಾರ ಸಂಜೆ ೦೬ ಗಂಟೆಗೆ ಶ್ರೀ ನಗರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಸಮಾಜ ಗಂಗಾವತಿ ಹಾಗು ಮಾತಾಂಬುಜಾ ಮೂವಿಸ್ ಬೆಂಗಳೂರು ಸಹಯೋಗದಲ್ಲಿ ನಿರ್ಮಾಪಕ ಹಾಗು ನಿರ್ದೇಶಕ ಮಧುಸೂದನ ಹವಲ್ದಾರ್ ಅವರ ಶ್ರೀ ಜಗನ್ನಾಥ ದಾಸರು ಭಾಗ ೦೨ ಧ್ವನಿ ಸುರಳಿ ಹಾಗು ಟೀಸರ್ ಬಿಡುಗಡೆಯಾಗಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಲು ನಟ ವಿಷ್ಣು ತೀರ್ಥ ಜೋಷಿ ಹಾಗು ಆರ್ಯ ವೈಶ್ಯ ಸಮಾಜದ ಅಧ್ಯಕ್ಷರಾದ ರೂಪರಾಣಿ ರಾಯಚೂರು ತಿಳಿಸಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ,ಕಾರ್ಯಕ್ರಮದಲ್ಲಿ ರಾಜಮಾತೆ ಲಲಿತಾರಾಣಿ ಶ್ರೀರಂಗದೇವರಾಯಲು, ಶಾಸಕ ಗಾಲಿ ಜನಾರ್ದನರೆಡ್ಡಿ, ಸಂಸದ ರಾಜಶೇಖರ್ ಹಿಟ್ನಾಳ್, ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಎಂಎಲ್ಸಿ ಹೆಚ್.ಆರ್.ಶ್ರೀನಾಥ, ಚಿತ್ರದ ನಿರ್ದೇಶಕ ಹಾಗು ನಿರ್ಮಾಪಕ ಮಧುಸೂದನ ಹವಲ್ದಾರ್ ಮುಖ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಅತಿಥಿಗಳಾಗಿ ಗಂಗಾವತಿ ತಾಲೂಕು ಬ್ರಹ್ಮಣ ಸಮಾಜದ ಅಧ್ಯಕ್ಷರಾದ ರಾಘವೇಂದ್ರ ವೆಗೂರು, ಮುಖಂಡರಾದ ಎಸ್ಬಿಹೆಚ್ ನಾರಾಯಣರಾವ್, ಶಾಮಾಚಾರ್ ಜೋಷಿ, ನರಸಿಂಹ ಜೋಷಿ, ವಾಸುದೇವ ನವಲಿ, ನಟ ಶರದದಂಡೀನ ವಕೀಲರು, ಮಾನ್ವಿ ತಾಲೂಕು ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ಮುತ್ತುರಾಜ್ ಶೆಟ್ಟಿ, ಮಾನ್ವಿ ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಮುದ್ದುರಂಗ ಮುತಾಲಿಕ್ ಸೇರಿದಂತೆ ನಟ ಹಾಗು ಪತ್ರಕರ್ತರಾದ ರಾಮಮೂರ್ತಿ ನವಲಿ, ನಟ, ನಿರ್ಮಾಪಕ ವಿಷ್ಣುತೀರ್ಥ ಜೋಷಿ, ನಟ, ಪತ್ರಕರ್ತ ನಾಗರಾಜ್ ಇಂಗಳಗಿ ಉದ್ಯಮಿ ಹಾಗು ನಟ ಪುರುಷೋತ್ತಮ ರೆಡ್ಡಿ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ವಿವರಿಸಿದರು. ಈ ಸಂದರ್ಭದಲ್ಲಿ ಅರ್ಯ ವೈಶ್ಯ ಸಮಾಜದ ಪ್ರಧಾನ ಕಾರ್ಯದರ್ಶಿ ಈಶ್ವರ್ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ಈಶ್ವರ ಶೆಟ್ಟಿ, ಉಪಾಧ್ಯಕ್ಷ ಸುರೇಶ್ ಶೆಟ್ಟಿ ಇತರರು ಇದ್ದರು.

