ಕ.ಕಾ.ಪ.ಸಂಘ ನೂತನ ಕೂಡ್ಲಿಗಿ ತಾಲೂಕಾಧ್ಯಕ್ಷರಾಗಿ ಅಯ್ಕೆಯಾದ , ಹುಡೇಂ ಕೃಷ್ಣಮೂರ್ತಿಯವರಿಗೆ ಸಮಾನ ಮನಸ್ಕ ಪತ್ರಕರ್ತರಿಂದ ಅಭಿನಂದನೆಗಳು…

ಕ.ಕಾ.ಪ.ಸಂಘ ನೂತನ ಕೂಡ್ಲಿಗಿ ತಾಲೂಕಾಧ್ಯಕ್ಷರಾಗಿ ಅಯ್ಕೆಯಾದ , ಹುಡೇಂ ಕೃಷ್ಣಮೂರ್ತಿಯವರಿಗೆ ಸಮಾನ ಮನಸ್ಕ ಪತ್ರಕರ್ತರಿಂದ ಅಭಿನಂದನೆಗಳು…

ವಿಜಯನಗರ ಜಿಲ್ಲೆ ಕೂಡ್ಲಿಗಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೂಡ್ಲಿಗಿ ತಾಲೂಕಾಧ್ಯಕ್ಷರಾಗಿ , ಕ್ರಿಯಾ ಶೀಲ ಹಿರಿಯ ಪತ್ರಕರ್ತರೂ ಹಾಗೂ ಹಿರಿಯ ಕಲಾವಿದರಾದ ಹುಡೇಂ ಕೃಷ್ಣಮೂರ್ತಿ ಯವರು ಆಯ್ಕೆಯಾಗಿದ್ದು. ಅವರನ್ನು ಈ ಸಂದರ್ಭದಲ್ಲಿ , ಕೂಡ್ಲಿಗಿ ತಾಲೂಕಿನ ಸಮಾನ ಮನಸ್ಕ ಪತ್ರಕರ್ತರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಸಂಬಂಧಿಸಿದಂತೆ ಪತ್ರಕರ್ತರಾದ ವಂದೇ ಮಾತರಂ ವಿ.ಜಿ.ವೃಷಭೇಂದ್ರ ರವರು ಮಾತನಾಡಿದ್ದಾರೆ, ಕೃಷ್ಣಮೂರ್ತಿ ಯವರು ತಾಲೂಕಿನ ಕ್ರಿಯಾಶೀಲ ಹಿರಿಯ ಪತ್ರಕರ್ತರು ಮಾತ್ರವಲ್ಲ , ಹಿರಿಯ ಕಲಾವಿದರು ಮಿಮಿಕ್ರಿ ಹಾಗೂ ಆರ್ಕೆಸ್ಟ್ರಾ ಹಾಡುಗಾರರು , ಬಣ್ಣದ ಚಿತ್ತಾರಗಳನ್ನು ಬಿತ್ತುವ ಚಿತ್ರಕಲಾವಿದರು , ಉತ್ತಮ ಸಮಾಜ ನಿರ್ಮಾಣಕ್ಕಾಗಿ ನಿಷ್ಠಾವಂತ ಬರಹಗಳನ್ನು ರಚಿಸುವ ಬರಹಗಾರರು. ವಿಜಯನಗರ ಜಿಲ್ಲೆ ಕಂಡ ಪ್ರಭಾವಿ ಹಿರಿಯ ಪತ್ರಕರ್ತರ ಸಾಲಿನಲ್ಲಿ , ಗುರುತಿಸಿಕೊಂಡಿರುವ ನಮ್ಮ ತಾಲೂಕಿನ ಹುಡೇಂ ಗ್ರಾಮದ ದಲಿತ ಸಮುದಾಯದ ಹೆಮ್ಮೆಯ ಪತ್ರಕರ್ತರಾಗಿದ್ದಾರೆ. ಹೀಗೆ ಅವರ ಕಿರು ಪರಿಚಯ ಮಾಡುತ್ತ ಸಾಗಿದರೆ , ಅವರಲ್ಲಿಯ ಬಹು ಮುಖ ಪ್ರತಿಭೆಯ ವಿಧ್ವತ್ತನ್ನು ಅನಾವರಣಗೊಳಿಸುತ್ತಾ ಮುಂದುವರೆಯಬಹುದಾಗಿದೆ. ಒಟ್ಟಾರೆಯಾಗಿ ಸಕಲ ಕಲಾವಲ್ಲಭರೂ , ಹಾಗೂ ದಲಿತ ಸಮುದಾಯದ ಗ್ರಾಮೀಣ ಭಾಗದ ಹಿರಿಯ ಪತ್ರಕರ್ತರಾದ ಹುಡೇಂ ಕೃಷ್ಣಮೂರ್ತಿಯವರು. ಇತ್ತೀಚೆಗೆ ಜರುಗಿದ ಕ.ಕಾ.ಪ.ಸಂಘದ ಕೂಡ್ಲಿಗಿ ತಾಲೂಕಾಧ್ಯಕ್ಷರ ಆಯ್ಕೆ ಚುನಾವಣೆ ಸಂದರ್ಭದಲ್ಲಿ , ಅವರು ತಾಲೂಕಾಧ್ಯಕ್ಷರಾಗಿ ಚುನಾಯಿತರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಈ ಸಂದರ್ಭಲ್ಲಿ , ಕೂಡ್ಲಿಗಿ ತಾಲೂಕಿನ ಸಮಸ್ತ ಸಮಾನ ಮನಸ್ಕ ಪತ್ರಕರ್ತರಿಂದ ವಂದನೆಗಳು ತುಂಬು ಹೃದಯದ ಅಭಿನಂದನೆಗಳು ಎಂದು ಅವರು ಪುನರುಶ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಸಮಾನ ಮನಸ್ಕ ಪತ್ರಕರ್ತರು ಇದ್ದರು.

✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *