ಸರಳತೆಯಿಂದ ಶ್ರೇಷ್ಠತೆಯೆಡೆಗೆ ಪಯಣಿಸಿದ ದೇಶಪ್ರೇಮಿ- ಜನರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ : ಪ್ರೊ.ಕರಿಗೂಳಿ….

ಗಂಗಾವತಿ ತಾಲೂಕಿನ ಶ್ರೀರಾಮನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ಅಬ್ದುಲ್ ಕಲಾಂ ರವರ ಜಯಂತಿ ಅಂಗವಾಗಿ ಸರಣಿ ಕಾರ್ಯಕ್ರಮಗಳ ಸಡಗರ ಸಂಭ್ರಮದಿಂದ ಜರುಗಿದವು.ನನ್ನ ಜನುಮದಿನಕ್ಕೂ ಹಾಗೂ ಪುಣ್ಯತಿಥಿಗೂ ರಜೆ ನೀಡಬೇಡಿ ನನ್ನನ್ನು ಹಾಗೂ ದೇಶವನ್ನು ಪ್ರೀತಿಸಿ ಗೌರವಿಸುವುದಾದರೆ ಹೆಚ್ಚು ಕೆಲಸ ಮಾಡಿ ಎಂದು ಹೇಳುವುದರ ಮೂಲಕ ಯುವಕರಿಗೆ ಚಿರಸ್ಫೂರ್ತಿ ಯಾಗಿರುವ ಡಾ. ಕಲಾಂ ರ ಆಶಯದಂತೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು *ನಮ್ಮ ಕಾಲೇಜು ಸ್ವಚ್ಛ ಕಾಲೇಜು* ಅಭಿಯಾನದ ಅಡಿಯಲ್ಲಿ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ 15.10.2025 ರಂದು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ದೈನಂದಿನ ತರಗತಿಗಳ ನಂತರ ಬೆಳಿಗ್ಗೆ 11:30ಕ್ಕೆ ಕಾಲೇಜು ಆವರಣ ಸ್ವಚ್ಛತೆಗಾಗಿ ಶ್ರಮದಾನ ಕಾರ್ಯಕ್ರಮ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸೇರಿ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ಖುಷಿಯಿಂದ ಪಾಲ್ಗೊಡು ಕಾಲೇಜಿನ ಮೈದಾನವನ್ನು ಸ್ವಚ್ಛಗೊಳಿಸಿದರು. ನಂತರ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಅಶೋಕ ಹಾಗೂ ಶಿವರಾಜಕುಮಾರ್ ಅವರನ್ನು ಕಾಲೇಜಿನ ಆವರಣ ಸುಂದರವಾಗಿ ಕಾಣುವಂತೆ ಮಾಡಲು ಸ್ವಯಂಪ್ರೇರಣೆಯಿಂದ ಯಂತ್ರೋಪಕರಣದ ಮುಖಾಂತರ ಸ್ವಚ್ಛಗೊಳಿಸಿದ್ದಕ್ಕಾಗಿ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು ಡಾ. ಸರಫರಾಜ್ ಅಹ್ಮದ್ ಅವರು ಸನ್ಮಾನ ಮಾಡಿದರು.ಕಾಲೇಜು ಸ್ವಚ್ಛತಾ ಕಾರ್ಯಕ್ರಮ ಮುಗಿದ ನಂತರ ಕಾಲೇಜಿನ ಮೈದಾನದಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಶ್ರೀರಾಮನಗರದ ಸಹಯೋಗದಲ್ಲಿ ಅಂತರಾಷ್ಟ್ರೀಯ ಕೈತೊಳೆಯುವ ದಿನದ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಆಶಾ ಬೇಗಂ ಅವರು ಸೂಕ್ಷ್ಮಾಣುಜೀವಿ ನಮ್ಮ ಕೈ ಮೂಲಕ ದೇಹವನ್ನು ಸೇರಿ ಕಾಲರಾ, ಟೈಫಾಯ್ಡ್, ಹೆಪಿಟೈಟಸ್ ಬಿ, ರಕ್ತಹೀನತೆ, ಅಪೌಷ್ಟಿಕತೆಗೆ ಯಾವ ರೀತಿಯಲ್ಲಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂಬುದನ್ನು ಕಾಲೇಜು ವಿದ್ಯಾರ್ಥಿಗಳಿಗೆ ತಿಳಿಸಿದರು ಹಾಗೂ ದೈನಂದಿನ ಜೀವನದಲ್ಲಿ ಕೈ ತೊಳೆಯುವ ಆರು ಹಂತಗಳನ್ನು ಪ್ರಾತ್ಯಕ್ಷಿತೆ ಮೂಲಕ ವಿವರಿಸಿದರು. ನಂತರ ಅದೇ ಕ್ರಮದಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಕೈ ತೊಳೆಯುವ ಮುಖಾಂತರ ಅಂತರಾಷ್ಟ್ರೀಯ ಕೈತೊಳೆಯುವ ದಿನವನ್ನು ಆಚರಿಸಲಾಯಿತು. ಡಾ. ಎಪಿಜೆ ಅಬ್ದುಲ್ ಕಲಾಂ ರವರ ಜಯಂತಿ ಆಚರಣೆ. ನಂತರ ಕಾಲೇಜಿನ ಸಭಾಂಗಣದಲ್ಲಿ ಮಾಜಿ ರಾಷ್ಟ್ರಪತಿಗಳಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜಯಂತಿಯ ಅವರ ಜೀವನ ಸಾಧನೆ ಕುರಿತು ಪ್ರಾಚಾರ್ಯ ಕರಿಗೋಳ ಮಾತನಾಡಿದರು.

