ವಾಸು ತಜ್ಞ ಡಾ, ಮಂಜುನಾಥ ಬಸಣ್ಣ ಕುರುಗೋಡ ಹಾಗೂ ಹಾಗೂ ಸಿವಿಲ್ ಇಂಜಿನಿಯರ್ ಶ್ರೀನಾಥ್ ದಾಯಿಫುಲ್ಲೆ ಇವರಿಗೆ ಅದ್ದೂರಿ ಸನ್ಮಾನ,,,,,

ವಾಸು ತಜ್ಞ ಡಾ, ಮಂಜುನಾಥ ಬಸಣ್ಣ ಕುರುಗೋಡ ಹಾಗೂ ಹಾಗೂ ಸಿವಿಲ್ ಇಂಜಿನಿಯರ್ ಶ್ರೀನಾಥ್ ದಾಯಿಫುಲ್ಲೆ ಇವರಿಗೆ ಅದ್ದೂರಿ ಸನ್ಮಾನ,,,,,

ದೇವಾಲಯಗಳ ನಗರ ಕನಕಗಿರಿ ಪಟ್ಟಣದಲ್ಲಿ ಶಿವಯೋಗದ ದಿವ್ಯ ದಿನವಾದ ಇಂದು ಶ್ರೀ ಪಾಂಡುರಂಗ ರುಕ್ಮೀಣಿ ದೇವಸ್ಥಾನದಲ್ಲಿ ಶ್ರೀ ಪಾಂಡುರಂಗ ಟ್ರಸ್ಟ್ ಕಮಿಟಿ ಹಾಗು ಭಾವಸಾರ ಕ್ಷತ್ರಿಯ ಸಮಾಜದ ಪರವಾಗಿ ವಾಸ್ತು ತಜ್ಞರಾದ ಶ್ರೀ ಮಂಜುನಾಥ ಬಸಣ್ಣ ಕುರುಗೋಡ ಇವರನ್ನು ಬೆಂಗಳೂರು ಖಾಸಗಿ ಸಂಸ್ಥೆಯಿಂದ, ಗೌರವ ಡಾಕ್ಟ ರೇಟ ಹಾಗು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರಕಿದ ಪ್ರಯುಕ್ತ ಭಾವಸಾರ ಸಮಾಜದಿಂದ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು ಈ ಶುಭ ಸಮಾರಂಭದಲ್ಲಿ ಭಾವಸಾರ ಕ್ಷತ್ರಿಯ ಶ್ರೀ ಪಾಂಡುರಂಗ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಶ್ರೀ ಸುರೇಶ ವಿ.ಬೊಂದಾಡೆ ಉಪಾಧ್ಯಕ್ಷರಾದ ಶ್ರೀ ಪ್ರಭಾಕರ್ ಅಚ್ಚಲಕರ ಕಾರ್ಯದರ್ಶಿ ಗಳಾದ ಶ್ರೀ ಲಕ್ಷ್ಮಣ ಟಿ.ಧಾಯಪುಲ್ಲೆ ಮತ್ತು ಭಾವಸಾರ ಸಮಾಜದ ಅಧ್ಯಕ್ಷರಾದ ಶ್ರೀ ಶಶಿಧರಬೊಂದಾಡೆ(ರೈಮಂಡ ಟೈಲರ್)ಉಪಾಧ್ಯಕ್ಷರಾದ ಶ್ರೀ ಗುರುರಾಜ ಧಾಯಪುಲ್ಲೆ ಹಾಗು ಶ್ರೀ ಪಾಂಡುರಂಗ ಭಜನಾ ಸಂಘದ ಅಧ್ಯಕ್ಷರಾದ ಶ್ರೀ ಶಂಕರರಾವ್ ಮಧೋಳಕರ ಹಾಗೂ ಸಮಾಜದ ಹಿರಿಯರಾದ ಶ್ರೀ ಅನಂತರಾವ್ ಧಾಯಪುಲ್ಲೆ,ಶ್ರೀ ಅಂಬಾಜಿರಾವ ಬೊಂದಾಡೆ,ಶ್ರೀ ಲಕ್ಷ್ಮಣ ಬೊಂದಾಡೆ,ಶ್ರೀ ಯಮನೂರಪ್ಪ ಎನ್ ಬೊಂದಾಡೆ,ಶ್ರೀ ಸುರೇಶ ಲೋಖರೆ ಮುಸಲಾಪುರ,ಶ್ರೀ ರಾಮಕೃಷ್ಣ ಹಂಚಾಟೆ,ಭಾವಸಾರ ತರುಣ ಸಂಘದ ಶ್ರೀ ಶಿವಕುಮಾರ್ ಧಾಯಪುಲ್ಲೆ ಶ್ರೀ ಪ್ರಕಾಶ ಧಾಯಪುಲ್ಲೆ ಇತರರು ಭಾಗವಹಿಸಿದ್ದರು

ಸಭೆಯಲ್ಲಿ ಹಿರಿಯರಾದ ಅಂಬಾಜಿರಾವ ಬೊಂದಾಡೆ ಇವರು ವಾಸ್ತು ತಜ್ಞರಾದ ದಿ:ಕೆ.ಬಸ್ಸಣ್ಣ ಯಜಮಾನರು ಇವರ ವಾಸ್ತು ಸೇವೆ ನೆನೆಯುವ ಮೂಲಕ ದೇವಸ್ಥಾನ ಹಾಗೂ ಭಾವಸಾರ ಸಮುದಾಯ ಭವನಕ್ಕೆ ದಿವಂಗತರನ್ನು ಕೊಂಡಾಡುವ ಮೂಲಕ ಸಭೆಯಲ್ಲಿ ಮಾತನಾಡಿದರು ಹಾಗು ಗಂಗಾವತಿಯ ಭಾವಸಾರ ಸಮಾಜದ ಯುವಕರಾದ ಶ್ರೀನಾಥ ಧಾಯಪುಲ್ಲೆ ಸಿವಿಲ್ ಇಂಜಿನಿಯರ್ ಇವರಿಂದಲೂ ಭಾವಸಾರ ಸಮುದಾಯ ಭವನಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸಿದ ಪ್ರಯುಕ್ತ ಇವರಿಗೂ ಸಹ ಶ್ರೀ ಪಾಂಡುರಂಗ ರುಕ್ಮೀಣಿ ಟ್ರಸ್ಟ್ ಕಮಿಟಿ ಹಾಗು ಭಾವಸಾರ ಸಮಾಜದ ಪರವಾಗಿ ಸನ್ಮಾನಿಸಲಾಯಿತು ಸನ್ಮಾನಿತರು ಸಭೆಯಲ್ಲಿ ತಮ್ಮ ಅನಿಸಿಕೆ ತಿಳಿಸಿದರು ವಂದನೆಗಳೊಂದಿಗೆ ಸಭೆ ಮುಕ್ತಾಯ ವಾಯಿತು.

Leave a Reply

Your email address will not be published. Required fields are marked *